Home latest H D Revanna: ರೇವಣ್ಣಗೆ ಜಾಮೀನು ಮಂಜೂರು – ಷರತ್ತುಗಳೇನು?

H D Revanna: ರೇವಣ್ಣಗೆ ಜಾಮೀನು ಮಂಜೂರು – ಷರತ್ತುಗಳೇನು?

Hindu neighbor gifts plot of land

Hindu neighbour gifts land to Muslim journalist

 

H D Revanna: ಹಾಸನ ಸಂಸದ ಹಾಗೂ ಮಗ ಪ್ರಜ್ವಲ್‌ ರೇವಣ್ಣ(Prajwal Revanna) ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣ(H D Revanna)ಗೆ ಕೊನೆಗೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು(Bail) ಮಂಜೂರು ಮಾಡಿದೆ.

 

ಹೌದು, ಇಂದು (ಮೇ.13) ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್​.ಡಿ ರೇವಣ್ಣವನ್ನು ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಇನ್ನು ಜಾಮೀನು ಸಿಕ್ಕರೂ ಸಹ ರೇವಣ್ಣ ಇಂದು ರಾತ್ರಿ ಜೈಲಿನಲ್ಲೇ ಕಳೆಯಬೇಕಾಗಿದೆ.  ಈಗಾಗಲೇ ಸಮಯ ಆಗಿದ್ದರಿಂದ ಕೋರ್ಟ್​ ಪ್ರಕ್ರಿಯೆಗಳು ನಾಳೆಗೆ ಮುಗಿಯಲಿವೆ. ಹೀಗಾಗಿ ರೇವಣ್ಣ ನಾಳೆ(ಮೇ 14) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಅದರೊಂದಿಗೆ ಮಾಜಿ ಸಚಿವ ಎಚ್‌ಡಿ ರೇವಣ್ಣಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

 

ಕೋರ್ಟ್ ಹೇಳಿದ್ದೇನು?

ರೇವಣ್ಣ ಸೂಚನೆ ಮೇರೆಗೆ ಅಪಹರಣವಾಗಿದೆ ಎಂಬುದಕ್ಕೆ ನ್ಯಾಯಾಲಯಕ್ಕೆ ಯಾವುದೇ ಸಾಕ್ಷ್ಯಾಧಾರ ಹಾಜರುಪಡಿಸಿಲ್ಲ. ರಿಮಾಂಡ್ ಅರ್ಜಿ ಸಲ್ಲಿಕೆ ವೇಳೆ ಹೇಳಿಕೆ ದಾಖಲಿಸಿದ ಪ್ರಸ್ತಾಪವಿಲ್ಲ. ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ಪ್ರಸ್ತಾಪವಿಲ್ಲ ಎಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖವಾಗಿದೆ.

ಷರತ್ತುಗಳೇನು?

* ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ರೇವಣ್ಣಗೆ ಸೂಚನೆ.

* ಕೋರ್ಟ್ ಸಾಕ್ಷಿ ನಾಶಕ್ಕೆ ಮುಂದಾಗಬಾರದು

* ಮಂಡ್ಯ ಜಿಲ್ಲೆಯ ಕೆಆರ್ ನಗರ ತಾಲೂಕಿಗೆ ಹೋಗಬಾರದು

* ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು

* ಎಸ್ಐಟಿ ತನಿಖೆಗೆ ಸಹಕರಿಸಬೇಕು