Home latest ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ತಿರುವು!! ಆಹಾರದಲ್ಲಿರಲಿಲ್ಲ ವಿಷ-ಕರುಳು ಹಾನಿ!? ಆ ರಾತ್ರಿ ಅಲ್ಲೇನಾಗಿತ್ತು-ತನಿಖೆ...

ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ತಿರುವು!! ಆಹಾರದಲ್ಲಿರಲಿಲ್ಲ ವಿಷ-ಕರುಳು ಹಾನಿ!? ಆ ರಾತ್ರಿ ಅಲ್ಲೇನಾಗಿತ್ತು-ತನಿಖೆ ಚುರುಕು!!

Hindu neighbor gifts plot of land

Hindu neighbour gifts land to Muslim journalist

ಕಾಸರಗೋಡು:ಹೊಸ ವರ್ಷದ ಮುನ್ನ ದಿನ ಹೋಟೆಲ್ ಒಂದರಿಂದ ಪಾರ್ಸೆಲ್ ತಂದ ಬಿರಿಯಾನಿ ಸೇವಿಸಿ ಅಸ್ವಸ್ಥಗೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಹೋಟೆಲ್ ಗೆ ಬೀಗ ಜಡಿದು, ಮಾಲೀಕ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿದೆ.

ಕಳೆದ ಡಿ.31 ರ ರಾತ್ರಿ ಕಾಲೇಜು ವಿದ್ಯಾರ್ಥಿನಿ, ಚೆಮ್ನಾಡಿನ ಠಕ್ಕಕ್ಲಾಯಿ ಗ್ರಾಮದ ನಿವಾಸಿ ಅಂಜುಶ್ರೀ ಬಿರಿಯಾನಿ ಸೇವಿಸಿ ಬಳಿಕ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಆಸ್ಪತ್ರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ತನಿಖೆ ನಡೆದು ಮೂವರ ಬಂಧನವಾಗಿದ್ದು,ಇದೀಗ ಪ್ರಾಥಮಿಕ ವರದಿ ಪ್ರಕರಣಕ್ಕೆ ತಿರುವು ನೀಡಿದೆ.ಆಹಾರದಲ್ಲಿನ ವಿಷ ಆಕೆಯ ಸಾವಿಗೆ ಕಾರಣವಲ್ಲ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಫಾರೆನ್ಸಿಕ್ ವೈದ್ಯರ ವರದಿಯ ಪ್ರಕಾರ ಆಕೆಗೆ ಜಾಂಡಿಸ್ ಇದ್ದು,ಯಕೃತ್ತಿನ ಒಂದು ಭಾಗ ಹಾನಿಯಾಗಿದ್ದು, ದೇಹದಲ್ಲಿ ವಿಷವು ಪತ್ತೆಯಾಗಿದೆ, ಆದರೆ ಅದು ಆಹಾರದಲ್ಲಿನ ವಿಷವಲ್ಲ ಎಂದು ಹೇಳಿದೆ. ಸದ್ಯ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ದೇಹದ ಒಳಾಂಗಗಳ ಮಾದರಿಗಳ ಪರೀಕ್ಷೆ ಸಹಿತ ಇನ್ನಿತರ ತನಿಖೆ ತೀವ್ರಗೊಂಡಿದ್ದು ದೇಹದ ಭಾಗಗಳು ಹಾನಿಯಾಗುವ ರೀತಿಯಲ್ಲಿ ಆ ರಾತ್ರಿ ಅಲ್ಲೇನಾಗಿತ್ತು ಎನ್ನುವ ಅನುಮಾನ ಕಾಡಿದ್ದು, ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.