Home latest Free Bus Service: ಮದ್ಯ ಕೊಂಡೊಯ್ಯಲು ಬಿಡದ ಬಸ್ ನಿರ್ವಾಹಕನ ಮೇಲೆ ಸಿಟ್ಟಿಗೆದ್ದ ಮಹಿಳೆಯರು! ಪೊಲೀಸ್‌...

Free Bus Service: ಮದ್ಯ ಕೊಂಡೊಯ್ಯಲು ಬಿಡದ ಬಸ್ ನಿರ್ವಾಹಕನ ಮೇಲೆ ಸಿಟ್ಟಿಗೆದ್ದ ಮಹಿಳೆಯರು! ಪೊಲೀಸ್‌ ದೂರು ದಾಖಲು

Free Bus Service

Hindu neighbor gifts plot of land

Hindu neighbour gifts land to Muslim journalist

Free Bus Service: ಈಗ ಮಹಿಳೆಯರಿಗೆ ಉಚಿತ ಭಾಗ್ಯದ ಅವಕಾಶ. ಅದರಲ್ಲಿ ಕೂಡಾ ಶಕ್ತಿ ಯೋಜನೆಯ ಪ್ರಯೋಜನವನ್ನು ಮಹಿಳೆಯರು ಭರಪೂರ ಪಡೆಯುತ್ತಲೇ ಇದ್ದಾರೆ. ಎಲ್ಲಿ ನೋಡಿದರೂ ಫ್ರೀ ಬಸ್‌ (Free Bus Service) ಎಂದು ಮಹಿಳೆಯರು ತಮಗಿಷ್ಟ ಬಂದ ಕಡೆ ಬಸ್‌ ಏರಿ ಝುಂ ಅಂತಾ ಹೋಗುತ್ತಲೇ ಇದ್ದಾರೆ. ಇದರ ಜೊತೆಯಲ್ಲೇ ಪ್ರಯಾಣಿಕರು ಮತ್ತು ಕಂಡಕ್ಟರ್‌ ನಡುವೆ ಜಗಳ ಸಾಮಾನ್ಯವಾಗಿದೆ. ಈ ನಡುವೆ ಗದಗದಲ್ಲಿ ಇನ್ನೊಂದು ಕಿರಿಕ್‌ ಆಗಿದೆ. ಅದೇನೆಂದರೆ ಬಸ್ಸಿನಲ್ಲಿ ಮಹಿಳೆಯರು ತಮಗೆ ಮದ್ಯ ಸಾಗಿಸಲು ಅವಕಾಶ ನೀಡಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಮಹಿಳೆಯರಿಬ್ಬರು ಬಸ್ಸಿನಲ್ಲಿ ಮದ್ಯದ ಬಾಟಲ್‌ ಕೊಂಡೊಯ್ಯುತ್ತಿದ್ದುದನ್ನು ಕಂಡಕ್ಟರ್‌ ಆಕ್ಷೇಪಿಸಿದ್ದಾನೆ. ಅಷ್ಟು ಮಾತ್ರವಲ್ಲ ಅವರನ್ನು ಬಸ್ಸಿನಿಂದ ಇಳಿಸಿದ್ದಾನೆ. ಇದರಿಂದ ಹೈಡ್ರಾಮ ಶುರುವಾಗಿದೆ. ಮಹಿಳೆಯರು ಸೀದಾ ಸಿಟ್ಟಿನಲ್ಲಿ ಬಸ್‌ ನಿರ್ವಾಹಕನ ವಿರುದ್ಧ ಗದಗ ಪೊಲೀಸ್‌ ಠಾಣೆ ಮೆಟ್ಟಿರೇಲಿದ್ದಾರೆ. ಇದರ ಜೊತೆಗೆ ಇವರು ಸರಕಾರ ಉಚಿತ ಪ್ರಯಾಣ ಮಾಡುತ್ತಿದ್ದರು ಎಂಬುವುದು ಮತ್ತೊಂದು ಆಯಾಮ.

ತಮಗೆ ಬಸ್ಸಿನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶ ಕೊಡಿ ಎಂದು ಗದಗ ನಗರದ ಶಹರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯರು ಭಾರೀ ರಾದ್ಧಾಂತ ಮಾಡಿದ್ದಾರೆ.

ಅಂದ ಹಾಗೆ ನಡೆದಿದ್ದೇನೆಂದರೆ, ಗದಗ ಮೂಲದ ಇಬ್ಬರು ಮಹಿಳೆಯರು ಹುಬ್ಬಳ್ಳಿಯಿಂದ ಮದ್ಯದ ಬಾಟಲ್‌ ಹಿಡಿದುಕೊಂಡು ಬಸ್‌ ಹತ್ತಿದ್ದಾರೆ. ಆದರೆ ಇದನ್ನು ತಿಳಿದ ನಿರ್ವಾಹಕ ಅವರ ಜೊತೆ ತಕರಾರು ತೆಗೆದಿದ್ದಾನೆ. ಹುಬ್ಬಳ್ಳಿ ಮೂಲಕ ಗದಗಕ್ಕೆ ಹೋಗುತ್ತಿದ್ದ ಈ ಬಸ್‌ನಿಂದ ಮಹಿಳೆಯರನ್ನು ಈತ ಕೆಳಗೆ ಇಳಿಸಿದ್ದ. ಆರ್ಮಿ ಕ್ಯಾಂಟೀನ್‌ನಿಂದ ಈ ಮಹಿಳೆಯರು ಮದ್ಯದ ಬಾಟಲ್‌ ತರುತ್ತಿದ್ರು. ಇವರಿಗೆ ನಿವೃತ್ತ ಯೋಧದ ಸಂಘ ಕೈ ಜೋಡಿಸಿದೆ. ನಮ್ಮನ್ನು ಬಸ್ಸಿನಿಂದ ಇಳಿಸಿದ್ದು ಮಾತ್ರವಲ್ಲದೇ, ಮದ್ಯ ಒಯ್ಯಲು ಅವಕಾಶ ನೀಡಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ.

ಈ ರೀತಿ ನಾವು ಹಲವು ಬಾರಿ ಮದ್ಯ ತಗೊಂಡು ಬಂದಿದ್ದೀವಿ. ಅವತ್ತು ಇಲ್ಲದ ರೂಲ್ಸ್‌ ಇವತ್ತೇನು? ಎಂದು ಮಹಿಳೆಯರ ವಾದ. ಅಷ್ಟು ಮಾತ್ರವಲ್ಲದೇ, ಬಸ್ಸಿನಲ್ಲಿ ಕುಡಿದು ಬಂದವರಿಗೆ ಜಾಗ ಇದೆ, ನಾವು ಮನೆಗೆ ಮದ್ಯದ ಬಾಟಲು ಕೊಂಡೊಯ್ಯಲು ಅವಕಾಶ ಇಲ್ಲ, ನಾವು ಬಸ್ಸಿನಲ್ಲಿ ಕುಡಿದು ಗಲಾಟೆ ಮಾಡಿದ್ದೇವಾ? ಎಂಬ ಪ್ರಶ್ನೆಯನ್ನು ಮಹಿಳೆಯರು ಹಾಕಿದ್ದಾರೆ.

ನಮಗೆ ಮದ್ಯದ ತರಲು ಸರಕಾರ ಬೇರೆ ಯಾವುದಾದರೊಂದು ದಾರಿ ತೋರಿಸಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆರ್ಮಿ ಕ್ಯಾಂಟೀನ್‌ಗಳಲ್ಲಿ ನಿವೃತ್ತ ಯೋಧರಿಗೆ ಅಗ್ಗದ ದರದಲ್ಲಿ ಮದ್ಯ ಪೂರೈಕೆ ಆಗುತ್ತದೆ. ಹಾಗಾಗಿ ಬಸ್ಸು ಇಲ್ಲವೇ ಬೇರೆ ವಾಹನಗಳಲ್ಲಿ ಅವುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಈ ಮದ್ಯವನ್ನು ನಿವೃತ್ತ ಯೋಧರು, ಅಥವಾ ಅವರು ನಿಯೋಜನೆ ಮಾಡಿದ ಮನೆಯ ಸದಸ್ಯರು ಕೊಂಡೊಯ್ಯಲು ಅವಕಾಶವಿದೆ. ಆದರೆ ಈ ಬಾರಿ ಬಸ್ಸಿನಲ್ಲಿ ಕೊಂಡೊಯ್ಯುವಾಗ ಈ ಎಡವಟ್ಟು ನಡೆದಿದೆ.

ಇದನ್ನೂ ಓದಿ: KCET 2023 Results : ಕರ್ನಾಟಕ ‘CET’ ಫಲಿತಾಂಶ ಪ್ರಕಟ ; ರಿಸಲ್ಟ್ ಈ ರೀತಿ ಚೆಕ್ ಮಾಡಿ !