Home International America: ಕಾಮತೃಷೆ ತೀರಿಸಿಕೊಳ್ಳಲು ಶಾಲಾ ವಿದ್ಯಾರ್ಥಿಗಳ ಬಳಕೆ! 6 ಶಿಕ್ಷಕಿಯರನ್ನು ಬಂಧಿಸಿದ ಅಮೇರಿಕಾ ಪೋಲೀಸ್!

America: ಕಾಮತೃಷೆ ತೀರಿಸಿಕೊಳ್ಳಲು ಶಾಲಾ ವಿದ್ಯಾರ್ಥಿಗಳ ಬಳಕೆ! 6 ಶಿಕ್ಷಕಿಯರನ್ನು ಬಂಧಿಸಿದ ಅಮೇರಿಕಾ ಪೋಲೀಸ್!

America

Hindu neighbor gifts plot of land

Hindu neighbour gifts land to Muslim journalist

America : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ದೌರ್ಜನ್ಯ ಎಸಗಿ ತಮ್ಮ ಕಾಮ ತೃಷೆಗೆ ಬಳಸಿಕೊಂಡು, ಧರ್ಮದೇಟು ತಿಂದು ಜೈಲುಪಾಲಾದ ಹಲವು ಶಿಕ್ಷಕರನ್ನು ನಾವು ನೋಡಿದ್ದೇವೆ. ಆದರೆ ಅಮೇರಿಕಾ (America) ದಲ್ಲಿ ವಿದ್ಯಾರ್ಥಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಕೇವಲ ಎರಡು ದಿನಗಳಲ್ಲಿ ಒಟ್ಟು ಆರು ಮಹಿಳಾ ಶಿಕ್ಷಕಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳನ್ನು ಲೈಂಗಿಕ ತೃಷೆಗೆ ಬಳಸಿದ ಆರೋಪದ ಮೇಲೆ ಆರು ಮಂದಿ ಶಿಕ್ಷಕಿಯರನ್ನು (6 Teachers Arrested) ಅಮೆರಿಕಾದಲ್ಲಿ ಪೊಲೀಸರು (US Police) ಬಂಧನ ಮಾಡಿದ್ದಾರೆ. ಎರಡು ದಿನದ ಅವಧಿಯಲ್ಲಿ ಒಟ್ಟು ಆರು ಮಂದಿ ಮಹಿಳಾ ಶಿಕ್ಷಕರನ್ನು ಜೈಲಿಗೆ ಅಟ್ಟಲಾಗಿದ್ದು, ಕಳೆದ ಅನೇಕ ಸಮಯದಿಂದ ಮಕ್ಕಳನ್ನು ಲೈಂಗಿಕ ದುರ್ಬಳಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕ್ರಿಮಿನಲ್ ದೂರಿನ ಪ್ರಕಾರ 16 ವರ್ಷದ ವಿದ್ಯಾರ್ಥಿಯನ್ನು ಮೂರು ಬಾರಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ ಶೆಲ್​ ಮೇಲಿದೆ. ಗುರುವಾರ ಆಕೆಯನ್ನು ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಶೆಲ್​, ವುಡ್​ಲಾನ್​ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿದ್ದಾಳೆ. ಇದಕ್ಕೂ ಮುನ್ನ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದಳು. ಆರೋಪ ಬಂದ ಕೂಡಲೇ 38 ವರ್ಷದ ಶಿಕ್ಷಕಿಯನ್ನು ಆಡಳಿತಾತ್ಮಕ ರಜೆ ಮೇಲೆ ಇರಿಸಲಾಗಿತ್ತು.

ಇನ್ನು ಇದೊಂದೇ ಪ್ರಕರಣವಲ್ಲದೇ, ಮಕ್ಕಳನ್ನು ಲೈಂಗಿಕ ದುರುಪಯೋಗ ಮಾಡಿದ ಆರೋಪದ ಮೇಲೆ ಯುಎಸ್‌ನಲ್ಲಿ ಕನಿಷ್ಠ ಆರು ಮಂದಿ ಶಿಕ್ಷಕಿಯರ ಮೇಲೆ ಪ್ರಕರಣಗಳು ದಾಖಲಾಗಿದೆ. ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಎಂಬಾಕೆಯ ಮೇಲೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ.

ಒಕ್ಲಹೊಮಾದ (Oklahoma) 26 ವರ್ಷದ ಶಿಕ್ಷಕಿ ಇಮಿಲಿ ಹಾಂಕಾಕ್ ಎಂಬಾಕೆಯನ್ನು ಕೂಡ ಗುರುವಾರ ಇದೇ ರೀತಿಯ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವಿದ್ಯಾರ್ಥಿಯೊಂದಿಗೆ ಆಕೆಯ ಸಂಬಂಧದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕ ನಂತರ ಈ ಬಂಧನ ನಡೆದಿದೆ.

ಹಾಗೆಯೇ, ಲಿಂಕನ್ ಕೌಂಟಿಯ ಅರೆಕಾಲಿಕ ಶಿಕ್ಷಕಿಯೊಬ್ಬರು 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಕೇಳಿ ಬಂದಿದೆ. ಎಮ್ಮಾ ಡೆಲಾನಿ ಎಂಬಾಕೆ ಬದಲಿ ಶಿಕ್ಷಕಿಯಾಗಿ ಹ್ಯಾನ್‌ಕಾಕ್ ವೆಲ್‌ಸ್ಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆ ಶಾಲೆಯಲ್ಲೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾಳೆ. ಇದಕ್ಕೆ ಪೂರಕವಾಗಿ ಆಕೆ ಸ್ನಾಪ್‌ಚಾಟ್‌ ಆಪ್‌ನಲ್ಲಿ ಸಂಭಾಷಣೆ ನಡೆಸಿರುವ ದಾಖಲೆಗಳೂ ಸಿಕ್ಕಿವೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿರುವ ಕ್ಯಾಥೋಲಿಕ್ ಪ್ರೌಢಶಾಲೆಯಲ್ಲಿ (Catholic high school) ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ಕ್ರಿಸ್ಟನ್ ಗ್ಯಾಂಟ್ ಕೂಡ ಹದಿಹರೆಯದ ವಿದ್ಯಾರ್ಥಿಯೊಂದಿಗೆ ತನ್ನ ಶಾಲೆಯ ಒಳಗೆ ಮತ್ತು ಬೇರೆಡೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಎಫ್‌ಎಫ್‌ಎಕ್ಸ್‌ನೌ ನ್ಯೂಸ್​ ಪ್ರಕಾರ, ಜೇಮ್ಸ್ ಮ್ಯಾಡಿಸನ್ ಹೈಸ್ಕೂಲ್‌ನಲ್ಲಿ ಅಲಿಹ್ ಖೇರಾಡ್‌ಮಂಡ್ (33) ಹೆಸರಿನ ಶಿಕ್ಷಕಿ ಹಲವಾರು ತಿಂಗಳುಗಳ ಕಾಲ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಹೊರಿಸಲಾಗಿದೆ. 2016 ರಿಂದ ಫೇರ್‌ಫ್ಯಾಕ್ಸ್ ಕೌಂಟಿ ಶಾಲೆಗಳಲ್ಲಿ ಶಿಕ್ಷಕಿಯಾಗಿರುವ ಖೇರಾಡ್‌ಮಂಡ್​ಳನ್ನು ಬಂಧಿಸಲಾಗಿದೆ.

ಹಾಗೆಯೇ ಪೆನ್ಸಿಲ್ವೇನಿಯಾದ (Pennsylvania) ಬಾಲಕರ ಶಾಲೆಯ ಶಿಕ್ಷಕಿಯ ವಿರುದ್ಧ 17 ವರ್ಷದ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಹಾಗೆಯೇ 26 ವರ್ಷದ ಶಿಕ್ಷಕಿ ಹನ್ನಾ ಮಾರ್ತ್ (Hannah Marth) ಎಂಬಾಖೆ ನಾರ್ಥಾಂಪ್ಟನ್ ಏರಿಯಾ ಹೈಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ನೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ಕಂಡು ಬಂದ ನಂತರ ಆಕೆಯನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ.