Home Fashion 77ವರ್ಷದ Mr. ಗೆ 24 ವರ್ಷದ Mrs|ಬರೋಬ್ಬರಿ 53 ವರ್ಷ ವಯಸ್ಸಿನ ಅಂತರವಿದ್ದರೂ ಹಾಲು-ಜೇನಿನಂತಿದೆಯಂತೆ ಇವರ...

77ವರ್ಷದ Mr. ಗೆ 24 ವರ್ಷದ Mrs|ಬರೋಬ್ಬರಿ 53 ವರ್ಷ ವಯಸ್ಸಿನ ಅಂತರವಿದ್ದರೂ ಹಾಲು-ಜೇನಿನಂತಿದೆಯಂತೆ ಇವರ ಸಂಸಾರ|ಅದೆಷ್ಟೇ ಟ್ರೋಲ್ ಆದರೂ ತಲೆ ಕೆಡಿಸಿಕೊಳ್ಳಲ್ಲ ಅಂತಿದ್ದಾರೆ ಈ ಜೋಡಿ

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬುದು ಜೀವನದುದ್ದಕ್ಕೂ ಜೊತೆಯಾಗೋ ಜೊತೆಗಾರರನ್ನು ಹುಡುಕುವ ಸುಂದರವಾದ ಬೆಸುಗೆಯ ಕ್ಷಣ. ಎಲ್ಲಾ ಜೋಡಿಗೂ ತಾನು ಮದುವೆ ಆಗುವ ವರ ಅಥವಾ ವಧು ಹೀಗಿರಬೇಕು, ಈ ಗುಣ ಲಕ್ಷಣವಿರಬೇಕು ಎಂಬೆಲ್ಲಾ ಕನಸುಗಳಿರುತ್ತೆ. ಇಂತಹ ಜೋಡಿಯನ್ನು ಹುಡುಕಲು ಹಲವಾರು ನಿಯಮಗಳೂ ಇವೆ ಇಂದಿನ ಸಂಪ್ರದಾಯದಲ್ಲಿ.ಮದುವೆಯಲ್ಲಿ ಮುಖ್ಯವಾಗಿ ಜೋಡಿಯ ವಯಸ್ಸಿನ ಅಂತರ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷ ಅಂತರವಿದ್ರೆ ಒಳ್ಳೆಯದು ಅಂತಾರೆ.ಆದ್ರೆ ಅಮೆರಿಕ ಮೂಲದ ಈ ದಂಪತಿ ವಯಸ್ಸಿನ ಅಂತರ ಎಷ್ಟು ಗೊತ್ತೇ!!?ಬರೋಬ್ಬರಿ 53 ವರ್ಷ.

ಹೌದು.2015ರಲ್ಲಿ ಮದುವೆಯಾದ 24 ವರ್ಷದ ಗ್ಯಾರಿ ಮತ್ತು 77 ವರ್ಷದ ಅಲ್ಮೆಡಾ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ. ಇಬ್ಬರ ಸಂಬಂಧದ ಬಗ್ಗೆ ಜನರು ಏನೇ ಮಾತಾಡಿಕೊಂಡರೂ ಜೋಡಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ನಮಗೆ ಮದುವೆ ಆಗಿದ್ದಕ್ಕೆ ಯಾವುದೇ ಪಶ್ಚತ್ತಾಪ ಇಲ್ಲ ಎಂದು ಜೋಡಿ ಹೇಳಿಕೊಳ್ಳುತ್ತಾರೆ.

ಮಿರರ್ ವರದಿ ಪ್ರಕಾರ, ಅಲ್ಮೆಡ್ ಪುತ್ರನ ಅಂತ್ಯಕ್ರಿಯೆಯಲ್ಲಿ ಇಬ್ಬರ ಭೇಟಿಯಾಗಿತ್ತು. ಈ ಸಮಯದಲ್ಲಿ ಗ್ಯಾರಿಗೆ 17 ವರ್ಷ, ಅಲ್ಮೇಡಾಗೆ 71 ವರ್ಷ. ಈ ಮೊದಲ ಭೇಟಿಯ ನಂತರ, ಗ್ಯಾರಿ ಮತ್ತು ಅಲ್ಮೇಡಾ ನಡುವೆ ಮಾತುಕತೆ ಪ್ರಾರಂಭವಾಯಿತು. ಇಬ್ಬರೂ ಸ್ನೇಹಿತರಾದರು ಮತ್ತು 15 ದಿನಗಳ ನಂತರ ದಂಪತಿಗಳಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಕ್ಟೋಬರ್ ನಲ್ಲಿ ಇಬ್ಬರು ವಿವಾಹ ವಾರ್ಷಿಕೋತ್ಸವ ಸಹ ಆಚರಿಸಿಕೊಂಡಿದ್ದಾರೆ.

ದಾಂಪತ್ಯ ಜೀವನ ಹೇಗಿದೆ ಎಂಬುದರ ಬಗ್ಗೆ ಗ್ಯಾರಿ ಮಾತನಾಡಿದ್ದು,ನಮ್ಮ ವೈವಾಹಿಕ ಜೀವನ ಅದ್ಭುತವಾಗಿದ್ದು, ನಮ್ಮಿಬ್ಬರ ಕೆಮಿಸ್ಟ್ರಿ ಸಹ ಚೆನ್ನಾಗಿದೆ ಅಂತ ಹೇಳಿದ್ದಾರೆ.ಆಲ್ಮೇಡಾ ನನ್ನ ಜೀವನ ಸಂಗಾತಿ. ಅವರು ಸಹ ನನ್ನನ್ನು ಮದುವೆಯಾಗಲು ಇಷ್ಟಪಟ್ಟಿದ್ದರು. ನನ್ನನ್ನು ಖುಷಿಯಾಗಿರಿಸಲು ಆಲ್ಮೇಡಾ ಸಹ ಪ್ರಯತ್ನ ಮಾಡುತ್ತಾರೆ. ನಾನು ಸಹ ಇಬ್ಬರ ಖುಷಿಯಾಗಿರಲು ಏನು ಮಾಡಬೇಕು ಆ ಎಲ್ಲ ಕೆಲಸಗಳನ್ನು ಮಾಡುತ್ತೇನೆ ಎಂದು ಗ್ಯಾರಿ ಹೇಳಿಕೊಂಡಿದ್ದಾನೆ.

ಇಂದಿಗೂ ಜನರು ಈ ದಂಪತಿಯ ಫೋಟೋಗಳನ್ನು ಟ್ರೋಲ್ ಮಾಡುತ್ತಿದ್ದಾರೆ, ಆದರೆ ಗ್ಯಾರಿ ಮತ್ತು ಆಲ್ಮೇಡಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಸ್ಥಳೀಯರು ಏನು ಬೇಕಾದ್ರೂ ಮಾತಾಡಲಿ ನಮಗೆ ಚಿಂತೆ ಇಲ್ಲ ಅಂತ ಹೇಳಿದ್ದಾರೆ.