

PSI Exam: ಪಿಎಸ್‌ಐ ಮರು ಪರೀಕ್ಷೆಯು ನಡೆಯಲಿದ್ದು ಹಾಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.
ಜನವರಿ 23 ರ ಮಂಗಳವಾರ ನಡೆಯಲಿದೆ. ಹಾಗಾಗಿ ಕಿವಿ ಮತ್ತು ಬಾಯಿ ಮುಚ್ಚುವಂತಹ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಬಾರದು ಎಂದು ಕೆಇಎ ಹೇಳಿದೆ.
ಇದನ್ನೂ ಓದಿ: Sullia: ಒಂದೇ ಮನೆಯ ನಾಲ್ಕು ಸಾಕು ಪ್ರಾಣಿಗಳನ್ನು ಕೊಂದ ಚಿರತೆ; ಭಯದಲ್ಲಿ ಸ್ಥಳೀಯರು!
ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ರ ವರೆಗೆ 50 ಅಂಕಗಳ ಮೊದಲ ಪತ್ರಿಕೆ ಮತ್ತು ಅಪರಾಹ್ನ 1ರಿಂದ 2.30 ರ ವರೆಗೆ 150 ಅಂಕಗಳಿಗೆ ಎರಡನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ಕಾಲರ್ ಇಲ್ಲದ ಶರ್ಟ್‌ಗಳನ್ನು ಹಾಕಬೇಕು, ಜೀನ್ಸ್ ಪ್ಯಾಂಟ್, ಬೆಲ್ಟ್, ಶೂಗಳನ್ನು ಹಾಕಬಾರದು, ವಾಟರ್ ಬಾಟಲ್ ತರಬಾರದು, ಮೊದಲನೇ ಅವಧಿ ಮುಗಿದ ಬಳಿಕ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿಲ್ಲ, ಬೆಳಗ್ಗೆ 8.30 ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಇರಬೇಕು. ಮೊಬೈಲ್ ಫೋನ್ ನಿಷೇಧ.
ಪ್ರವೇಶ ಪತ್ರದ ಜೊತೆಗೆ ಕಡ್ಡಾಯ ಗುರುತಿನ ಚೀಟಿ ಅಂದರೆ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪಾನ್‌ಕಾರ್ಡ್, ಮತದಾರರ ಚೀಟಿ ಇವುಗಳಲ್ಲಿ ಒಂದನ್ನು ತರಬೇಕು. ಮೊಬೈಲ್‌ನಲ್ಲಿ ಗುರುತಿನ ಚೀಟಿ ತೋರಿಸುವಂತಿಲ್ಲ ಎಂದು ಸೂಚಿಸಲಾಗಿದೆ.












