Home International ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆಯೇ ಮದುವೆಯಾದ ಉಕ್ರೇನ್ ಸೈನಿಕ !! | ಯುದ್ಧಭೂಮಿಯಲ್ಲಿ ಮದುವೆಯಾದ...

ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆಯೇ ಮದುವೆಯಾದ ಉಕ್ರೇನ್ ಸೈನಿಕ !! | ಯುದ್ಧಭೂಮಿಯಲ್ಲಿ ಮದುವೆಯಾದ ಈ ಜೋಡಿಯ ಫೋಟೋ ವೈರಲ್

Hindu neighbor gifts plot of land

Hindu neighbour gifts land to Muslim journalist

ರಷ್ಯಾ ಹಾಗೂ ಉಕ್ರೇನ್ ನಡುವೆ ಸಂಘರ್ಷ ಆರಂಭವಾಗಿ 11 ದಿನಗಳು ಕಳೆದಿದ್ದು, ಈಗಾಗಲೇ ಅದೆಷ್ಟೋ ಸೈನಿಕರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದಲ್ಲದೆ ಸಾವಿರಾರು ಜನರು ತಮ್ಮ ಮನೆ ಮಠ ಕಳೆದುಕೊಂಡು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆದರೆ ಈ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ ಸೈನಿಕನೊಬ್ಬ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.

ಪ್ರಾದೇಶಿಕ ರಕ್ಷಣೆಯ 112 ಬ್ರಿಗೇಡ್‍ನ ಲೆಸ್ಯಾ ಮತ್ತು ವ್ಯಾಲೆರಿ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇವರಿಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೀವಿ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಕ್ಯಾಪ್ಷನ್‍ನಲ್ಲಿ ಇಂದು ಪ್ರಾದೇಶಿಕ ರಕ್ಷಣೆಯ 112 ಬ್ರಿಗೇಡ್‍ನ ಉಕ್ರೇನ್ ರಷ್ಯಾ ಯುದ್ಧದ ಪ್ರದೇಶದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಲೆಸ್ಯಾ ಮತ್ತು ವ್ಯಾಲೆರಿ ವಿವಾಹವಾದರು ಎಂದು ಬರೆಯಲಾಗಿದೆ.

ಈ ಮುನ್ನ ಕೆಲವು ದಿನಗಳ ಹಿಂದೆ ಇದೇ ರೀತಿ ಕ್ಲೆವೆಟ್ಸ್ ಮತ್ತು ನಟಾಲಿಯಾ ವ್ಲಾಡಿಸ್ಲೇವ್ ಎಂಬ ಮತ್ತೊಂದು ಜೋಡಿ ಉಕ್ರೇನ್‍ನ ಒಡೆಸ್ಸಾದಲ್ಲಿನ ಬಾಂಬ್ ಶೆಲ್ಟರ್​​ನಲ್ಲಿ ವಿವಾಹವಾಗಿದ್ದರು. ಈ ದಂಪತಿಯ ಮದುವೆ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೋಟೋದಲ್ಲಿ ವೇಳೆ ವರ ಸಮವಸ್ತ್ರ ಧರಿಸಿದ್ದರು ಮತ್ತು ವಧು ಹೂಗುಚ್ಛವನ್ನು ಹಿಡಿದುಕೊಂಡಿದ್ದರು.

ಸದ್ಯ ರಷ್ಯಾದ ಮಿಲಿಟರಿ ಉಕ್ರೇನ್‍ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣವನ್ನು ನಾಶಪಡಿಸಿದೆ. ಅಧ್ಯಕ್ಷ ಝೆಲೆನ್ಸ್ಕಿ ಅವರು ಉಕ್ರೇನ್‍ನಲ್ಲಿ ವಿಮಾನ ಹಾರಾಟದ ಮೇಲೆ ನಿಷೇಧ ಹೇರಲು ವಿದೇಶಗಳಿಗೆ ಒತ್ತಾಯಿಸಿದ್ದಾರೆ. ಆದರೆ ಈ ಪ್ರಸ್ತಾವನೆಯನ್ನು ನ್ಯಾಟೋ ತಿರಸ್ಕರಿಸಿದೆ.