Home latest ವಿವಾಹಿತ ಮಹಿಳೆಯೊಂದಿಗೆ ಸಂಬಂಧ | ನಂತರ ಆಕೆಯ ಮಗಳನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿದ ಕ್ರೂರಿ

ವಿವಾಹಿತ ಮಹಿಳೆಯೊಂದಿಗೆ ಸಂಬಂಧ | ನಂತರ ಆಕೆಯ ಮಗಳನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿದ ಕ್ರೂರಿ

Hindu neighbor gifts plot of land

Hindu neighbour gifts land to Muslim journalist

ಇದೊಂದು ರೀತಿಯ ವಿಲಕ್ಷಣ ಘಟನೆ ಎಂದೇ ಹೇಳಬಹುದು. ಯಾವುದೇ ತಾಯಿಗೂ ಇದೊಂದು ಅರಗಿಸಲಾಗದ ಕಹಿ ಘಟನೆ. ತನ್ನ ಪ್ರಿಯಕರನೇ ತನ್ನ ಮಗಳನ್ನು ಕೊಲೆ ಮಾಡಿ ನಂತರ ಆಕೆಯ ಶವದೊಂದಿಗೆ ಸಂಭೋಗ ಮಾಡಿದ್ದಾನೆ ಎಂದರೆ ನಿಜಕ್ಕೂ ಇದು ಹೃದಯ ವಿದ್ರಾವಕ ಘಟನೆ ಎಂದೇ ಹೇಳಬಹುದು. ಇಂತಹ ಒಂದು ವಿಲಕ್ಷಣ ಘಟನೆ ಚೆನ್ನೈನಲ್ಲಿ ನಡೆದಿದೆ. ಈಗ ಈ ಪಾತಕಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ನ.12 ರಂದು ಬಂಧಿಸಲಾಗಿದೆ. ಈ ಕೃತ್ಯ ಎಸಗಿ ಪರಾರಿಯಾಗಿದ್ದ 38 ವರ್ಷದ ವ್ಯಕ್ತಿ, ಮುಂಬಯಿಯ ವಿರಾರ್ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ.

ಚೆನ್ನೈನ ಪೂನಾಮಲ್ಲೀಯಲ್ಲಿರುವ ಸೇನೀರ್ಕುಪ್ಪಂ ಪ್ರದೇಶದಲ್ಲಿ ನೆಲೆಸಿದ್ದ ತನ್ನ ಅಮ್ಮ ಹಾಗೂ ಆಕೆಯ ಪ್ರಿಯಕರ ರಾಜು ನಾಯರ್ ಜತೆಗೆ ವಾಸಿಸಲು 18 ವರ್ಷದ ತರುಣಿ ಜುಲೈನಲ್ಲಿ ಅಲ್ಲಿಗೆ ತೆರಳಿದ್ದರು. ಗಂಡನಿಂದ ದೂರವಾಗಿದ್ದ ಮಹಿಳೆ, ನಾಲ್ಕು ವರ್ಷಗಳಿಂದ ನಾಯರ್ ಜತೆ ನೆಲೆಸಿದ್ದಳು. ಮಗಳನ್ನು ತಾನು ನೋಡಿಕೊಳ್ಳಬೇಕೆಂಬ ಆಕೆಯ ಬೇಡಿಕೆಯನ್ನು ನಾಯರ್ ಒಪ್ಪಿದ್ದ. ನ. 12ರಂದು ಮಹಿಳೆ ಕೆಲಸ ಮುಗಿಸಿ ಮನೆಗೆ ಮರಳಿದಾಗ, ಬಾಗಿಲು ಹಾಕಿತ್ತು. ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ, ಮಗಳು ನಿಶ್ಚಲಳಾಗಿ ಬಿದ್ದಿದ್ದಳು. ಆಕೆಯ ಕಿವಿಯೋಲೆ, ಕಾಲ್ಗೆಜ್ಜೆ ಮತ್ತು 25,000 ರೂ ಹಣ ನಾಪತ್ತೆಯಾಗಿತ್ತು. ಮನೆಯ ಬದಲಿ ಕೀ ಹೊಂದಿದ್ದ ನಾಯರ್, ನಾಪತ್ತೆಯಾಗಿದ್ದ. ನಾಯರ್ ಗಡಿಬಿಡಿಯಲ್ಲಿ ಮನೆಯಿಂದ ಹೊರ ಹೋಗುವುದನ್ನು ಕಂಡಿದ್ದಾಗಿ ಅಕ್ಕಪಕ್ಕದ ಮನೆಯವರು ತಿಳಿಸಿದ್ದರು.

ತರುಣಿಯ ಕತ್ತು ಹಿಸುಕಿ ಕೊಂದು, ಶವದೊಂದಿಗೆ ಸಂಭೋಗ ನಡೆಸಿದ್ದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಪಲಾಯನ ಮಾಡುವಾಗ ನಾಯರ್, ತರುಣಿ ಹಾಗೂ ಆಕೆಯ ತಾಯಿಯ ಸೆಲ್‌ಫೋನ್‌ಗಳನ್ನು ಕೂಡ ಕದ್ದೊಯ್ದಿದ್ದ. ಕೆಲವು ವಾರಗಳ ಹಿಂದೆ ತನ್ನ ಮಗಳ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದ ಎಂದು ಮಹಿಳೆ ಪೊಲೀಸರಿಗೆ ಹೇಳದ್ದಾಳೆ.
ಚೆನ್ನೈನಿಂದ ಪರಾರಿಯಾದ ನಾಯರ್, ಮುಂಬಯಿಯ ವಿರಾರ್ (ಪೂರ್ವ) ಪ್ರದೇಶದ ಫೂಲ್ಪಡಾಕ್ಕೆ ತೆರಳಿದ್ದ. ಅಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಆರಂಭಿಸಿದ್ದ. ತಾನು ಕದ್ದು ತಂದಿದ್ದ ಫೋನ್‌ಗಳಲ್ಲಿ ಒಂದನ್ನು ಅಲ್ಲಿ ಆತ ಆನ್ ಮಾಡಿದ್ದ. ಹಾಗಾಗಿ ಇದು ಆತನನ್ನು ಪತ್ತೆ ಮಾಡಲು ಪೊಲೀಸರಿಗೆ ಸಹಾಯ ಮಾಡಿತು. ಶುಕ್ರವಾರ ಆತನನ್ನು ಬಂಧಿಸಿದ ವಿರಾರ್ ಪೊಲೀಸರು, ಪೂನಾಮಲ್ಲೀ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಾಯರ್ ಈ ಹಿಂದೆ ಕೂಡ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ.