Home Interesting ತಿಂಡಿಪೋತ ಕಳ್ಳ ! ತಿಂಡಿ ತಿಂದು, ಬಿಯರ್ ಕುಡಿದು, ಸ್ನಾನ ಮಾಡಿ 15 ಸಾವಿರ ರೂ....

ತಿಂಡಿಪೋತ ಕಳ್ಳ ! ತಿಂಡಿ ತಿಂದು, ಬಿಯರ್ ಕುಡಿದು, ಸ್ನಾನ ಮಾಡಿ 15 ಸಾವಿರ ರೂ. ಇಟ್ಟು ಹೋದ

Hindu neighbor gifts plot of land

Hindu neighbour gifts land to Muslim journalist

ಇಲ್ಲೊಬ್ಬ ಕಳ್ಳ ಮನೆಗೆ ನುಗ್ಗಿ ತಿಂಡಿ ತಿಂದು ಬಿಯರ್ ಕುಡಿದು ತಾನು ಕದ್ದ ದುಡ್ಡನ್ನು ಮನೆಯೊಳಕ್ಕೆ ಇಟ್ಟು ಹೋಗಿದ್ದಾನೆ.

ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಇದೀಗ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ.

ಶಸ್ತ್ರಸಜ್ಜಿತ ಕಳ್ಳನೊಬ್ಬ ಯಾರೂ ಇಲ್ಲದ ಮನೆಯೊಳಗೆ ಕಿಟಕಿ ಮುರಿದು ಒಳಗೆ ನುಗ್ಗಿದ್ದು,ಆ ಮನೆಯಲ್ಲಿಯೇ ಸ್ನಾನ ಮುಗಿಸಿ,ತಿಂಡಿ-ತಿನಿಸು ಮಾಡಿದ್ದಾನೆ. ಮನೆಯಲ್ಲಿದ್ದ ಬಿಯರ್ ಕುಡಿದು ಮಲಗಿದ್ದಾನೆ.

ಮಲಗಿ ಬೆಳಗ್ಗೆ ಎದ್ದು ಹೋಗಿದ್ದಾನೆ. ಈ ವರ್ತನೆ ಕಂಡು ಮನೆಯವರಿಗೆ ಶಾಕ್ ಆಗಿದೆ.

ಲಗುಬಗೆಯಿಂದ ಮನೆಯಲ್ಲಿ ಇಟ್ಟಿದ್ದ ನಗದು, ಆಭರಣಗಳನ್ನು ಪರೀಕ್ಷಿಸಿದ್ದಾರೆ. ಆದರೆ ಅವರಿಗೆ ಶಾಕ್ ಆಗಿದೆ.

ಮನೆಯಲ್ಲಿದ್ದ ತಿಂಡಿ ಖಾಲಿಯಾಗಿದ್ದರೂ, ಹಣ-ಒಡವೆ ಮಾತ್ರ ಸರಿಯಾಗಿಯೇ ಇತ್ತು. ಅಲ್ಲದೇ ಟೇಬಲ್ ಮೇಲೆ 200 ಡಾಲರ್ (ಸುಮಾರು 15 ಸಾವಿರ ರೂಪಾಯಿ) ಇತ್ತು!