Home Jobs ವಿದೇಶದಲ್ಲಿ ಉದ್ಯೋಗಕ್ಕಾಗಿ ತೆರಳುವವರಿಗೆ ಗುಡ್ ನ್ಯೂಸ್!

ವಿದೇಶದಲ್ಲಿ ಉದ್ಯೋಗಕ್ಕಾಗಿ ತೆರಳುವವರಿಗೆ ಗುಡ್ ನ್ಯೂಸ್!

Hindu neighbor gifts plot of land

Hindu neighbour gifts land to Muslim journalist

ಉದ್ಯೋಗ ಸಿಗಬೇಕು ಎಂದು ಹುಡುಕಾಡುವವರು ಅದೆಷ್ಟೋ ಮಂದಿ. ಅದರಲ್ಲೂ ವಿದೇಶದಲ್ಲಿ ಉದ್ಯೋಗ ಇನ್ನೂ ಚೆನ್ನಾಗಿತ್ತು ಅನ್ನೋರು ಇನ್ನಷ್ಟು ಮಂದಿ. ಅದರಂತೆ ಅಮೇರಿಕಾದಲ್ಲಿ ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಒಂದಿದೆ.

ಹೌದು. ವಿದೇಶದಲ್ಲಿ ಕೆಲಸ ಪಡೆಯುವುದು ಏನೋ ಪರವಾಗಿಲ್ಲ. ಆದ್ರೆ ಉದ್ಯೋಗಿಗಳ ಪರದಾಟ ಇದ್ದಿದ್ದು ಮಾತ್ರ ವೀಸಾ ಪಡೆದುಕೊಳ್ಳೋದು. ವೀಸಾ ಕುರಿತ ಬಿಗಿ ನಿಯಮಗಳ ಕಾರಣಕ್ಕೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದ್ರೆ ಇದೀಗ ಸೋತು ಹೋಗಿರುವ ಜನರಿಗೆ ಪರಿಹಾರವೊಂದು ದೊರಕಿದೆ.

2024ರಲ್ಲಿ ಎಚ್-1ಬಿ ವೀಸಾ ಪಡೆಯುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಹೌದು. ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳ ಸಾಫ್ಟ್ ವೇರ್ ಇಂಜಿನಿಯರ್ ಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮುಂದಿನ ವರ್ಷದಿಂದ ಈ ಸೌಲಭ್ಯ ದೊರೆಯಲಿದೆ.

ಮಾರ್ಚ್ 1ರಿಂದ ಆನ್ಲೈನ್ ಮೂಲಕ ಅಭ್ಯರ್ಥಿಗಳು ತಮ್ಮ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 17ರವರೆಗೆ ಪ್ರಾಥಮಿಕ ನೋಂದಣಿ ನಡೆಯಲಿದ್ದು, ಆಕಾಂಕ್ಷಿಗಳು ಪ್ರಾಥಮಿಕ ಶುಲ್ಕ 10 ಡಾಲರ್ ಪಾವತಿಸಲು ಫೆಬ್ರವರಿ 21ರ ನಂತರ ಹೊಸ ಡಿಜಿಟಲ್ ಖಾತೆಗಳನ್ನು my – uscis ಪೋರ್ಟಲ್ ನಲ್ಲಿ ತೆರೆಯಬಹುದಾಗಿದೆ.