Home Interesting ಗೃಹಿಣಿಯರೇ ದೋಸೆ ಹುಯ್ದು ಹುಯ್ದು ಸುಸ್ತಾಗಿ ಹೋಗಿದ್ದೀರಾ ; ಹಾಗಿದ್ರೆ ನಿಮಗಾಗಿ ಬಂದಿದೆ ‘ದೋಸೆ ಪ್ರಿಂಟರ್’...

ಗೃಹಿಣಿಯರೇ ದೋಸೆ ಹುಯ್ದು ಹುಯ್ದು ಸುಸ್ತಾಗಿ ಹೋಗಿದ್ದೀರಾ ; ಹಾಗಿದ್ರೆ ನಿಮಗಾಗಿ ಬಂದಿದೆ ‘ದೋಸೆ ಪ್ರಿಂಟರ್’ | ಇದು ಯಾವ ರೀತಿ ದೋಸೆ ತಯಾರಿಸುತ್ತೆ ಎಂದು ಈ ವೀಡಿಯೋದಲ್ಲಿ ನೋಡಿ

Hindu neighbor gifts plot of land

Hindu neighbour gifts land to Muslim journalist

ಗೃಹಿಣಿಯರ ಕಷ್ಟ ಮಹಿಳೆಯರಿಗಷ್ಟೇ ತಿಳಿಯೋಕೆ ಸಾಧ್ಯ. ಅದೆಷ್ಟು ಹೊತ್ತು ದುಡಿದರೂ ಅಡುಗೆ ಮನೆ ಕೆಲಸ ಮಾತ್ರ ಮುಗಿಯೋದೇ ಇಲ್ಲ. ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದವರೆಗೂ, ಆಹಾರ ತಯಾರಿಸೋದ್ರಿಂದ ಹಿಡಿದು ಪಾತ್ರೆ ತೊಳೆಯೋವರೆಗೆ ಡ್ಯೂಟಿ ಆನ್ ಅಲ್ಲೇ ಇರುತ್ತದೆ. ಅದರಲ್ಲೂ ದೋಸೆ ಹುಯ್ಯೋದು ಅಂದ್ರೆ ಕೇಳೋದೇ ಬೇಡ. ಅದೇ ದಿನವಿಡೀ ರಾಮಾಯಣವಾಗಿ ಹೋಗುತ್ತೆ. ಗ್ಯಾಸ್ ಪಕ್ಕನೆ ನಿಂತುಕೊಂಡು ಒಂದಾದ ಮೇಲೆ ಒಂದೊಂದು ಹಾಕುತ್ತಲೆ ಇರಬೇಕು. ಇನ್ನೊಂದು ಕಡೆಯಿಂದ ತೆಗೆಯುತ್ತಾ ಇರಬೇಕು, ಇದರ ಕೆಲಸ ಒಂದೋ ಎರಡೋ ?

ಆದ್ರೆ, ಗೃಹಿಣಿಯರ ಕಷ್ಟ ಯಾರಿಗೆ ಅರ್ಥ ಆಗುತ್ತೋ ಬಿಡುತ್ತೋ. ಅಂತೂ ನಮ್ಮ ಯಂತ್ರಗಳನ್ನು ಆವಿಷ್ಕಾರಣೆ ಮಾಡೋರಿಗೆ ತಿಳಿಯುತ್ತೋ ಏನೋ. ಹಾಗಾಗಿ ಅವರಿಗೆ ತುಸು ಆರಾಮ ನೀಡಬಹುದಾದ ಹಲವು ಯಂತ್ರಗಳ ಆವಿಷ್ಕಾರ ಆಗಿದೆ. ಬಟ್ಟೆ ಒಗೆಯುವುದರಿಂದ ಹಿಡಿದು ಪಾತ್ರ ತೊಳೆಯುವವರಿಗೆ ಗೃಹಿಣಿಯರ ಸಾರಥಿಗಳಾಗಿ ಯಂತ್ರಗಳು ಬಂದು ನಿಂತಿವೆ. ಆ ನಂತರ ಹಲವು ಆಹಾರ ತಯಾರಿಸುವ ಯಂತ್ರಗಳು ಮನೆಗೆ ಕಾಲಿಟ್ಟಿವೆ. ಅಂದು ಚಪಾತಿ, ರೊಟ್ಟಿ ತಯಾರಿಸುವ ಯಂತ್ರ ಸಿದ್ದವಾಗಿತ್ತು. ಇದೀಗ ಬಂದಿದೆ ಮಹಿಳೆಯರ ಕೆಲಸ ಕಮ್ಮಿ ಮಾಡೋ  “ದೋಸಾ ಪ್ರಿಂಟರ್​” !

ತಂತ್ರಜ್ಞಾನವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಜನರ ಜೀವನವನ್ನು ಸುಲಭಗೊಳಿಸಲು ಹೊಸ ಆವಿಷ್ಕಾರ ನಡೆಯುತ್ತಿದ್ದು, ಎಂದಿಗೂ ಊಹಿಸದ ಯಂತ್ರಗಳು ಮತ್ತು ಗ್ಯಾಜೆಟ್​ಗಳು ಬರುತ್ತಿವೆ. ಅದರಂತೆ ಇದೀಗ ಹೊಸದಾಗಿ ದೋಸೆ ಮಾಡಲೆಂದೆ ಬಂದಿದೆ  “ದೋಸಾ ಪ್ರಿಂಟರ್​”. ಸಾಮಾನ್ಯ ಪ್ರಿಂಟರ್​ನಂತೆ ಅದು ಗರಿಗರಿಯಾದ ದೋಸೆಗಳನ್ನು ಮುದ್ರಿಸಿಕೊಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಈ ಯಂತ್ರದ ವೀಡಿಯೊ ವೈರಲ್​ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ವಿಡಿಯೋದಲ್ಲಿ, ಒಬ್ಬಾಕೆ ಯಂತ್ರದ ಒಂದು ಬದಿಯಲ್ಲಿ ದೋಸೆ ಹಿಟ್ಟನ್ನು ಸುರಿಯುತ್ತಾಳೆ. ನಂತರ, ಅವಳು ದೋಸೆಯ ದಪ್ಪವನ್ನು ನಿಗದಿ ಮಾಡುವ ಆಯ್ಕೆ ಅನುಸರಿಸಿ, ತನಗೆ ಬೇಕಾದ ದೋಸೆಯ ಸಂಖ್ಯೆಯನ್ನು ನಿಗದಿಪಡಿಸುತ್ತಾಳೆ. ಎಲ್ಲಾ ಆಯ್ಕೆಯ ಬಳಿಕ ಉತ್ತಮ ಪ್ರಿಂಟ್ ನೊಂದಿಗೆ ರೆಡಿ ಆಗಿ ಬರುತ್ತೆ ಗಮ ಗಮ ದೋಸೆ.

ಜಸ್ಟ್ ನೀವೂ ಅಕ್ಕಿ ಕಡಿದು ದೋಸೆ ಹಿಟ್ಟು ರೆಡಿ ಮಾಡಿದ್ರೆ ಆಯ್ತು. ದೋಸೆ ಪ್ರಿಂಟರ್ ಮಾತ್ರ ಮಹಿಳೆಯರ ಹೆಲ್ಪರ್ ಥರ ತಾನಾಗಿಯೇ ಸುಲಭವಾಗಿ ದೋಸೆ ರೆಡಿ ಮಾಡುತ್ತೆ. ಅದರಲ್ಲಿ ಇನ್ನೂ ಏನೇನು ವಿಶೇಷತೆ ಹೊಂದಿದೆ ಎಂಬುದನ್ನು ಈ ವೀಡಿಯೋದಲ್ಲಿ ನೋಡಿ..

https://twitter.com/NaanSamantha/status/1562133756923633664?s=20&t=oa0lUlSueRMtyrY5rGMpng