Home Jobs Indian Army Recruitment 2022 : 3068 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Indian Army Recruitment 2022 : 3068 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ಸೆಂಟ್ರಲ್ ರಿಕ್ರೂಟ್‌ಮೆಂಟ್ ಸೆಲ್, ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಉದ್ಯೋಗವಕಾಶವಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 3068 ಹುದ್ದೆಗಳು ಖಾಲಿ ಇದ್ದು, ಟ್ರೇಡ್ಸ್‌ಮನ್ ಮೇಟ್‌ – 2313 ಹುದ್ದೆಗಳು, ಫೈರ್‌ಮ್ಯಾನ್ – 656 ಮತ್ತು ಜೂನಿಯರ್ ಆಫೀಸ್ ಅಸಿಸ್ಟೆಂಟ್ 99 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಇದುವರೆಗಿನ ಮಾಹಿತಿಯ ಪ್ರಕಾರ, ಈ ನೇಮಕಾತಿ ಪ್ರಕ್ರಿಯೆಯಿಂದ ವಿವಿಧ ವರ್ಗಗಳಲ್ಲಿ ಟ್ರೇಡ್ಸ್‌ಮೆನ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಸಾಮಾನ್ಯ ವರ್ಗದ 938 ಹುದ್ದೆಗಳು, ಇಡಬ್ಲ್ಯೂಎಸ್ ವರ್ಗದ 231 ಹುದ್ದೆಗಳು, ಒಬಿಸಿ ವರ್ಗಕ್ಕೆ 624, ಎಸ್‌ಸಿ ವರ್ಗಕ್ಕೆ 347 ಹುದ್ದೆಗಳು ಎಸ್ಟಿ ವರ್ಗಕ್ಕೆ 173 ಹುದ್ದೆಗಳಿವೆ. ಈ ಮೂಲಕ ಒಟ್ಟು 2313 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳ ಕುರಿತು ಹೇಳುವುದಾದರೆ, ಸಾಮಾನ್ಯ ವರ್ಗಕ್ಕೆ 236, ಇಡಬ್ಲ್ಯೂಎಸ್ ವರ್ಗಕ್ಕೆ 66, ಒಬಿಸಿ ವರ್ಗಕ್ಕೆ 177, ಎಸ್‌ಸಿ ವರ್ಗಕ್ಕೆ 98, ಎಸ್‌ಟಿ ವರ್ಗಕ್ಕೆ 49 ಹುದ್ದೆಗಳಿವೆ. ಈ ಮೂಲಕ ಒಟ್ಟು 656 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ಜೂನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳು , ಸಾಮಾನ್ಯ ವರ್ಗಕ್ಕೆ 40, ಇಡಬ್ಲ್ಯೂಎಸ್ ವರ್ಗಕ್ಕೆ 10, ಒಬಿಸಿ ವರ್ಗಕ್ಕೆ 27, ಎಸ್‌ಸಿ ವರ್ಗಕ್ಕೆ 15, ಎಸ್‌ಟಿ ವರ್ಗಕ್ಕೆ 7 ಹುದ್ದೆಗಳಿವೆ. ಈ ಮೂಲಕ ಒಟ್ಟು 99 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ವೇತನ :
ಟ್ರೇಡ್ಸ್‌ಮನ್ ಹುದ್ದೆಗೆ ತಿಂಗಳಿಗೆ 18000 ರೂ.ನಿಂದ 56900 ರೂ., ಫೈರ್‌ಮ್ಯಾನ್ ಹುದ್ದೆಗೆ ತಿಂಗಳಿಗೆ 19900 ರಿಂದ 63200 ರೂ. ಮತ್ತು ಜೂನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದವರಿಗೆ 19900 ರಿಂದ 63200 ರೂ. ವೇತನ ನೀಡಲಾಗುವುದು.

ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ದಿನಾಂಕ ಇತ್ಯಾದಿ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. “ಇತ್ತೀಚಿನ ಸುದ್ದಿ” ವಿಭಾಗದ ಅಡಿಯಲ್ಲಿ AOC ಯ ಅಧಿಕೃತ ವೆಬ್‌ಸೈಟ್ ಅಂದರೆ www.aocrecruitment.gov.in ನಲ್ಲಿ ಹೊಸ ಅಪ್ಡೇಟ್ ಗಳನ್ನು ವೀಕ್ಷಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.