Home latest ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಕಡಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಎಸ್.ಅಂಗಾರ

ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಕಡಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಎಸ್.ಅಂಗಾರ

Hindu neighbor gifts plot of land

Hindu neighbour gifts land to Muslim journalist

ಕಡಬ: ಕಡಬ ತಾಲೂಕು ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಯ ಕಾರ್ಯಕ್ರಮ ಈ ತಿಂಗಳ ಅಂತ್ಯಕ್ಕೆ ಕಡಬದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಟ್ಟಡದ ಕಾಮಗಾರಿ ತ್ವರಿಗತಿಯಲ್ಲಿ ನಡೆಯಬೇಕೆಂದು ಸಂಬಂದಪಟ್ಟ ಅಧಿಕಾರಿಗಳಿಗೆ ಕಡಬದಲ್ಲಿ ನಡೆದ ತಾಲೂಕು ಮಟ್ಟದ ತ್ರ್ತೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ಎಸ್ ಅಂಗಾರ ಸೂಚಿಸಿದರು.
ಕಡಬ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ತಿಂಗಳಲ್ಲಿ ವಿಧಾನಸಭೆಯ ಸದನ ನಡೆಯಲಿದೆ . ಈ ಸಂದರ್ಭ ಮುಖ್ಯಂತ್ರಿಗಳ ಬರುವಿಕೆಗೆ ದಿನ ನಿಗದಿಪಡಿಸಲಾಗುವುದು. ಈಗಾಗಲೇ ಗುದ್ದಲಿಪೂಜೆ ನಡೆದ ಕುಲ್ಕುಂದ ದಿಂದ ನೆಟ್ಟಣದವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ದಿ, ಕಡಬದ ಹಳೆಸ್ಟೇಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಪಂಚಾಯಿತಿ ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಸಿಗುವ ಸವಲತ್ತುಗಳ ವಿತರಣೆ ನಡೆಯಲಿದೆ. ೯೪ ಸಿ , ಸಿ ಸಿ , ಅಕ್ರಮ ಸಕ್ರಮ ಮೊದಲಾದ ಸವಲತ್ತುಗಳ ವಿತರಣೆ ಸಂಭಂದ ಫಲಾನುಭವಿಗಳ ಕಡತವನ್ನು ವಿಲೇವಾರಿ ಮಾಡಬೇಕು ಫಾಲಾನುಭವಿಗಳ ಪಟ್ಟಿಯನ್ನು ರಚಿಸುವಲ್ಲಿ ತಕ್ಷಣದಿಂದ ಸಂಬಂದಪಟ್ಟ ಅಧಿಕಾರಿಗಳು ಕಾರ್ಯಕ್ರವೃತ್ತರಾಗಬೇಕು ಈ ಸಂಬಂದ ಕಡಬ ತಹಸೀಲ್ದಾರ ಮುಂದಾಳತ್ವ ವಹಿಸಬೇಕು ಎಂದು ಸೂಚಿಸಿದರು.