Home International Lottery :ಶಾಪ್​ನಲ್ಲಿ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್​ ಪಡೆದ ಮಹಿಳೆ ಗೆದ್ದದ್ದು ಬರೋಬ್ಬರಿ 16 ಕೋಟಿ!

Lottery :ಶಾಪ್​ನಲ್ಲಿ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್​ ಪಡೆದ ಮಹಿಳೆ ಗೆದ್ದದ್ದು ಬರೋಬ್ಬರಿ 16 ಕೋಟಿ!

Lottery

Hindu neighbor gifts plot of land

Hindu neighbour gifts land to Muslim journalist

Lottery : ಅದೃಷ್ಟ ಎಂಬುದು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಲವರ ಬಾಳಲ್ಲಿ ಈ ಅದೃಷ್ಟ ಲಗ್ಗೆ ಇಟ್ಟಿದ್ದರೆ ಇನ್ನು ಹಲವರ ಬಾಳಲ್ಲಿ ಕೈ ಕೊಟ್ಟಿರುತ್ತದೆ. ಒಟ್ಟಿನಲ್ಲಿ ಇದರ ಇರುವಿಕೆಯನ್ನು, ಹೋಗುವಿಕೆಯನ್ನು ಯಾರೂ ಬಲ್ಲವರಾರು ಅಲ್ವಾ? ಅಂದಹಾಗೆ ಅದೃಷ್ಟ ಅಂದ್ರೆ ಇದೇ ನೋಡಿ. ಜೀವನ ಪರ್ಯಂತ ದುಡಿದಿದ್ದ ಎಲ್ಲಾ ಹಣವನ್ನು ಖರ್ಚು ಮಾಡಿ, ಜೀವನದ ಬೇಡ ಎನಿಸಿದ ಮಹಿಳೆಗೆ ಅದೃಷ್ಟ ಖುಲಾಯಿಸಿದೆ. ಆಕೆ ಕೊನೆಗೆ ಉಳಿದಿದ್ದ ಒಂದ ಒಂದು ಲಾಟರಿ (Lottery) ಟಿಕೆಟ್ ಇಂದ ಬರೋಬ್ಬರಿ 2 ಮಿಲಿಯನ್ ಡಾಲರ್ (16.4 ಕೋಟಿ)​ ಗೆದ್ದಿದ್ದಾಳೆ.

ಹೌದು, ಜೆರಾಲ್ಡೈನ್ ಗಿಂಬ್ಲೆಟ್ ಎಂಬ ಅಮೇರಿಕಾದ ಮಹಿಳೆ ಇಂತಹ ಅದೃಷ್ಟವಂತೆ!. ಈಕೆ ಎರಡು ದಿನದಲ್ಲಿ ಎರಡೆರಡು ಖುಷಿ ಸುದ್ದಿ ಪಡೆದುಕೊಂಡಿದ್ದಾರೆ. ಒಂದು ಕಡೆ ಮಗಳು ಬ್ರೆಸ್ಟ್​ ಕ್ಯಾನ್ಸರ್ ಗೆದ್ದರೆ, ಮಾರನೇ ದಿನವೇ ಫ್ಲೋರಿಡಾ ಲಾಟರಿಯಲ್ಲಿ 16 ಕೋಟಿ ಗೆದ್ದಿದ್ದಾರೆ.

ಗಿಂಬ್ಲೆಟ್​ ತಮ್ಮ ಜೀವಮಾನದ ಎಲ್ಲಾ ಉಳಿತಾಯದ ಹಣವನ್ನು ತನ್ನ ಮಗಳ ಕ್ಯಾನ್ಸರ್​ ಚಿಕಿತ್ಸೆಗೆ ವಿನಿಯೋಗಿಸಿ ಮಗಳ ಪ್ರಾಣ ಉಳಿಸಿಕೊಂಡಿದ್ದರು. ಅದೇ ದಿನ ಆಕೆ 10 ಡಾಲರ್ (820 ರೂ)​ ನೀಡಿ ಗ್ಯಾಸ್​ ಸ್ಟೇಷನ್​​ನಿಂದ ಸ್ಕ್ಯಾಚ್​​ ಕಾರ್ಡ್​ ಖರೀಸಿದ್ದರು. 16 ಕೋಟಿ ಗೆದ್ದ ಗಿಂಬ್ಲೆಟ್ ಎಷ್ಟು ಅದೃಷ್ಟವಂತೆ ಎಂದರೆ, ಗ್ಯಾಸ್​ ಸ್ಟೇಷನ್​ಗೆ ತೆರಳಿದ್ದ ವೇಳೆ ಲಾಟರಿ ಕಾರ್ಡ್​ಗಳು ಇರಲಿಲ್ಲ, ಇರೋದು ಒಂದೇ ಎಂದು ಕೊನೆಯ ಕಾರ್ಡ್​ ಅನ್ನು ಮಹಿಳೆ ಕೈಗಿಟ್ಟದ್ದ. ಆದರೆ ಅದೇ ಕಾರ್ಡ್​ಗೆ ಜಾಕ್​ಪಾಟ್​ ಒಲಿದು ಬಂದಿದೆ.

ಜೆರಾಲ್ಡೈನ್ ತನ್ನ ಮಗಳು ಕೊನೆಯ ಹಂತದ ಕ್ಯಾನ್ಸರ್ ಚಿಕಿತ್ಸೆಯನ್ನು ಪೂರ್ಣಗೊಳಿಸಿದ ಒಂದು ದಿನದ ನಂತರ ಲಾಟರಿ ಕಾರ್ಡ್​ಖರೀದಿಸಿದ್ದರು. ಅತ್ತ ಮಗಳಿಗೆ ಚಿಕಿತ್ಸೆ ಯಶಸ್ವಿಯಾದರೆ, ಇತ್ತ ಲಾಟರಿಯಲ್ಲಿ ಜಾಕ್​ ಪಾಟ್​ ಪಡೆದು, ಬ್ಯಾಕ್​ ಟು ಬ್ಯಾಕ್​ ಗುಡ್​ ನ್ಯೂಸ್​ ಪಡೆದಿದ್ದಾರೆ. ಒಂದೆಡೆ ಇದ್ದಬದ್ದ ಹಣವೆಲ್ಲಾ ಖರ್ಚುಮಾಡಿದ್ದ ಈಕೆಗೆ ಮುಂದೇನು ಎನ್ನುವ ಆಲೋಚನೆ ಕಾಡುತ್ತಿದ್ದ ವೇಳೆಯೇ ಈ ಲಾಟರಿ ಮೂಲಕ ಅದೃಷ್ಟ ಮನೆ ಬಾಗಿಲಿಗೆ ಬಂದಿದೆ. ಬರೋಬ್ಬರಿ 2 ಮಿಲಿಯನ್ ಡಾಲರ್​ ಗೆದ್ದಿದ್ದು, ಜೆರಾಲ್ಡೈನ್ ತಲ್ಲಾಹಸ್ಸಿಯಲ್ಲಿರುವ ಲಾಟರಿ ಪ್ರಧಾನ ಕಚೇರಿಯಲ್ಲಿ ಹಣವನ್ನು ಪಡೆದುಕೊಂಡಿದ್ದಾರೆ.

ಅಂದಹಾಗೆ ಈ ಕುರಿತು ಮಾತನಾಡಿದ ಗ್ಲಿಂಬೆಟ್ ‘ಮೊದಲಿಗೆ ಗ್ಯಾಸ್ ಸ್ಟೇಷನ್ ಕ್ಲರ್ಕ್​ ನನಗೆ ಟಿಕೆಟ್ ಖಾಲಿಯಾಗಿದೆ ಎಂದಿದ್ದರು. ಆದರೆ ನಾನು ಅವನನ್ನು ಮತ್ತೊಮ್ಮೆ ಪರಿಶೀಲಿಸಲು ಹೇಳಿದೆ. ಏಕೆಂದರೆ ನಾನು ಈ ಕ್ರಾಸ್‌ವರ್ಡ್ ಆಟವನ್ನು ಬಹಳ ಇಷ್ಟಪಡುತ್ತೇನೆ. ಕೊನೆಗೆ ಆತ ಹುಡಕಾಡಿ ಉಳಿದುಕೊಂಡಿದ್ದ ಮೊನೆ ಟಿಕೆಟ್​ಅನ್ನ ನನಗೆ ಕೊಟ್ಟಿದ್ದ. ಜಾಕ್​ಪಾಟ್​ ಟಿಕೆಟ್ ಮಾರಾಟ ಮಾಡಿದ್ದಕ್ಕಾಗಿ ಕ್ಲರ್ಕ್​ಗೂ ಕೂಡ 2000 ಡಾಲರ್(1.6 ಲಕ್ಷ ರೂ) ಕಮಿಷನ್​ ಸಿಕ್ಕಿದೆ” ಎಂದು ಹೇಳಿದ್ದಾರೆ.

ಇನ್ನು ತಮ್ಮ ತಾಯಿಗೆ ಲಾಟರಿಯಲ್ಲಿ 2 ಮಿಲಿಯನ್ ಡಾಲರ್ ಗೆದ್ದಿದ್ದಕ್ಕೆ ಆಕೆಯ ಕ್ಯಾನ್ಸರ್​ ಪೀಡಿತ ಮಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಏಕೆಂದರೆ ತನ್ನ ತಾಯಿ ಜೀವನ ಪರ್ಯಂತ ಉಳಿಸಿದ್ದ ಹಣವನ್ನು ತನ್ನ ಚಿಕಿತ್ಸೆಗೆ ಬಳಸಿದ್ದಳು. ಈಗ ದೊಡ್ಡ ಮೊತ್ತದ ಲಾಟರಿ ಸಿಕ್ಕಿರುವುದು ನನಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Cheapest Flights at Just 85 Rs : 1975 ಇಸವಿಯ ಮುಂಬೈ ಟು ಗೋವಾ ಫ್ಲೈಟ್ ಟಿಕೆಟ್ ವೈರಲ್ ! ಟಿಕೆಟ್ ದರ ಕೇಳೆದ್ರೆ ಬೆರಗ್ತಾಗ್ತೀರ!