Home International America: ಡೈರಿ ಫಾರ್ಮ್ ನಲ್ಲಿ ಭೀಕರ ಸ್ಫೋಟ! 18ಸಾವಿರಕ್ಕೂ ಅಧಿಕ ಹಸುಗಳ ಮೃತ್ಯು!

America: ಡೈರಿ ಫಾರ್ಮ್ ನಲ್ಲಿ ಭೀಕರ ಸ್ಫೋಟ! 18ಸಾವಿರಕ್ಕೂ ಅಧಿಕ ಹಸುಗಳ ಮೃತ್ಯು!

America

Hindu neighbor gifts plot of land

Hindu neighbour gifts land to Muslim journalist

Texas dairy: ಅಮೆರಿಕದ(America) ಟೆಕ್ಸಾಸ್‌ನಲ್ಲಿನ ಡೈರಿ ಫಾರ್ಮ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಸ್ಫೋಟದ ಪರಿಣಾಮ ಬರೋಬ್ಬರಿ 18 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟ ಭೀಕರ ಘಟನೆ ನಡೆದಿದೆ.

ಅಮೆರಿಕದಲ್ಲಿ ಜಾನುವಾರುಗಳ ಕೊಟ್ಟಿಗೆಗಳಲ್ಲಿ ಬೆಂಕಿ ದುರಂತಗಳು ನಡೆಯುವುದು ಹೊಸತಲ್ಲ ಎನ್ನಲಾಗಿದ್ದು, ಆದರೆ ಟೆಕ್ಸಾಸ್‌ನಲ್ಲಿ (Texas dairy) ನಡೆದ ಈ ಸ್ಫೋಟವು ಅಮೆರಿಕದ ಡೈರಿ ಫಾರ್ಮ್‌ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ. ಈ ಘಟನೆಯಲ್ಲಿ ಅನೇಕ ಹಸುಗಳು ಸಜೀವ ದಹನವಾಗಿದ್ದು, ಜೊತೆಗೆ ಅನೇಕ ಹಸುಗಳು( Cattle Died)ಉಸಿರುಗಟ್ಟಿ ಸಾವನ್ನಪ್ಪಿದೆ. ಇದೀಗ ಸಾರ್ವಜನಿಕರ ಸುರಕ್ಷತೆಯನ್ನು(Safety) ಗಮನದಲ್ಲಿಟ್ಟುಕೊಂಡು ಫಾರ್ಮ್‌ನ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ ಎನ್ನಲಾಗಿದ್ದು, ಈ ಘಟನೆಯ ಬಗ್ಗೆ ಡೈರಿಯ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಫೋಟೋಗಳು ಹರುದಾಡುತ್ತಿದ್ದು, ಸ್ಫೋಟದ ನಂತರ ಸ್ಥಳದಲ್ಲಿ ಭಾರೀ ಬೆಂಕಿ (Fire)ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು (Fire Brigade)ಆಗಮಿಸಿದ್ದು, ಫಾರ್ಮ್‌ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.