Home latest DIY Hacks : ಪಾತ್ರೆ ತೊಳೆಯುವ ಲಿಕ್ವಿಡ್ ಸುಲಭ ರೀತಿಯಲ್ಲಿ ನೀವೇ ಮನೆಯಲ್ಲಿ ಮಾಡಿ |...

DIY Hacks : ಪಾತ್ರೆ ತೊಳೆಯುವ ಲಿಕ್ವಿಡ್ ಸುಲಭ ರೀತಿಯಲ್ಲಿ ನೀವೇ ಮನೆಯಲ್ಲಿ ಮಾಡಿ | ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Hands washing a plate

Hindu neighbor gifts plot of land

Hindu neighbour gifts land to Muslim journalist

ಪ್ರತಿ ಮನೆಯ ಹೆಂಗೆಳೆಯರು ಬಳಸುವ ಪಾತ್ರೆ ತೊಳೆಯುವ ಡಿಶ್ ಬಾರ್ ಗಳು, ಹೆಚ್ಚು ಕೆಮಿಕಲ್ (ರಾಸಾಯನಿಕ) ಗಳಿಂದ ಕೂಡಿದ್ದು, ಮಾನವನ ದೇಹಕ್ಕೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಪರಿಹಾರವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ಪಾತ್ರೆ ತೊಳೆಯುವ ದ್ರವಗಳನ್ನು ತಯಾರಿಸಬಹುದಾಗಿದೆ.

ನಾವು ಬಳಸುವ ಸೋಪುಗಳು ಬಟ್ಟೆ, ಇಲ್ಲವೇ ಪಾತ್ರೆ ತೊಳೆಯುವ ಡಿಶ್ ವಾಶ್ ಬಾರ್ ಗಳು ಹೆಚ್ಚು ನೊರೆ ಬಂದರೆ ಉತ್ತಮ ಗುಣಮಟ್ಟದ್ದು ಎಂಬ ತಪ್ಪು ಕಲ್ಪನೆಗಳು ಹೆಚ್ಚಿನವರಿಗಿದೆ. ಜೊತೆಗೆ ನೊರೆ ಬಾರದೆ ಹೋದರೆ ಕಳಪೆ ಎಂಬ ಭಾವನೆಯು ಇದೆ.

ಆದರೆ ಸೋಪುಗಳಲ್ಲಿ ಬಳಸುವ ಅನೇಕ ಕೆಮಿಕಲ್ ಆಧರಿಸಿ ಕೆಲವು ಹೆಚ್ಚು ನೊರೆ, ಕೆಲವು ಕಮ್ಮಿ ನೊರೆಯನ್ನು ಹೊಂದಿರುತ್ತದೆ. ಈ ನೈಸರ್ಗಿಕ ಪಾತ್ರೆ ತೊಳೆಯುವ ದ್ರವವು ಸಾಮಾನ್ಯವಾಗಿ ಕೊಳೆಯನ್ನು ಸುಲಭವಾಗಿ ಮತ್ತು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಜೊತೆಗೆ ಇದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾಗದು.

ಪಾತ್ರೆಗಳನ್ನು ತೊಳೆಯಲು ಒಂದು ಕಪ್ ಅಂಟುವಾಳ ಕಾಯಿ , ಎರಡು ಕಪ್ ನೀರು, ¼ ಕಪ್ ಕಲ್ಲು ಉಪ್ಪು,
7 ನಿಂಬೆಹಣ್ಣುಗಳು, ನಾಲ್ಕು ಟೇ ಬಲ್ಸ್ಪೂನ್ ಬಿಳಿ ವಿನೆಗರ್​ ಬಳಸಿ ಪಾತ್ರೆಗಳನ್ನು ಹೊಳೆಯುವಂತೆ ಮಾಡಬಹುದು.

ಮೊದಲು ಅಂಟುವಾಳ ಕಾಯಿ ಬೀಜಗಳನ್ನು 8-9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಈ ಅಂಟುವಾಳ ಕಾಯಿ ಬೀಜಗಳನ್ನು ಹಾಕಿ ಕುದಿಸಿ ಅದಕ್ಕೆ ನಿಂಬೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಬೇಕು. ನಂತರ ಮಿಶ್ರಣವನ್ನು ಗ್ಯಾಸ್​ನಿಂದ ತೆಗೆದು, ಅದನ್ನು ತಣ್ಣಗಾದಾಗ ಬೀಜಗಳನ್ನು ಮಾತ್ರ ಹೊರಗೆ ತೆಗೆದು, ಅದರಿಂದ ಸಿಪ್ಪೆ ತೆಗೆಯಬೇಕು.

ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ನುಣ್ಣಗೆ ಮಾಡಿಕೊಂಡು, ಮತ್ತೊಂದು ಪಾತ್ರೆಗೆ ಹಾಕಿ ಅದಕ್ಕೆ ಕಲ್ಲು ಉಪ್ಪು ಮತ್ತು ಅರ್ಧ ಕಪ್ ಬಿಳಿ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಐದಾರು ನಿಮಿಷಗಳ ಕಾಲ ಕುದಿಸಬೇಕು. ಕುದಿಸಿ ಆರಿಸಿದ ಬಳಿಕ ಮಿಶ್ರಣವನ್ನು ಪಾತ್ರೆ ತೊಳೆಯುವ ಲಿಕ್ವಿಡ್​ ಇದ್ದ ಬಾಟಲ್​ಗೆ ಹಾಕಿಡಬಹುದು.

ನೈಸರ್ಗಿಕವಾಗಿ ಪಾತ್ರೆ ತೊಳೆಯುವ ಸೋಪನ್ನು ಕೂಡ ತಯಾರಿಸಬಹುದು.
ಪಿಯರ್ಸ್ ಸೋಪು ಅಥವಾ ಸೋಪ್ ಬೇಸ್, ಅರಿಶಿಣ ಪುಡಿ, ಬೇವಿನ ಸೊಪ್ಪು ಬಳಸಿ ನೈಸರ್ಗಿಕವಾಗಿ ಸೋಪನ್ನು ತಯಾರಿಸಬಹುದು.

ಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಇದನ್ನು ಸೋಸಿ ರಸ ತೆಗೆದು ಸೋಪನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಬೇಕು. ಒಂದು ಬಾಣಲೆಗೆ ಕಾಲು ಭಾಗ ನೀರು ಹಾಕಿ ಕುದಿಸಬೇಕು. ಬಾಣಲೆಯಲ್ಲಿ ಇನ್ನೊಂದು ಚಿಕ್ಕ ಪಾತ್ರೆ ಇಟ್ಟು ಇದಕ್ಕೆ ಸೋಪ್ ಚೂರುಗಳನ್ನು ಹಾಕಿ ಕರಗಿಸಿಕೊಳ್ಳಬೇಕು. ಸೋಪು ಕರಗಿದ ನಂತರ ಅರಿಶಿಣ ಮತ್ತು ಬೇವಿನ ರಸ ಹಾಕಿ ಮಿಕ್ಸ್ ಮಾಡಿ 1-2 ನಿಮಿಷ ಬಿಸಿ ಮಾಡಿ ಕೆಳಗಿಳಿಸಬೇಕು.

ಈಗ ಬೇಕಾದ ಆಕಾರಗಳ ಪ್ಲಾಸ್ಟಿಕ್ ಕಪ್ಗಳಿಗೆ ಕೊಬ್ಬರಿ ಎಣ್ಣೆ ಸವರಿ ಮಿಶ್ರಣವನ್ನು ಕಪ್’ ನಲ್ಲಿ ಬಿಟ್ಟು ಫ್ರೀಜರ್’ನಲ್ಲಿ ಇಟ್ಟು ಸೋಪ್ ಗಟ್ಟಿಯಾದ ಮೇಲೆ ಚಾಕು ಸಹಾಯದಿಂದ ಕಪ್’ನಿಂದ ಬೇರ್ಪಡಿಸಬಹುದು. ಹೀಗೆ ಸೋಪನ್ನು ತಯಾರಿಸಬಹುದು.
ನೈಸರ್ಗಿಕವಾಗಿ ಮನೆಯಲ್ಲೆ ಪಾತ್ರೆ ತೊಳೆಯುವ ದ್ರವ ಇಲ್ಲವೇ ಸಾಬೂನು ಬಳಸಿ ಪಾತ್ರೆಗಳನ್ನು ಹೊಳೆಯುವಂತೆ ಮಾಡಬಹುದು. ಇದರಿಂದ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.