Home latest ಸಿನಿಮಾ ಪ್ರಚಾರ ಸಂದರ್ಭದಲ್ಲಿ ಸ್ಟಾರ್‌ ನಟಿಯ ಮೇಲೆ ಯುವಕನೋರ್ವನ ಅನುಚಿತ ವರ್ತನೆ | ವೀಡಿಯೋ ವೈರಲ್‌

ಸಿನಿಮಾ ಪ್ರಚಾರ ಸಂದರ್ಭದಲ್ಲಿ ಸ್ಟಾರ್‌ ನಟಿಯ ಮೇಲೆ ಯುವಕನೋರ್ವನ ಅನುಚಿತ ವರ್ತನೆ | ವೀಡಿಯೋ ವೈರಲ್‌

Hindu neighbor gifts plot of land

Hindu neighbour gifts land to Muslim journalist

ತಮಿಳು ನಟಿ ಅಪರ್ಣಾ ಬಾಲಮುರುಳಿ ತನ್ನ ನೈಜ ಅಭಿನಯದಿಂದಲೇ ಎಲ್ಲರ ಮನಸೂರೆಗೊಂಡ ನಟಿ. ತಮಿಳು ನಟ ಸೂರ್ಯ ನಟನೆಯ ಸೂರರೈ ಪೋಟ್ರು ಸಿನಿಮಾದಲ್ಲಿ ನಟಿಸಿ ಬಹಳ ಹೆಸರು ಮಾಡಿದ ನಟಿ ಈಕೆ. “ರಾಷ್ಟ್ರ ಪ್ರಶಸ್ತಿ ಪುರಸ್ಕೃತ” ಈ ನಟಿಯ ಜೊತೆ ಇತ್ತೀಚೆಗೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಯುವಕನೋರ್ವ ಅನುಚಿತ ರೀತಿಯಲ್ಲಿ ನಡೆದುಕೊಂಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಸಮಾರಂಭದಲ್ಲಿ ಅನೇಕ ನಟ, ನಟಿಯರು ಇದ್ದಿದ್ದು, ಈ ಯುವಕನ ಅನುಚಿತ ವರ್ತನೆಗೆ ನಿಜಕ್ಕೂ ಶಾಕ್‌ ಆಗಿದ್ದಾರೆ.

ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಅಪರ್ಣಾ ಬಾಲಮುರಳಿ ಅವರಿಗೆ ಭಾರಿ ಬೇಡಿಕೆ ಇದೆ. ಕನ್ನಡದ ಪವನ್‌ ಕುಮಾರ್‌ ನಿರ್ದೇಶನದ ʼಧೂಮಂʼ ಸಿನಿಮಾದಲ್ಲಿ ಅಪರ್ಣಾ ಅವರು ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡುತ್ತಿದೆ. ಅಲ್ಲದೆ, ಸೂರರೈ ಪೋಟ್ರು ಸಿನಿಮಾದಲ್ಲಿನ ನಟನೆಗಾಗಿ ಅಪರ್ಣಾ ಅವರಿಗೆ ‘ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ’ ಸಿಕ್ಕಿತು.

ತನ್ನ ಮುಂಬರುವ ಸಿನಿಮಾ ʼಥಂಕಂʼ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟಿ ಪ್ರಮೋಷನ್‌ಗಾಗಿ ಹಲವು ಕಡೆ ಹೋಗುತ್ತಿದ್ದಾರೆ. ಅದರ ಒಂದು ಭಾಗವೇ ಈ ಕಾಲೇಜು ಭೇಟಿ. ಈ ಸಂದರ್ಭದಲ್ಲಿ ಯುವಕನೋರ್ವ ಈ ರೀತಿ ವರ್ತಿಸಿದ್ದಾನೆ. ಈ ಘಟನೆಯ ದೃಶ್ಯಾವಳಿ ವೈರಲ್‌ ಆಗದ್ದು ಇದನ್ನು ನೋಡಿದ ಅವರ ಅಭಿಮಾನಿಗಳು, ನಟ, ನಟಿಯರು ನಿಜಕ್ಕೂ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್‌ ವಿಡಿಯೋದಲ್ಲಿ, ವೇದಿಕೆಯ ಮೇಲೆ ಬರುವ ವಿದ್ಯಾರ್ಥಿ ಫೋಟೋಗೆ ಪೋಸ್‌ ನೀಡುವಾಗ ಅಪರ್ಣಾ ಅವರ ಮೇಲೆ ಆತ ಕೈ ಹಾಕಲು ಮುಂದಾಗುತ್ತಾನೆ. ಇದರಿಂದ ನಟಿಗೆ ತೀವ್ರ ಇರಿಸುಮುರಿಸು ಉಂಟಾಗಿ ಕೂಡಲೇ ಪಕ್ಕಕ್ಕೆ ಸರಿದುಕೊಂಡಿದ್ದಾರೆ. ಈ ಘಟನೆಯ ವೀಡಿಯೋ ಇಲ್ಲಿದೆ.