Home International ರಷ್ಯಾ- ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್ !! | ರಷ್ಯಾ ಅಧ್ಯಕ್ಷನ...

ರಷ್ಯಾ- ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್ !! | ರಷ್ಯಾ ಅಧ್ಯಕ್ಷನ ಪ್ರೇಯಸಿ ಯಾರು ಗೊತ್ತಾ ??

Hindu neighbor gifts plot of land

Hindu neighbour gifts land to Muslim journalist

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಡೆಯುತ್ತಲೇ ಇದೆ. ಈಗಾಗಲೇ ಯುದ್ಧದಲ್ಲಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದು, ಅದೆಷ್ಟೋ ಜನ ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.‌ ಹೀಗಿರುವಾಗ ಈ ಯುದ್ಧದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಪ್ರೇಯಸಿ ಹೆಸರು ಹೆಚ್ಚು ಸುದ್ದಿಯಾಗುತ್ತಿದೆ. ಅರೇ ಯಾರೀಕೆ !!?

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಪುಟಿನ್‌ ಅವರ ಗರ್ಲ್‌ಫ್ರೆಂಡ್‌ ತನ್ನ ಮೂವರು ಮಕ್ಕಳೊಂದಿಗೆ ಸ್ವಿಟ್ಜರ್‌ಲೆಂಡಿನ ಪ್ರಸಿದ್ಧ ವಿಲ್ಲಾವೊಂದರಲ್ಲಿ ಅಡಗಿಕೊಂಡಿದ್ದಾರೆ. ಅವರು ದೇಶದಿಂದ ಹೊರಹಾಕಬೇಕು ಎಂದು ಸ್ವಿಟ್ಜರ್‌ಲೆಂಡ್‌ಗೆ ಅನೇಕ ಮಂದಿ ಪತ್ರ ಬರೆದು ಒತ್ತಾಯಿಸಿದ್ದಾರೆ. ರಷ್ಯಾ, ಉಕ್ರೇನ್‌, ಬೆಲಾರಸ್‌ನ ಅನೇಕರು ಸ್ವಿಟ್ಜರ್‌ಲೆಂಡ್‌ಗೆ ಈ ಒತ್ತಾಯ ಮಾಡಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಸುಮಾರು 50,000ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.

ಜಿಮ್ನಾಸ್ಟಿಕ್‌ ಒಲಿಂಪಿಕ್‌ ಚಿನ್ನ ಪದಕ ವಿಜೇತೆ 38 ವರ್ಷದ ಅಲೀನಾ ಕಬೇವಾ ಅವರೇ ಪುಟಿನ್‌ ಅವರ ಪ್ರೇಯಸಿ ಎಂದು ಹೇಳಲಾಗಿದೆ. ಆದರೆ ರಷ್ಯಾ ಅಧ್ಯಕ್ಷ ಪುಟಿನ್‌, ಅಲೀನಾ ಅವರನ್ನು ತನ್ನ ಪ್ರೇಯಸಿ ಎಂದು ಎಲ್ಲಿಯೂ ಅಧಿಕೃತವಾಗಿ ಪರಿಚಯಿಸಿಕೊಂಡಿಲ್ಲ.

ಉಕ್ರೇನ್‌ ಮೇಲಿನ ಯುದ್ಧದ ಸಂದರ್ಭದಲ್ಲೇ ಅಲೀನಾ ಅವರನ್ನು ಸ್ವಿಟ್ಜರ್‌ಲೆಂಡ್‌ಗೆ ಕಳುಹಿಸಲಾಗಿದೆ. ಈಕೆ ಪುಟಿನ್‌ ಅವರ ಯುನೈಟೆಡ್‌ ರಷ್ಯಾ ಪಕ್ಷವನ್ನು ಪ್ರತಿನಿಧಿಸುವ ಸಂಸತ್‌ ಸದಸ್ಯರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಏಳು ವರ್ಷಗಳಿಂದ ಪ್ರಮುಖ ಕ್ರೆಮ್ಲಿನ್‌ ಪರ ಮಾಧ್ಯಮ ಸಮೂಹದ ನ್ಯಾಷನಲ್‌ ಮೀಡಿಯಾ ಗ್ರೂಪ್‌ ನಿರ್ದೇಶಕರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಲೀನಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಸ್ಕೋದಲ್ಲಿ ನಡೆದ ಡಿವೈನ್‌ ಗ್ರೇಸ್‌ ರಿದಮಿಕ್‌ ಜಿಮ್ನಾಸ್ಟಿಕ್‌ ಟೂರ್ನಮೆಂಟ್‌ನಲ್ಲಿ ಅವರು ಕೊನೆಯ ಬಾರಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಇವರು 2004ರ ಒಲಿಂಪಿಕ್ಸ್‌ನಲ್ಲಿ ರಿದಮಿಕ್‌ ಜಿಮ್ನಾಸ್ಟಿಕ್‌ನಲ್ಲಿ ಚಿನ್ನ ಗೆದ್ದಿದ್ದರು.

ರಷ್ಯಾದ ರಾಜಕೀಯ, ಮಾಧ್ಯಮ ಮತ್ತು ಮಾಜಿ ಅಥ್ಲೀಟ್ ಅಲೀನಾ ಕಬೇವಾ ನಿಮ್ಮ ದೇಶದಲ್ಲಿ ರಷ್ಯಾದ ಒಕ್ಕೂಟದ ಮೇಲೆ ವಿಧಿಸಲಾದ ನಿರ್ಬಂಧಗಳ ಪರಿಣಾಮಗಳನ್ನು ಮರೆಮಾಚುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಉಕ್ರೇನ್‌ ಮೇಲಿನ ಯುದ್ಧ ನಿರ್ಣಯದಲ್ಲಿ ತಟಸ್ಥ ಧೋರಣೆ ಹೊಂದಿರುವ ಸ್ವಿಟ್ಜರ್‌ಲೆಂಡ್‌ ತನ್ನ ನಿಯಮವನ್ನು ಉಲ್ಲಂಘಿಸಿದೆ. ಕೂಡಲೇ ಅವರನ್ನು ದೇಶದಿಂದ ಹೊರಹಾಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬಂದಿದೆ.