Home Interesting ದುಬೈನಲ್ಲಿ ಇನ್ನು ಎರಡೂವರೆ ದಿನ ವೀಕೆಂಡ್ | ಸುದೀರ್ಘ ವೀಕೆಂಡ್ ನೀಡಿದ ಮೊದಲ ದೇಶವಾಗಿ ಹೊರಹೊಮ್ಮಿದ...

ದುಬೈನಲ್ಲಿ ಇನ್ನು ಎರಡೂವರೆ ದಿನ ವೀಕೆಂಡ್ | ಸುದೀರ್ಘ ವೀಕೆಂಡ್ ನೀಡಿದ ಮೊದಲ ದೇಶವಾಗಿ ಹೊರಹೊಮ್ಮಿದ ಯುಎಇ !!

Hindu neighbor gifts plot of land

Hindu neighbour gifts land to Muslim journalist

ಗಗನಚುಂಬಿ ಕಟ್ಟಡಗಳ ನಗರ ಹಾಗೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೆಂದು ಹೆಸರಾಗಿರುವುದು ದುಬೈ. ಇದೀಗ ದುಬೈ ತನ್ನ ದೇಶದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಿದೆ. ಯುಎಇ ತನ್ನ ವಾರಾಂತ್ಯವನ್ನು ಎರಡು ದಿನಗಳಿಗೆ ಬದಲಾಗಿ ಎರಡೂವರೆ ದಿನಗಳಿಗೆ ಹೆಚ್ಚಿಸಿಕೊಂಡಿದೆ. ವಾರಾಂತ್ಯಕ್ಕೆ ಸಂಬಂಧಿಸಿದಂತೆ ಅಲ್ಲಿ ಹೊಸ ನಿಯಮಗಳು ಜಾರಿಗೆ ಬಂದಿದೆ.

ಈಗ ವೇಗವಾಗಿ ಮುನ್ನುಗ್ಗುತ್ತಿರುವ ಆಧುನಿಕ ಜಗತ್ತಿಗೆ ತಕ್ಕಂತೆ ತಾನೂ ಬದಲಾಗಲೂ ಪಾಶ್ಚಿಮಾತ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಇನ್ನುಮುಂದೆ ಶನಿವಾರ ಮತ್ತು ಭಾನುವಾರ ಅಲ್ಲಿ ವೀಕೆಂಡ್ ಆಗಲಿದೆ.

ಅಲ್ಲದೆ ಇನ್ನೊಂದು ವಿಚಾರ ಎಂದರೆ ಶುಕ್ರವಾರ ಮುಸ್ಲಿಮರಿಗೆ ನಮಾಜ್ ಇರುವುದರಿಂದ ಶುಕ್ರವಾರ ಅರ್ಧ ದಿನವನ್ನೂ ವೀಕೆಂಡ್ ಪಾಲಿಗೆ ಸೇರಿಸಲಾಗಿದೆ. ಅದರಂತೆ ಇನ್ನುಮುಂದೆ ಯುಎಇ ನಲ್ಲಿ ವೀಕೆಂಡ್ ಎಂದರೆ ಎರಡೂವರೆ ದಿನಗಳು.