Home latest ಶಾರುಖ್ ಸಿನಿಮಾ ಶೂಟಿಂಗ್‌ಗೆ ನುಗ್ಗಿದ ಹಿಂದೂ ಸಂಘಟನೆ ಸದಸ್ಯರು | ಹನುಮಾನ್ ಚಾಲಿಸಾ ಪಠಿಸುತ್ತಾ ಪ್ರತಿಭಟನೆ

ಶಾರುಖ್ ಸಿನಿಮಾ ಶೂಟಿಂಗ್‌ಗೆ ನುಗ್ಗಿದ ಹಿಂದೂ ಸಂಘಟನೆ ಸದಸ್ಯರು | ಹನುಮಾನ್ ಚಾಲಿಸಾ ಪಠಿಸುತ್ತಾ ಪ್ರತಿಭಟನೆ

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್‌ನ ಪಠಾನ್‌ ಸಿನಿಮಾ ಈಗ ಎಲ್ಲರ ಬಾಯಿಮಾತಾಗಿ ಹೋಗಿದೆ. ಈ ಸಿನಿಮಾದ ಒಂದು ಹಾಡು ಹೊರ ಬಂದಿದ್ದೇ ಬಂದಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಹರಿಹಾಯ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಕೇಸರಿ ಬಣ್ಣ ಹಾಗೂ ಸಾಂಗ್‌ ಈ ಸಿನಿಮಾದ ಮೂಲ ವಿವಾದವಾಗಿದೆ. ಈಗ ಇದರ ಮುಂದುವರಿದ ಭಾಗವಾಗಿ ಹಿಂದೂ ಸಂಘಟನೆಗಳ ಶಾರುಖ್ ಖಾನ್‌ರ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿರುವ ಸೆಟ್‌ ಮೇಲೆ ದಾಳಿ ಮಾಡಿದ್ದು, ಸೆಟ್‌ನ ಹೊರಗೆ ನಿಂತು ಪ್ರತಿಭಟನೆ ನಡೆಸಿದ್ದಾರೆ.

ಶಾರುಖ್ ಖಾನ್ ನಟಿಸುತ್ತಿರುವ ‘ಡಂಕಿ’ ಸಿನಿಮಾದ ಚಿತ್ರೀಕರಣ ನಿನ್ನೆ (ಶುಕ್ರವಾರ) ಮಧ್ಯಪ್ರದೇಶದ ಜಬಲ್‌ಪುರದ ಧೂಧಾರ್ ಜಲಪಾತದ ಬಳಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡದಿದೆ. ಆ ಸಮಯದಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗ ದಳ ಸೇರಿದಂತೆ ಇನ್ನೂ ಕೆಲವು ಹಿಂದುಪರ ಸಂಘಟನೆಗಳ ಸದಸ್ಯರು ಹುನುಮಾನ್ ಚಾಲಿಸ ಹೇಳುತ್ತಾ ಸೆಟ್‌ ಮೇಲೆ ದಾಳಿ ಮಾಡಲು ಯತ್ನಿಸಿದರು. ಶಾರುಖ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಡಾ ಕೂಗಿದ್ದಾರೆ.

ಅನಂತರ ಪೊಲೀಸರ ಆಗಮನದಿಂದ ಪರಿಸ್ಥಿತಿ ತಿಳಿಯಾಯಿತಾದರೂ ಶೂಟಿಂಗ್‌ ನಡೆಯುತ್ತಿದ್ದ ಜಾಗದಲ್ಲಿ ಬಹುಸಮಯ ಹಿಂದು ಪರಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ಆದರೆ ಇಂದಿನ ಶೂಟಿಂಗ್‌ನಲ್ಲಿ ಶಾರುಖ್ ಖಾನ್ ಸೇರಿದಂತೆ, ಇತರೆ ಪ್ರಮುಖ ನಟರ್ಯಾರು ಭಾಗವಹಿಸಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದೇ ಸೆಟ್‌ನಲ್ಲಿ ಶಾರಖ್ ಖಾನ್ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.