Home latest ಕೊಂಬಾರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಬ್ಬರ್ ಕಾರ್ಮಿಕರಿಂದ ಕೆ.ಎಫ್.ಡಿ.ಸಿ. ಲಾರಿ ತಡೆದು ಪ್ರತಿಭಟನೆ

ಕೊಂಬಾರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಬ್ಬರ್ ಕಾರ್ಮಿಕರಿಂದ ಕೆ.ಎಫ್.ಡಿ.ಸಿ. ಲಾರಿ ತಡೆದು ಪ್ರತಿಭಟನೆ

Hindu neighbor gifts plot of land

Hindu neighbour gifts land to Muslim journalist

ಕಡಬ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ಅಭಿವೃದ್ಧಿ ನಿಗಮದ ಮೂಜೂರು ಘಟಕದ ಕೊಂಬಾರು ಮಂಡೆಕರ ಬ್ಲಾಕ್ ನಲ್ಲಿ ಕೆ.ಎಫ್.ಡಿ.ಸಿ. ರಬ್ಬರ್ ಹಾಲು ಸಾಗಾಟದ ಲಾರಿಯನ್ನು ತಡೆ ಹಿಡಿದು ಕಾರ್ಮಿಕರು ಪ್ರತಿಭಟನೆ ನಡೆಸಿದ ಘಟನೆ ಜ.2೦ರಂದು ನಡೆದಿದೆ.


ವೇತನ ಪರಿಷ್ಕರಣೆ,ಮೂರ್ತೆ ಮಾಡಲು ರಬ್ಬರ್ ಮರಗಳನ್ನು ಕಡಿತಗೊಳಿಸುವುದು, ಬೇಡಿಕೆಗಳ ಈಡೇರಿಕೆಗೆ ಮಾತುಕತೆಗೆ ದಿನಾಂಕ ನಿಗದಿಗೊಳಿಸುವುದು ಮತ್ತು ಹದಿನೈದು ವರ್ಷಗಳಿಂದ ದುಡಿಯುತ್ತಿರುವ ರಬ್ಬರ್ ಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ರು ಲಾರಿಯನ್ನು ತಡೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವ ತನಕ ಲಾರಿಯನ್ನು ತಡೆಹಿಡಿಯಲಾಗುವುದು ಎಂದು ಕಾರ್ಮಿಕರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜಕೃಷ್ಣ,ಗಣೇಶ್ ಮಲ್ಲಿಕಟ್ಟೆ,ಶಿವ, ಮಹೇಂದ್ರ, ನಾಗರಾಜ್,ರಾಜಕೃಷ್ಣ ಓಟೆಕಜೆ,ಭಾಗಿನಾಥ್,ವಿಜಯಕುಮಾರ್ ಮೊದಲಾದವರು ಪಾಲ್ಗೊಂಡಿದ್ದಾರೆ.