Home Interesting Elephant death: ಅರ್ಜುನನ ಬೆನ್ನಲ್ಲೇ ಮತ್ತೊಂದು ಆನೆ ಸಾವು !!

Elephant death: ಅರ್ಜುನನ ಬೆನ್ನಲ್ಲೇ ಮತ್ತೊಂದು ಆನೆ ಸಾವು !!

Elephant death

Hindu neighbor gifts plot of land

Hindu neighbour gifts land to Muslim journalist

Elephant death: ರಾಜ್ಯದ ಜನರೆಲ್ಲರೂ ‘ದಸರಾ ಕ್ಯಾಪ್ಟನ್’ ಅರ್ಜುನನ ಸಾವಿನ ದುಃಖದಿಂದ ಇನ್ನೂ ಹೊರಬಂದಿಲ್ಲ. ಆದರೆ ಈ ನಡುವೆಯೇ ಮತ್ತೊಂದು ಪ್ರಮಾದ ನಡೆದು ಹೋಗಿದ್ದು, ಅರ್ಜುನ ಬೆನ್ನಲ್ಲೇ ಮತ್ತೊಂದು ಆನೆ ಸಾವನ್ನಪ್ಪಿದೆ(Elephant death)

ಹೌದು, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ (Arjuna), ವಿವಿಧೆಡೆ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆ ‘ಅರ್ಜುನ’, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡಿದೆ. ಇದೀಗ ಈ ಬೆನ್ನಲ್ಲೇ ಕನಕಪುರ(Kanakapura) ಸಮೀಪದ ಕೋಡಿಹಳ್ಳಿಯಲ್ಲಿ ಜಮೀನ್ದಾರನಾದ ನಂಜೇಗೌಡ(Nanjegowda) ಎಂಬುವವರು ತಮ್ಮ ಹೊಲದಲ್ಲಿನ ಬೆಳೆಯನ್ನು ತಿನ್ನಲು ಬಂದಿದ್ದ ಆನೆಯನ್ನು ಸಾಯಿಸಿ ಜಮೀನಿನಲ್ಲಿಯೇ ಹೂತು ಹಾಕಿದ ದುರ್ಘಟನೆ ನಡೆದಿದೆ.

ಕಾಡಂಚು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇರುವಂತಹ ಅನೇಕ ಬೆಳೆಗಾರರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಿ ಆದರೆ ಇದರಿಂದ ಯಾವುದೇ ರೀತಿಯ ಪ್ರಾಣ ಹಾನಿಗಳು ಆಗಬಾರದು, ಪ್ರಾಣಿ ಪಕ್ಷಿಗಳು ಕೂಡ ಸಾಯಬಾರದು ಎಂಬ ನಿಯಮವನ್ನು ಹೇಳಿದೆ. ಆದರೆ ಕನಕಪುರದ ರೈತನೊಬ್ಬ ತನ್ನ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಜಮೀನಿನ ಸುತ್ತಲೂ ತಂತಿ ಬೇಲಿಯನ್ನು ಅಳವಡಿಕೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅದಕ್ಕೆ ವಿದ್ಯುತ್ ಕನೆಕ್ಷನ್ ಕೂಡ ನೀಡಿದ್ದಾನೆ. ದುರದೃಷ್ಟವಶಾತ್ ತಂತಿ ಬೇಲಿಯನ್ನು ನೋಡದೇ ರೈತನ ಜಮೀನಿನತ್ತ ನುಗ್ಗಿಬಂದ ಒಂಟಿ ಸಲಗ ವಿದ್ಯುತ್ ಸ್ಪರ್ಷದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಇದನ್ನು ಓದಿ: V Somanna: ಕಾಂಗ್ರೆಸ್ ಸೇರ್ಪಡೆ ವಿಚಾರ- ಮಹತ್ವದ ಹೇಳಿಕೆ ಕೊಟ್ಟ ವಿ ಸೋಮಣ್ಣ!!

ಈ ನಡುವೆ ರಾಜ್ಯದಲ್ಲಿ ಅರ್ಜುನ ಆನೆಯ ಸಾವಿನ ಸುದ್ದಿ ಹರಡಿತ್ತು. ಅರಣ್ಯ ಇಲಾಖೆಯ ಪ್ರಮಾದಕ್ಕೆ ಭಾರೀ ಆಕ್ರೋಶ ಎದುರಾಗಿತ್ತು. ಇದನ್ನು ಮನಗಂಡ ರೈತ ಆನೆ ಸತ್ತ ವಿಚಾರ ತಿಳಿದರೆ ತನಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದು ಮೃತ ಆನೆಯನ್ನು ತಮ್ಮದೇ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಿದ್ದಾನೆ.

ಇಷ್ಟೆಲ್ಲ ಆದರೂ ನಂಜೇಗೌಡನ ಅದೃಷ್ಟ ಕೆಟ್ಟಿತ್ತು ಎಂದು ಕಾಣುತ್ತದೆ. ಏಕೆಂದರೆ ಯಾರೋ ಸ್ಥಳೀಯರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆನೆಯ ಮೃತ ದೇಹವನ್ನು ತೆಗೆದು ಅದನ್ನು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಬಳಿಕ ವಿದ್ಯುತ್ ತಂತಿ ತಗುಲಿ ಸುಮಾರು 14 ವರ್ಷದ ಗಂಡನೇ ಮೃತಪಟ್ಟಿರುವುದು ತಿಳಿದುಬಂದಿದೆ. ನಂತರ ಮರಳಿ ಆನೆಯ ಅಂತ್ಯಕ್ರಿಯೆ ಮಾಡಲಾಗಿದ್ದು, ನಂಜೇಗೌಡರ ಮೇಲೆ ಪ್ರಕರಣ ದಾಖಲಾಗಿದೆ.