Home latest ಔಷಧಿ ಖರೀದಿಸಲು ಬಂದ ವ್ಯಕ್ತಿಗೆ ಹೃದಯಾಘಾತ | ಆಘಾತಕಾರಿ ವಿಡಿಯೋ ವೈರಲ್‌ !!

ಔಷಧಿ ಖರೀದಿಸಲು ಬಂದ ವ್ಯಕ್ತಿಗೆ ಹೃದಯಾಘಾತ | ಆಘಾತಕಾರಿ ವಿಡಿಯೋ ವೈರಲ್‌ !!

Hindu neighbor gifts plot of land

Hindu neighbour gifts land to Muslim journalist

ಫರಿದಾಬಾದ್: ವಿಶ್ವದೆಲ್ಲೆಡೆ ವ್ಯಕ್ತಿಯ ವಯಸ್ಸನ್ನು ಲೆಕ್ಕಿಸದೆ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಹೃದಯಾಘಾತದಿಂದ ಯುವಕರು ಸಾಯುತ್ತಾರೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಇಂತಹದೊಂದು ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಇಲ್ಲಿ, ಹರ್ಯಾಣದ ಫರಿದಾಬಾದ್‌ನಲ್ಲಿರುವ ಫಾರ್ಮಸಿಯೊಂದರಲ್ಲಿ ಯುವಕನೊಬ್ಬ ಔಷಧಿ ಖರೀದಿಸುತ್ತಿದ್ದಾಗ ಪ್ರಜ್ಞೆ 4 ನಿಮಿಷದಲ್ಲಿ ವ್ಯಕ್ತಿ ಕುಸಿದು ಬಿದ್ದಿದ್ದು, ಈ ಘಟನೆ ಔಷಧಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವ್ಯಕ್ತಿ ಮೆಡಿಕಲ್ ಸ್ಟೋರ್ ತಲುಪಿ ಅಂಗಡಿಯವರಿಂದ ಔಷಧಿ ಕೇಳುತ್ತಾನೆ. ಬೀಳುವ ಮೊದಲು, ಯುವಕನು ಅಂಗಡಿಯಲ್ಲಿ ನಿಂತಿರುವುದು ಕಂಡುಬರುತ್ತದೆ ಬಳಿಕ ಅತ ಕೆಳಗೆ ಕುಸಿದು ಬೀಳುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
ಬೀಳುತ್ತಿದ್ದಂತೆ ಮೆಡಿಕಲ್ ಶಾಪ್ ನಿರ್ವಾಹಕರು ಕೈ ಹಿಡಿಯಲು ಯತ್ನಿಸಿದ್ರು ವಿಫಲರಾದರು. ಬಳಿಕ ಯುವಕ ಮೃತಪಟ್ಟಿದ್ದಾನೆ. ಸಿಸಿಟಿವಿ ಫೂಟೇಜ್‌ನಲ್ಲಿರುವ ಜನವರಿ 4 ರಂದು ಸಂಭವಿಸಿದೆ ಎಂದು ತಿಳಿಯಬಹುದಾಗಿದೆ.

ಸುದ್ದಿ ವರದಿಗಳ ಪ್ರಕಾರ, 23 ವರ್ಷ ವಯಸ್ಸಿನ ಸಂಜಯ್ ಎಂಬ ವ್ಯಕ್ತಿ ಉತ್ತರ ಪ್ರದೇಶದ ಇಟಾಹ್ ನಿವಾಸಿ. ಗಾಬರಿಗೊಂಡು ಸಜ್ಜಯ್ ಅಂಗಡಿಗೆ ಹೋದಾಗ ಔಷಧಿ ಅಂಗಡಿಯಿಂದ ಒಆರ್‌ಎಸ್ ಕೇಳಿದ್ದಾನೆ ಎಂದು ತಿಳಿದಿದೆ.