Home Interesting ಇನ್ನೂ ಹುಟ್ಟದ ಮಗುವಿಗೆ ಬರೋಬ್ಬರಿ 3 ಲಕ್ಷ ರೂ. ವೆಚ್ಚದ ಬಟ್ಟೆ ಖರೀದಿ ಮಾಡಿದ ಮಹಿಳೆ...

ಇನ್ನೂ ಹುಟ್ಟದ ಮಗುವಿಗೆ ಬರೋಬ್ಬರಿ 3 ಲಕ್ಷ ರೂ. ವೆಚ್ಚದ ಬಟ್ಟೆ ಖರೀದಿ ಮಾಡಿದ ಮಹಿಳೆ !!

Hindu neighbor gifts plot of land

Hindu neighbour gifts land to Muslim journalist

ದಂಪತಿಗಳು ತಮಗೆ ಹುಟ್ಟುವ ಮಗುವಿಗಾಗಿ ಅದೆಷ್ಟೋ ಆಸೆಗಳನ್ನು ಹೊಂದಿರುತ್ತಾರೆ. ಮಗು ಹುಟ್ಟುವ ಮುಂಚೆಯೇ ಹಲವು ರೀತಿಯ ವಸ್ತುಗಳ ಖರೀದಿಯಲ್ಲಿ ತೊಡಗುವುದು ಮಾಮೂಲು. ಆದರೆ ಇಲ್ಲೊಬ್ಬಳು ಮಹಿಳೆ ಗರ್ಭ ಧರಿಸುವ ಮುನ್ನವೇ ಮಗುವಿಗಾಗಿ ಶಾಪಿಂಗ್​ ಮಾಡುತ್ತಿದ್ದಾಳೆ. ಬ್ರಿಟನ್ ಮೂಲದ ಈ ಮಹಿಳೆಯ ಕಥೆ ಇಲ್ಲಿದೆ ನೋಡಿ.

29 ವರ್ಷದ ಮಹಿಳೆ ಇತ್ತೀಚೆಗೆ ಮಮ್ಸ್​ನೆಟ್ ಹೆಸರಿನ ವೆಬ್‌ಸೈಟ್‌ನಲ್ಲಿ ಬಹಳ ವಿಚಿತ್ರವಾದ ವಿಷಯವನ್ನು ಹಂಚಿಕೊಂಡಿದ್ದಾಳೆ. ಮಹಿಳೆ ತಾನು ಇನ್ನೂ ಗರ್ಭಿಣಿಯಾಗಿಲ್ಲ, ಆದರೂ ಮಕ್ಕಳ ಬಟ್ಟೆಗಳನ್ನು ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇನೆ. ಈಗಾಗಲೇ ದುಬಾರಿ ಖರ್ಚುಗಳನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಹಗಲಿರುಳು ಗಂಡ ಹೆಂಡತಿ ಇಬ್ಬರು ಹಣ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ದುಡಿಯುವ ಮೂಲಕ ಹಣ ಒಟ್ಟು ಮಾಡಬೇಕು ಎಂಬ ಕನಸು ಅವರದ್ದು. ಹಾಗಾಗಿ ಮಗು ಮಾಡುವ ಪ್ಲಾನ್​ ಹಾಕಿಕೊಂಡಿಲ್ಲ. ಹಣ ಸಂಪಾದಿಸಿ ನಂತರ ಮಗು ಮಾಡುವ ಎಂಬ ಆಲೋಚನೆ ಅವರದ್ದು. ಮಹಿಳೆ ಈಗಾಗಲೇ 5 ಲಕ್ಷ ರೂ ಸೇವಿಂಗ್ಸ್​ ಮಾಡಿಟ್ಟುಕೊಂಡಿದ್ದಳು. ಆದರೆ ವೃತ್ತಿ ಜೀವನಕ್ಕಾಗಿ 2-3 ಲಕ್ಷ ರೂಪಾಯಿ ಖರ್ಚು​ ಮಾಡಿದ್ದಾಳೆ. ಅದರ ಜೊತೆಗೆ ಉಳಿದ ದುಡಿದ ಹಣವನ್ನು ಮಕ್ಕಳ ಬಟ್ಟೆ ಖರೀದಿಸಲು ಉಪಯೋಗಿಸುತ್ತಾ ಬಂದಿದ್ದಾಳೆ.

ಆಕೆಯ ಮಾತಿನಂತೆ ‘ನನಗೆ ಹಣ ಉಳಿಸುವ ಆಸೆಯಿದೆ, ಆದರೆ ಮಕ್ಕಳ ಬಟ್ಟೆಗಳನ್ನು ನೋಡಿದಾಗ ಅದನ್ನು ಖರೀದಿಸಲು ಆಸೆಯಾಗುತ್ತದೆ’ ಎಂದು ಹೇಳಿದ್ದಾಳೆ. ಈ ರೀತಿಯಾಗಿ ಮಹಿಳೆ ಸುಮಾರು 3 ವರ್ಷಗಳಲ್ಲಿ ಬಟ್ಟೆಗಾಗಿ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾಳೆ. ಹೆಂಡತಿ ಗರ್ಭಧರಿಸುವ ಮುನ್ನವೇ ಇಷ್ಟೊಂದು ಬಟ್ಟೆಯನ್ನು ತನ್ನ ಮಗುವಿಗಾಗಿ ಖರೀದಿಸುತ್ತಿದ್ದಾಳೆ ಎಂಬ ಬೇಸರ ಆಕೆಯ ಗಂಡನದ್ದು. ಇದೇ ವಿಚಾರವಾಗಿ ಗಂಡ ಆಕೆಯೊಂದಿಗೆ ಆಗಾಗ ಜಗಳವಾಡುತ್ತಿರುತ್ತಾನಂತೆ.

ಮಹಿಳೆ ಈ ವಿಚಾರವನ್ನು ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದು, ಜನರು ಅವಳನ್ನು ಬೆಂಬಲಿಸುತ್ತಾರೆ ಮತ್ತು ಅವರ ಪರವಾಗಿ ಸಲಹೆ ನೀಡುತ್ತಾರೆ ಎಂದು ಭಾವಿಸಿ ಮಹಿಳೆ ತನ್ನ ಸಮಸ್ಯೆಯನ್ನು ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾಳೆ. ಆದರೆ ಮಹಿಳೆಯ ಈ ವಿಚಿತ್ರ ಆಸೆಯನ್ನು ಕೇಳಿ ಇದೊಂದು ಮೂರ್ಖತನ ಎಂದು ಬಣ್ಣಿಸಿದ್ದಾರೆ. ಕೆಲವು ಮಕ್ಕಳು ಬೇಗ ಬೆಳೆಯುತ್ತಾರೆ. ಹಾಗಾಗಿ ಅವರು ಖರೀದಿಸಿದ ಬಟ್ಟೆಗಳೆಲ್ಲವೂ ಚಿಕ್ಕದಾಗುತ್ತವೆ ಮತ್ತು ಅವರ ಹಣವು ವ್ಯರ್ಥವಾಗುತ್ತದೆ ಎಂದು ಇನ್ನು ಕೆಲವರು ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಕೆಲವರು ಗಂಡು ಮಗು ಅಥವಾ ಹೆಣ್ಣು ಮಗು ಗೊತ್ತಿಲ್ಲದೆ ಖರೀದಿಸಿದರೆ ಲಾಭವೇನು ಎಂದು ಹೀಯಾಳಿಸಿದ್ದಾರೆ.