Home International 22 ವರ್ಷದ ಮಗಳ ಐಡೆಂಟಿಟಿ ಬಳಸಿ ಕಾಲೇಜು ಮೆಟ್ಟಲು ಹತ್ತಿದ 48 ರ ಮಹಿಳೆ !

22 ವರ್ಷದ ಮಗಳ ಐಡೆಂಟಿಟಿ ಬಳಸಿ ಕಾಲೇಜು ಮೆಟ್ಟಲು ಹತ್ತಿದ 48 ರ ಮಹಿಳೆ !

Hindu neighbor gifts plot of land

Hindu neighbour gifts land to Muslim journalist

ನ್ಯೂಯಾರ್ಕ್​: ಈ ಮಹಿಳೆ ಏಕಾಏಕಿ ತನ್ನ 26 ವರ್ಷ ಪ್ರಾಯ ಕಳೆದುಕೊಂಡಿದ್ದಳು. 48 ವರ್ಷ ವಯಸ್ಸಿನ ಆಕೆ 22 ವರ್ಷದ ಯುವತಿಯಾಗಿ ಬದಲಾಗಿದ್ದಳು. ತನ್ನ ವಯಸ್ಸನ್ನು ಮೈ ಮತ್ತು ಮನಸ್ಸಿನಿಂದ ಜಾರಿಸಿಕೊಂಡು ಆಕೆ ನವಯುವತಿಯಾಗಿ ಮತ್ತೆ ಕಾಲೇಜು ಮೆಟ್ಟಲು ಹತ್ತಿದ್ದಳು. ಇಂತಹ ವಿಚಿತ್ರ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ.

48 ವರ್ಷ ಪ್ರಾಯದ ಲೌರಾ ಓಗಲ್ಸ್​​ಬಿ ಎಂಬಾಕೆಗೆ 22 ವರ್ಷದ ಮಗಳಿದ್ದಳು.
ತನ್ನ 22 ವರ್ಷ ವಯಸ್ಸಿನ ಮಗಳ ಸೋಗು ತೊಟ್ಟು ಕಾಲೇಜು ಸೇರಿದ್ದಲ್ಲದೆ, ಚಿಕ್ಕ ವಯಸ್ಸಿನ ಯುವಕರೊಂದಿಗೆ ಡೇಟ್​ ಮಾಡಲು ಶುರು ಮಾಡಿದ್ದಾಳೆ. ಅಲ್ಲಿ ಎಲ್ಲರ ಜತೆಗೂ ಆಕೆಯನ್ನು ಬೇರೆ ಹೆಸರಿನಲ್ಲಿ (ಮಗಳ ಹೆಸರಿನಲ್ಲಿ) ಪರಿಚಯಿಸಿ ಕೊಂಡಿದ್ದಾಳೆ. ಅದಕ್ಕಾಗಿ ಆಕೆ ಎರಡು ವರ್ಷಗಳ ಕಾಲ ಹೊಸತೊಂದು ಪಟ್ಟಣಕ್ಕೆ ಹೋಗಿ ಅಲ್ಲಿ ಚೇಂಜ್ ಓವರ್ ಆಗಿದ್ದಾಳೆ.

ತನ್ನ ಮಗಳ ಐಡೆಂಟಿಟಿಯನ್ನು ಕದ್ದ ಲೌರಾ, ಅವಳ ಹೆಸರಿನಲ್ಲಿ ಸೋಷಿಯಲ್​ ಸೆಕ್ಯುರಿಟಿ ಕಾರ್ಡ್​​ಗೆ ಅರ್ಜಿ ಸಲ್ಲಿಸಿ 25 ಸಾವಿರ ಡಾಲರ್ ಅವ್ಯವಹಾರ ಮಾಡಿದ್ದಾಳೆ. ಯೂನಿವರ್ಸಿಟಿಗೆ ಎನ್​ರೋಲ್​ ಮಾಡಿಕೊಂಡು, ಶಿಕ್ಷಣ ಸಾಲ, ಡ್ರೈವಿಂಗ್​ ಲೈಸೆನ್ಸ್​ ಪಡೆದಿದ್ದಾಳೆ. ಅವಳನ್ನು 22 ವರ್ಷದವಳೆಂದು ನಂಬಿದ್ದ ಬಾಯ್​ಫ್ರೆಂಡ್​​ಗಳನ್ನೂ ಆಕೆ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಸೋಗಿನಲ್ಲಿ ಮೋಜು:

ಅರ್ಕಾನ್ಸಸ್​ನಲ್ಲಿ ತನ್ನ ಮಗಳೊಂದಿಗೆ ವಾಸಿಸುತ್ತಿದ್ದ ಮೊದಲಿಗೆ ಲೌರಾ ಏಕಾಂಗಿಯಾಗಿ ಮಿಸ್ಸೌರಿಯ ಮೌಂಟೇನ್​ ವ್ಯೂ ಪಟ್ಟಣಕ್ಕೆ ಸ್ಥಳಾಂತರಗೊಂಡು ಮಗಳೊಂದಿಗಿನ ಸಂಪರ್ಕ ಕಡಿದುಕೊಂಡಳು. 2016 ರಲ್ಲಿ ತನ್ನ ಮಗಳು ಲೌರೆನ್​ ಆಶ್ಲೇ ಹೇಯ್ಸ್​​ ಹೆಸರಿನಲ್ಲಿ ಸೋಷಿಯಲ್​ ಸೆಕ್ಯುರಿಟಿ ಕಾರ್ಡ್​​ಗೆ ಅರ್ಜಿ ಸಲ್ಲಿಸಿದಳು. ಮಿಸ್ಸೌರಿ ಡ್ರೈವರ್ಸ್​ ಲೈಸೆನ್ಸ್​​ಅನ್ನೂ ಅದೇ ಹೆಸರಲ್ಲಿ ಪಡೆದಿದಳು. 2017ರಲ್ಲಿ ಮಗಳ ಐಡಿ ಬಳಸಿ ಸೌತ್​ವೆಸ್ಟ್​ ಬ್ಯಾಪ್ಟಿಸ್ಟ್​ ಯೂನಿವರ್ಸಿಟಿಗೆ ಪ್ರವೇಶ ಪಡೆದ ಲೌರಾ, ವಿದ್ಯಾರ್ಥಿಗಳಿಗೆ ಸಿಗುವ ಸಾಲಗಳನ್ನು, ಪುಸ್ತಕಗಳ ಗ್ರಾಂಟ್​ಗಳನ್ನು ಪಡೆದಿದ್ದಳು ಎನ್ನಲಾಗಿದೆ.

ಸ್ಥಳೀಯ ಗ್ರಂಥಾಲಯವೊಂದರಲ್ಲಿ ಕೆಲಸ ಪಡೆದ ಆಕೆ ಸ್ಥಳೀಯರನ್ನು ತಾನು ತನ್ನ ನಿಜವಾದ ವಯಸ್ಸಿಗಿಂತ 26 ವರ್ಷ ಚಿಕ್ಕವಳೆಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದಳು. ಕಾಲೇಜಿನಲ್ಲಿ ಚಿಕ್ಕ ವಯಸ್ಸಿನ ಬಾಯ್ ಫ್ರೆಂಡ್ಸ್ ಗಳನ್ನೂ ಆಕೆ ಪಡೆಯಲು ಯಶಸ್ವಿ ಆಗಿದ್ದಳು. ಆಕೆಯ ವಯಸ್ಸು 22 ಎಂದು ನಂಬಿ ಹುಡುಗರೂ ಆಕೆಯ ಗೆಳೆತನಕ್ಕಾಗಿ ಮುಗಿ ಬಿದ್ದುಬಿಟ್ಟಿದ್ದರು.

ಆಕೆ ಇಂತಹಾ ಚೇಂಜ್ ಓವರ್ ಗೆ ತಯಾರಾಗಿದ್ದಳು ಎಂದರೆ, ಥೇಟು ಸಣ್ಣ ಪ್ರಾಯದ ಹುಡುಗಿಯ ಹಾಗೇ ಚೆಲ್ಲು ಚೆಲ್ಲು ಆಡುತ್ತಿದ್ದಳು. ಮಾಡರ್ನ್ ಲೇಟೆಸ್ಟ್ ಫ್ಯಾಷನ್ ಆಯ್ಕೆ ಮಾಡಿಕೊಂಡಿದ್ದಳು. ಹಾವ ಭಾವ ಭಂಗಿ ಅಂಗಿ ಎಲ್ಲವೂ 22 ರ ಯುವತಿಯದೇ !! ಅಲ್ಲದೆ ತನ್ನ ಸ್ನಾಪ್ ಚಾಟ್ ಅಕೌಂಟ್ ನಲ್ಲಿ ಮಾಡರ್ನ್ ಫೇಸ್ ಫಿಲ್ಟರ್ ಬಳಸಿ ತನ್ನ ಇಮೇಜ್ ಅನ್ನು ಸಣ್ಣ ವಯಸ್ಸಿನವರ ಹಾಗೆ ತೋರ್ಪಡಿಸುತ್ತಿದ್ದಳು.

ಆದರೆ 2 ವರ್ಷದ ನಂತರ ಆಕೆಯ ಬಗ್ಗೆ ಗೊತ್ತಾಗಿದೆ. ಆಕೆ
ತನ್ನ ಮಗಳಿನ ಗುರುತು-ವೇಷಗಳನ್ನು ತೊಟ್ಟು ವಂಚಿಸಿದ್ದಕ್ಕೆ ಇದೀಗ ಲೌರಾ ಓಗಲ್ಸ್​​ಬಿ ಎಂಬುವಳ ಮೇಲೆ ಮೊಕದ್ದಮೆ ಹೂಡಲಾಗಿದೆ.
ಲೌರಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಸೌತ್​ವೆಸ್ಟ್​ ಬಾಪ್ಟಿಸ್ಟ್​ ಯೂನಿವರ್ಸಿಟಿಗೆ ಮತ್ತು ತನ್ನ ಮಗಳು ಲೌರೆನ್​​ಗೆ 17,521 ಡಾಲರ್​ಗಳನ್ನು ಪರಿಹಾರವಾಗಿ ನೀಡಬೇಕೆಂದು ಕೋರ್ಟ್​ ಆದೇಶಿಸಿದೆ. ಜೊತೆಗೆ, ಆಕೆಗೆ 5 ವರ್ಷ ಜೈಲು ಶಿಕ್ಷೆ ಕೂಡ ವಿಧಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.