Home latest ಬಂಟ್ವಾಳ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಕುಸಿತ...

ಬಂಟ್ವಾಳ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಕುಸಿತ |ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು ಅಡ್ಡಹೊಳೆವರೆಗೆ ಚತುಷ್ಪತ ರಸ್ತೆಯ ನಿರ್ಮಾಣ ರಾತ್ರಿಹಗಲು ಎನ್ನದೆ ಭರದಿಂದ ನಡೆಯುತ್ತಿದ್ದು, ಈ ವೇಳೆ ಹಲವು ನಷ್ಟಗಳು ಸಂಭವಿಸಿದ್ದು, ಜನರಿಗೆ ಕಿರಿ ಕಿರಿ ಉಂಟು ಮಾಡಿದೆ.

ಈ ಕಾಮಗಾರಿಯ ಸಂದರ್ಭದಲ್ಲಿ ರಾಷ್ಟ್ರೀಯ
ಸ್ವಯಂ ಸೇವಕ ಸಂಘದ ಪ್ರಮುಖರಾಗಿರುವ
ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರ ಮನೆಯ
ಕಾಂಪೌಂಡ್ ಗೋಡೆ ಜರಿದು ಬಿದ್ದು ಲಕ್ಷಾಂತರ ರೂ
ನಷ್ಟ ಸಂಭವಿಸಿದೆ.ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ ಆಗಿದೆ.

ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆ
ಅಗಲೀಕರಣ ಕಾಮಗಾರಿಗಾಗಿ ಕಲ್ಲಡ್ಕ ಪೇಟೆಯಲ್ಲಿ
ಎಷ್ಟು ಮೀಟರ್ ರಸ್ತೆ ಅಗಲೀಕರಣಗೊಳ್ಳುತ್ತದೆ.
ಎಂಬುದರ ಸ್ಪಷ್ಟವಾದ ಲೆಕ್ಕ ನೀಡದೆ ಜನ
ಗೊಂದಲದಲ್ಲಿದ್ದಾರೆ. ಕಲ್ಲಡ್ಕ ಪೇಟೆಯಲ್ಲಿ ಫೈ
ಓವರ್ ನಿರ್ಮಾಣದ ಪ್ಲಾನ್ ತಯಾರಿಸಿದ ಬಳಿಕ
ರಸ್ತೆಯ ಇಕ್ಕೆಲಗಳು ಬಾಕಿ ಉಳಿದ ಕಡೆಗಳಿಗಿಂತ
ಕಡಿಮೆ ಜಾಗ ಎಕ್ಟೇರ್ ಮಾಡುತ್ತಾರೆ ಎಂಬ ಮಾಹಿತಿ
ಲಭ್ಯವಾಗಿದೆ.

ಪೈ ಓವರ್ ನ ಎರಡು ಬದಿಗಳಲ್ಲಿ ಸರ್ವೀಸ್ ರಸ್ತೆ
ನಿರ್ಮಾಣ ಗೊಳ್ಳುತ್ತದೆ.ಈಗಾಗಿ ರಸ್ತೆ ಅಗಲೀಕರಣ ದ
ಸರಿಯಾದ ಸರ್ವೆ ಕಾರ್ಯ ಮುಗಿದಿಲ್ಲ ಎಂಬುದು
ಸ್ಥಳೀಯರ ಮಾತು. ಹಾಗಾಗಿ ಡಾ. ಪ್ರಭಾಕರ್ ಭಟ್
ಅವರ ಮನೆಯ ಕಾಂಪೌಂಡ್ ಎರಡು ಬಾರಿ
ನಿರ್ಮಾಣ ಮಾಡಲಾಗಿತ್ತು.ಒಂದು ಬಾರಿ ರಸ್ತೆ ಅಗಲೀಕರಣಕ್ಕಾಗಿ ಕೆಂಪು ಕಲ್ಲು
ಬಳಸಿ ಕಟ್ಟಲಾಗಿತ್ತು. ಅ ಬಳಿಕ ಮತ್ತೆ ಕಾಂಕ್ರೀಟ್
ಸಿಮೆಂಟ್ ಮೂಲಕ ತಡೆಗೋಡೆ ರೀತಿಯಲ್ಲಿ
ಕಾಂಪೌಂಡ್ ಗೋಡೆ ನಿರ್ಮಾಸಿಲಾಗಿತ್ತಾದರೂ
ಯಾವುದೇ ಪ್ರಯೋಜನ ಕ್ಕೆ ಬಾರದೆ
ನೆಲಸಮವಾಗಿದೆ.

ಸಡಿಲ ಮಣ್ಣು, ಮುರಿದು ಬಿದ್ದ ಕಾಂಪೌಂಡ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗಲೀಕರಣ ದ ಜೊತೆ ಸರಾಗವಾಗಿ ಮಳೆ ನೀರು ಹರಿದು ಹೋಗುವ ಉದ್ದೇಶದಿಂದ ಅಲ್ಲಲ್ಲಿ ಸಿಮೆಂಟ್ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ.ಕಲ್ಲಡ್ಕ ಮುಖ್ಯಪೇಟೆಯಲ್ಲಿರುವ ಡಾ. ಪ್ರಭಾಕರ್ ಭಟ್ ಅವರ ಮನೆಯ ಮುಂಭಾಗದಲ್ಲಿ ಕೂಡ ಸಿಮೆಂಟ್ ಪೈಪ್ ಅಳವಡಿಕೆಗಾಗಿ ಕಾಂಪೌಂಡ್ ನ ಸುತ್ತ ಅಗೆಯಲಾಗಿತ್ತು.ಕಾಂಪೌಂಡ್‌ನ ಬದಿಯಲ್ಲಿ ಮತ್ತು ಅಡಿಪಾಯದವರಗೆ ಅಗೆದ ಪರಿಣಾಮ ಜೊತೆಗೆ ಸಡಿಲ ಮಣ್ಣಿನ ಕಾರಣದಿಂದ ಕಾಂಪೌಂಡ್ ಗೋಡೆ ಜರಿದು ಬಿದ್ದಿದೆ.

ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್ ಕಂಪೆನಿ
ಸ್ಥಳೀಯರಿಗೆ ತೊಂದರೆಯಾಗದಂತೆ ಕಾಮಗಾರಿ
ನಡೆಸುವಂತೆ ಮತ್ತು ರಸ್ತೆ ಅಗಲೀಕರಣ ದ
ಸರಿಯಾದ ಸರ್ವೇ ಕಾರ್ಯದ ಮಾಹಿತಿ ನೀಡುವಂತೆ
ಅಗ್ರಹಿಸಿದ್ದಾರೆ.