Home latest Crime News: ವರದಕ್ಷಿಣೆ ನೀಡಿದರೆ ಮಾತ್ರ ಫಸ್ಟ್‌ನೈಟ್‌ ಎಂದ ಪತಿರಾಯ!!!

Crime News: ವರದಕ್ಷಿಣೆ ನೀಡಿದರೆ ಮಾತ್ರ ಫಸ್ಟ್‌ನೈಟ್‌ ಎಂದ ಪತಿರಾಯ!!!

Crime News

Hindu neighbor gifts plot of land

Hindu neighbour gifts land to Muslim journalist

Bengaluru News: ವರದಕ್ಷಿಣೆಗಾಗಿ ಮೊದಲ ರಾತ್ರಿಯನ್ನು ಕ್ಯಾನ್ಸಲ್‌ ಮಾಡಿದ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಇದೀಗ ಮಹಿಳಾ ಪೊಲೀಸ್‌ ಠಾಣೆಗೆ ದೂರನ್ನು ನೀಡಲಾಗಿದೆ. ಈ ಕುರಿತು ವಿವಾಹಿತೆ ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಣನಕುಂಟೆ ನಿವಾಸಿಯಾಗಿರುವ 27 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದು, ಪತಿ ಅವಿನಾಶ್‌ ಶರ್ಮಾ ಮತ್ತು ಆತನ ಕುಟುಂಬದವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಜೂನ್‌ 2, 2022 ರಂದು ಇವರಿಬ್ಬರ ಮದುವೆಯಾಗಿದ್ದು, ಮದುವೆಯಾದ ಸಮಯದಲ್ಲಿ ವರದಕ್ಷಿಣೆ ಬೇಡ ಎಂದು ಹೇಳಿದ್ದರು. ಆದರೆ ಗಂಡನ ಮನೆಗೆ ಹೋದ ದಿನವೇ 15 ಲಕ್ಷ ರೂಪಾಯಿ ಕೊಡುವುದಾಗಿ ತವರು ಮನೆಯವರು ಹೇಳಿದ್ದು, ಅದನ್ನು ಕೊಡದಿದ್ದರೆ ಫಸ್ಟ್‌ನೈಟ್‌ ನಡೆಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.

ಇದನ್ನು ಮಹಿಳೆ ತನ್ನ ಪೋಷಕರಿಗೆ ತಿಳಿಸಿದಾಗ ಸಮಯ ಬೇಕು ಹಣ ಕೊಡಲು ಎಂದು ಹೇಳಿ ಆ ಸಮಯದಲ್ಲಿ 5.8 ಲಕ್ಷ ರೂ. ನೀಡಿದ್ದರು. ಆದರೂ ಇದಕ್ಕೂ ತೃಪ್ತಿ ಪಡದ ಆರೋಪಿಗಳು ಇನ್ನೂ ಹತ್ತು ಲಕ್ಷ ಕೊಡದಿದ್ದರೆ ಮನೆಯಲ್ಲಿ ಇರಲು ಬಿಡಲ್ಲವೆಂದು ಹೇಳಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮಹಿಳೆ ಸ್ನಾನ ಮಾಡುವ ಸಂದರ್ಭದಲ್ಲಿ ಗಂಡನ ತಂದೆ ಇಣುಕಿ ನೋಡುವುದು, ಇದನ್ನು ಯಾರ ಬಳಿಯಾದರೂ ಹೇಳಿದರೆ ಮನೆಯಿಂದ ಹೊರಗೆ ಹಾಕುವುದಾಗಿ ಬೆದರಿಸಿದ್ದರೆಂದು ವರದಿಯಾಗಿದೆ.

ಇದನ್ನೂ ಓದಿ: Drought Relief: ರೈತರಿಗೆ ಭರ್ಜರಿ ಗುಡ್ ನ್ಯೂಸ್: ರೈತರ ಖಾತೆಗೆ 2 ಸಾವಿರ ರೂಪಾಯಿ ಬರ ಪರಿಹಾರ ಜಮೆ!?

ಮಗಳಿಗೆ ಈ ರೀತಿಯಾಗಿ ಕಿರುಕುಳ ನೀಡುವುದರ ಕುರಿತು ಪೋಷಕರು ವಿಚಾರಣೆ ಮಾಡಿದಾಗ ನಿಮ್ಮ ಮಗಳು ನಮಗೆ ಮಾರಾಟವಾಗಿದ್ದಾಳೆ, ಆಕೆ ನಾವು ಹೇಳಿದಂತೆ ಕೇಳಬೇಕು ಇಲ್ಲದಿದ್ದರೆ ಹದಿನೈದು ಲಕ್ಷ ಕೊಡಬೇಕು ಎಂಬ ಬೆದರಿಕೆ ಹಾಕಿದ್ದಾರೆ. ನಂತರ ಮಹಿಲೆ ತವರಿಗೆ ವಾಪಾಸಾಗಿದ್ದಾಳೆ. ಗಂಡನ ಮನೆಯಲ್ಲಿ ಇರುವ ತನ್ನ ದಾಖಲೆಗಳನ್ನು ಪಡೆಯಲು ಹೋದಾಗ ಹಣ ಕೊಟ್ಟರೆ ದಾಖಲೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದೀಗ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.