Home latest BBK9 : ನಾನು ಕಳುಹಿಸೋ ವಸ್ತುಗಳು ರೂಪೇಶ್‌ಗೆ ತಲುಪಿಸುತ್ತಿಲ್ಲ | ನೇರವಾಗಿ ಬಿಗ್ ಬಾಸ್ ವಿರುದ್ಧ...

BBK9 : ನಾನು ಕಳುಹಿಸೋ ವಸ್ತುಗಳು ರೂಪೇಶ್‌ಗೆ ತಲುಪಿಸುತ್ತಿಲ್ಲ | ನೇರವಾಗಿ ಬಿಗ್ ಬಾಸ್ ವಿರುದ್ಧ ಸಾನ್ಯ ಆರೋಪ

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಸೀಸನ್ 9 ಕನ್ನಡ ಸಾಕಷ್ಟು ಮನರಂಜನಾತ್ಮಕವಾಗಿ ಮೂಡಿಬರುತ್ತಿದ್ದು, ಎಲ್ಲರ ಮನವನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದೇ ಹೇಳಬಹುದು.

ಅಂದ ಹಾಗೇ, ಈ ಬಾರಿ ರೂಪೇಶ್ ರಾಜಣ್ಣ ಈ ವಾರ ಮನೆಯ ಕ್ಯಾಪ್ಟನ್ ಆಗಿ 70ನೇ ದಿನಕ್ಕೆ ಚಾಲನೆ ನೀಡಿದ್ದಾರೆ. ಈ ಎಲ್ಲಾ ಆಟದ ಮಧ್ಯೆ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅವರ ಗೆಳೆತನ ಬಹಳ ಇಂಟೆರೆಸ್ಟಿಂಗ್ ಆಗಿತ್ತು. ಹೌದು, ಈ ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಮನೆಯಿಂದ ಎಲಿಮಿನೇಟ್ ಆದಾಗ, ರೂಪೇಶ್ ಅವರು ತನಗಾಗಿ ಪ್ರತಿವಾರ ಬಟ್ಟೆ ಕಳುಹಿಸಬೇಕೆಂಬ ಮಾತನ್ನು ತಗೋತ್ತಾರೆ. ಮೊದಲ ವಾರ ರೂಪೇಶ್ ಕೈಗೆ ಸೇರಿದ ಬಟ್ಟೆ ಬಹುಶಃ ಅನಂತರ ಸಿಕ್ಕಿಲ್ಲವೇನೋ. ಹಾಗಾಗಿ ಈ ದುಃಖವನ್ನು ಸಾನಿಯಾ ಅಯ್ಯರ್ ಈಗ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಹೌದು! ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ 6ನೇ ಸ್ಪರ್ಧಿ ಸಾನ್ಯ ಐಯ್ಯರ್. ಸಾನ್ಯ ಒಂದು ವಾರ ಬಟ್ಟೆ ಕಳುಹಿಸಿದ್ದಾರೆ. ಎರಡನೇ ವಾರದಿಂದ ಯಾವ ಡ್ರೆಸ್‌ ಕೂಡ ರೂಪೇಶ್ ಅವರಿಗೆ ತಲುಪಿಲ್ಲ. ಈ ವಿಚಾರ ರೂಪೇಶ್‌ ಅವರ ಜೊತೆಗೆ ಪ್ರತಿ ದಿನ ಎಪಿಸೋಡ್‌ ನೋಡುತ್ತಿರುವವರಿಗೂ ಅಚ್ಚರಿ ಮೂಡಿಸಿತ್ತು.

ಮನೆಯಿಂದ ಹೊರ ಬಂದ ಮೇಲೆ ಪ್ರೀತಿ ಕಡಿಮೆ ಆಗಿರಬೇಕು ಅದಿಕ್ಕೆ ಕೆಂಪು ಶರ್ಟ್‌ ಬರುತ್ತಿಲ್ಲ ಎಂದು ವೀಕ್ಷಕರು ಅಂದಾಜಿಸಿದ್ದಾರೆ. ಆದರೆ ಈಗ ಸಾನ್ಯ ಪೋಸ್ಟ್‌ ಮೂಲಕ ರೂಪಿ ಹಾಗೂ ಈ ಜೋಡಿಯ ಅಭಿಮಾನಿಗಳಿಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

‘ರೂಪಿ ನೀನು ಸ್ಟ್ರಾಂಗ್ ಆಗಿರು. ನಾನು ಕಳುಹಿಸುತ್ತಿರುವ ಶರ್ಟ್‌ಗಳನ್ನು ನಿನಗೆ ತಲುಪಿಸಲಾಗಿಲ್ಲ. ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ನಾನು ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್‌ನ ಕಳುಹಿಸುತ್ತಿದ್ದು ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಆಗುವುದಿಲ್ಲ. ಅಲ್ಲದೆ, ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು’ ಎಂದು ಸಾನ್ಯ ಬರೆದುಕೊಂಡಿದ್ದಾರೆ.