

Bali Temple: ಭಾರತದಲ್ಲಿ ದೇವರನ್ನು ನಾನಾ ರೀತಿಗಳಲ್ಲಿ ಪೂಜಿಸುವುದು ನಮಗೆ ತಿಳಿದಿರುವ ವಿಚಾರ. ಆದರೆ ಇದೀಗ ಇಂಡೋನೇಷ್ಯಾದ ಬಾಲಿ ದೇವಸ್ಥಾನವನ್ನು 28 ವರ್ಷದ ಜರ್ಮನಿ ಮೂಲದ ಪ್ರವಾಸಿ ಬೆತ್ತಲೆಯಾಗಿ ಪ್ರವೇಶ ಮಾಡಿದ್ದಲ್ಲದೆ, ವಿಚಿತ್ರವಾಗಿ ವರ್ತಿಸಿದ್ದಾಳೆ.
ಈ ಮೊದಲು ರಷ್ಯಾದ ಮಹಿಳೆಯೊಬ್ಬರು, ಬಾಲಿ ದೇವಸ್ಥಾನದ (Bali Temple) 700 ವರ್ಷಗಳಷ್ಟು ಹಳೆಯದಾದ ಪವಿತ್ರ ಆಲದ ಮರದ ಮುಂದೆ ಆಕೆಯ ಬೆತ್ತಲೆ ಫೋಟೋ ವೈರಲ್ ಆಗಿದ್ದು, ಸ್ಥಳೀಯ ಹಿಂದೂಗಳಲ್ಲಿ ಆಕ್ರೋಶವನ್ನು ಉಂಟುಮಾಡಿತ್ತು. ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
ಇದೀಗ ವರ್ಷಪ್ರತಿಯಂತೆ ಇಂಡೋನೇಷ್ಯಾದ ಬಾಲಿ ಪ್ರಾಂತ್ಯದ ಸರಸ್ವತಿ ಉಬುದ್ ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದರ್ಜಾ ತುಶಿನ್ಸ್ಕಿ ಎಂಬ ಯುವತಿ ಸಂಪೂರ್ಣ ಬೆತ್ತಲೆಯಾಗಿ ವೇದಿಕೆ ಹತ್ತಿ ಹೋಗಿ ದೇವಸ್ಥಾನದ ಬಾಗಿಲನ್ನು ತೆರೆದಿದ್ದಾಳೆ. ಈ ವೇಳೆ ಜೋರಾಗಿ ದೇವರ ಎದುರು ಏನೋ ಕೂಗಿಕೊಂಡಿದ್ದಾಳೆ. ಮತ್ತೆ ವೇದಿಕೆಗೆ ಎದುರಾಗಿ ಬೆತ್ತಲೆಯಾಗಿ ಬಂದಿದ್ದಾಳೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮಾಹಿತಿ ಪ್ರಕಾರ ಕಾರ್ಯಕ್ರಮಕ್ಕೆ ಟಿಕೆಟ್ ನಿರಾಕರಿಸಿದ ಆರೋಪಿ ಮಹಿಳೆ ದೇವಸ್ಥಾನದ ಭದ್ರತಾ ಸಿಬ್ಬಂದಿ ಹಿಂದೆ ಓಡಿಹೋಗಿ ಬೆತ್ತಲೆಯಾಗಿದ್ದಾಳೆ. ಆಕೆ ಹಿಂದೂ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಸದ್ಯ ದರ್ಜಾ ತುಶಿನ್ಸ್ಕಿ ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸದ್ಯ ಇಂಡೋನೇಷ್ಯಾದಲ್ಲಿ ಪ್ರವಾಸಿಗರ ಅಸಭ್ಯ ವರ್ತನೆಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: Helmet: ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಹೀಗೆ ಹೆಲ್ಮೆಟ್ ಹಾಕಿದರೂ ನೋ ಯೂಸ್ !













