Home International 133 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ !! | ಎಲ್ಲಾ ಪ್ರಯಾಣಿಕರು ಸುಟ್ಟು ಭಸ್ಮವಾಗಿರುವ ಶಂಕೆ

133 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ !! | ಎಲ್ಲಾ ಪ್ರಯಾಣಿಕರು ಸುಟ್ಟು ಭಸ್ಮವಾಗಿರುವ ಶಂಕೆ

Hindu neighbor gifts plot of land

Hindu neighbour gifts land to Muslim journalist

133 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ನೆರೆ ರಾಷ್ಟ್ರ ಚೀನಾದಲ್ಲಿ ಪತನಗೊಂಡಿದೆ.

ಚೀನಾ ಈಸ್ಟರ್ನ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ವಿಮಾನವು ದಕ್ಷಿಣ ಚೀನಾದ ಗುವಾಂಗ್ಸಿಯ ವುಝೌ, ಟೆಂಗ್ ಪ್ರದೇಶದ ಬೆಟ್ಟದಲ್ಲಿ ಪತನಗೊಂಡಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ವಿಮಾನ ನೆಲಕ್ಕೆ ಬಿದ್ದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಅಪಘಾತದ ಬಳಿಕ ದಟ್ಟವಾಗಿ ಹೊಗೆ ಕಾಣಿಸಿಕೊಂಡಿರುವ ವೀಡಿಯೋವೊಂದು ಇದೀಗ ವೈರಲ್ ಆಗಿದೆ. ಆದರೆ ಸಾವು ನೋವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಚೀನಾ ಈಸ್ಟರ್ನ್ ಫೈಟ್ MU5735 ಸೋಮವಾರ ಮಧ್ಯಾಹ್ನ 1 ಗಂಟೆಗೆ ಕುನ್ನಿಂಗ್ ನಗರದಿಂದ ಟೇಕ್ ಆಫ್ ಆದ ನಂತರ ಗುವಾಂಗ್‌ನಲ್ಲಿ ಇಳಿಯಬೇಕಾಗಿತ್ತು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.