Home International Kerstin Tristan: ಬಟ್ಟೆ ಹಾಕೋಕೇ ಬೋರ್ ಎಂದು ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡ್ಲು! ಇದಕ್ಕಾಗಿ ವ್ಯಯಿಸಿದ್ಲು...

Kerstin Tristan: ಬಟ್ಟೆ ಹಾಕೋಕೇ ಬೋರ್ ಎಂದು ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡ್ಲು! ಇದಕ್ಕಾಗಿ ವ್ಯಯಿಸಿದ್ಲು ಬರೋಬ್ಬರಿ 24 ಲಕ್ಷ!

Kerstin Tristan
Image source- The sun

Hindu neighbor gifts plot of land

Hindu neighbour gifts land to Muslim journalist

Kerstin Tristan :ಇತ್ತೀಚಿನ ದಿನಗಳಲ್ಲಿ ಜನರಿಗೆ ಫೇಮಸ್(Famous) ಆಗೋದೆ ಒಂದು ಟ್ರೆಂಡ್(Trending) ಆಗಿಬಿಟ್ಟಿದೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಿಯಾರು. ಅಂತೆಯೇ ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ಧಿಯಾಗ್ತಿದ್ದಾಳೆ. ಯಾಕೆ ಗೊತ್ತಾ? ಇವಳ ಅವಸ್ಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ. ಯಾಕಂದ್ರೆ ಈಕೆಗೆ ಬಟ್ಟೆ ಹಾಕೋದಂದ್ರೆ ಸುತಾರಾಂ ಇಷ್ಟವಿಲ್ಲ. ಇದಕ್ಕಾಗಿ ಈಕೆ ಮೈತುಂಬಾ ಟ್ಯಾಟೂ(Tattoo) ಹಾಕಿಸಿಕೊಂಡಿದ್ದಾಳೆ.

ಹೌದು, ಮೂಲತಃ ಜರ್ಮನಿಯ(Jarman) ನಿವಾಸಿಯಾದ 50ವರ್ಷಗಳ ಕೆರ್ಸ್ಟಿನ್ ಟ್ರಿಸ್ಟಾನ್(Kerstin Tristan) ಎಂಬ ಮಹಿಳೆ ಎಷ್ಟು ಸೋಮಾರಿ ಅಂದ್ರೆ ಈಕೆಗೆ ಬಟ್ಟೆ ತೊಡುವುದು, ಬಿಚ್ಚುವುದು ಅಂದ್ರೆನೆ ಭಾರೀ ಕಷ್ಟವಂತೆ. ಹೀಗಾಗಿ ಈ ಅವ್ಯವಸ್ಥೆಯಿಂದ ಮುಕ್ತಿ ಪಡೆಯುವ ದಾರಿಯನ್ನು ಅವರು ಹುಡುಕುತ್ತಿದ್ದರು. ಅಂತೂ ಇದಕ್ಕೊಂದು ಪರಿಹಾರ ಕಂಡುಕೊಂಡ ಕೆರ್ಸ್ಟಿನ್ ಟ್ರಿಸ್ಟಾನ್ ಸದ್ಯ 24 ಲಕ್ಷ ಖರ್ಚು ಮಾಡಿ ತನ್ನ ಮೈಮೇಲೆಲ್ಲ ಕಲರ್ ಫುಲ್ ಟ್ಯಾಟೂ(Color full Tattoo) ಹಾಕಿಸಿಕೊಂಡಿದ್ದಾರೆ.

ಸದ್ಯ ಕೆರ್ಸ್ಟಿನ್ ಟ್ರಿಸ್ಟಾನ್ ಅವರ ಇಡೀ ದೇಹವು ಹಚ್ಚೆಗಳಿಂದ ತುಂಬಿದೆ. ಮುಖ ಹೊರತುಪಡಿಸಿ ದೇಹದ ಎಲ್ಲಾ ಭಾಗಗಳಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಟ್ಯಾಟೂ ಹಾಕಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೇಹ ಪೂರ್ತಿ ಚಿತ್ರ ವಿಚಿತ್ರ ಡಿಸೈನ್‌ ಇರೋ ಕಾರಣ ನಗ್ನತೆ ಮರೆಮಾಚಿದೆ. ಹೀಗಾಗಿ ಇನ್ನುಮುಂದೆ ಕೆರ್ಸ್ಟಿನ್ ಬಟ್ಟೆ ಧರಿಸುವ ಅಗತ್ಯವಿಲ್ಲ.

ಅಂದಹಾಗೆ ಕ್ರಿಸ್ಟಿನ್ ಟ್ಯಾಟೂ ಮಾಡೆಲ್(Tattoo model) ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೈಮೇಲೆ ಬಣ್ಣಬಣ್ಣದ ಹೂವುಗಳು, ಪಕ್ಷಿಗಳು, ಚಿಟ್ಟೆಗಳ ವಿನ್ಯಾಸದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಮಾಡೆಲ್ ಆಗಿ ಚೆನ್ನಾಗಿ ಸಂಪಾದಿಸುತ್ತಿದ್ದಾಳೆ. ಅದೇ ಸಮಯದಲ್ಲಿ, ಅವರು Instagram ನಲ್ಲಿ 189K ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲದೆ ಟ್ಯಾಟೂ ಮಾಡೆಲ್‌ ಆಗಿರುವ ಆಕೆ ಫೋಟೋಶೂಟ್‌ ಮೂಲಕ ಲಕ್ಷಗಟ್ಟಲೆ ಸಂಪಾದಿಸುತ್ತಾರೆ. ಇದಲ್ಲದೇ ತನ್ನ ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಮೂಲಕ ಉತ್ತಮ ಗಳಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:Gold-Silver Price today: ಇಂದು ಮತ್ತೆ ಚಿನ್ನದ ದರದಲ್ಲಿ ತಟಸ್ಥತೆ!