Home International Shocking news: ಅಬ್ಬಬ್ಬಾ… 40 ಚ್ಯೂಯಿಂಗ್ ಗಮ್ ನುಂಗಿದ 5 ವರ್ಷದ ಬಾಲಕ; ಮುಂದೇನಾಯ್ತು?

Shocking news: ಅಬ್ಬಬ್ಬಾ… 40 ಚ್ಯೂಯಿಂಗ್ ಗಮ್ ನುಂಗಿದ 5 ವರ್ಷದ ಬಾಲಕ; ಮುಂದೇನಾಯ್ತು?

Chewing gum
Image source- Vijayavani

Hindu neighbor gifts plot of land

Hindu neighbour gifts land to Muslim journalist

Chewing Gum:5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್ ಗಮ್ ನುಂಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ ಅಮೆರಿಕಾ(America) ದಲ್ಲಿ ನಡೆದಿದೆ.

ಹೌದು, ಅಮೆರಿಕದ (America) 5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್‌ ಗಮ್‌ (Chewing Gum) ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸ್ಥಿತಿಗೆ ತಲುಪಿದ್ದಾನೆ. ಬಾಲಕನನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಟ್ಟೆ ಸಮಸ್ಯೆಯಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನ ಹೊಟ್ಟೆಯನ್ನು ವೈದ್ಯರು ಸ್ಕ್ಯಾನಿಂಗ್​ ಮಾಡಿದ್ದಾರೆ. ಆತನ ಹೊಟ್ಟೆ ಸ್ಕ್ಯಾನ್‌(Scan) ಮಾಡಿದಾಗ, ಹೆಚ್ಚಿನ ಪ್ರಮಾಣದ ಚ್ಯೂಯಿಂಗ್‌ ಗಮ್‌(Chewing Gum) ನುಂಗಿರುವುದು ಪತ್ತೆಯಾಗಿದೆ. ಚೂಯಿಂಗ್ ಗಮ್ ಹೊಟ್ಟೆಯಲ್ಲಿ ಒಟ್ಟಿಗೆ ಸೇರಿಕೊಂಡ ನಂತರ ಅವನ ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಟ್ಟಿತ್ತು. ನಂತರ ಹೊಟ್ಟೆ ನೋವು ಮತ್ತು ವಾಂತಿ ಪ್ರಾರಂಭವಾಗಿದೆ.

ವೈದ್ಯರು(Doctor) ಅವನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಇರಿಸುವ ಮೂಲಕ ಚ್ಯೂಯಿಂಗ್‌ ಗಮ್ ತೆಗೆದುಹಾಕಿದರು. ಚಿಕಿತ್ಸೆಯಿಂದ ಬಾಲಕನಿಗೆ ಸದ್ಯದ ಮಟ್ಟಿಗೆ ಗಂಟಲು ನೋವಿದ್ದರೂ, ದೀರ್ಘಾವಧಿಯ ಆರೋಗ್ಯ ಸಮಸ್ಯೆ ಇರಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಬಾಲಕನನ್ನು ಡಿಸ್ಚಾರ್ಜ್‌ ಮಾಡಿದ್ದಾರೆ

ಇನ್ನು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹುಡುಗನು ನಿದ್ರಾಜನಕವಾಗಿದ್ದರಿಂದ ಚೂಯಿಂಗ್ ಗಮ್ ಅನ್ನು ತೆಗೆದುಹಾಕಲು ಸುಲಭ ವಾಯಿತ್ತು. ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಅಲ್ಲದೆ ಜೀರ್ಣವಾಗದ ಚ್ಯೂಯಿಂಗ್‌ ಗಮ್‌ ಪದಾರ್ಥವನ್ನು ಅಕಸ್ಮಾತ್‌ ನುಂಗಿದರೆ 7 ವರ್ಷಗಳ ವರೆಗೆ ಹೊಟ್ಟೆಯಲ್ಲಿರುತ್ತದೆ ಎಂದು ನಂಬಲಾಗಿತ್ತು. ಇದು ತಪ್ಪು ಕಲ್ಪನೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇಂತಹ ಪದಾರ್ಥ ಸುಮಾರು 40 ಗಂಟೆಗಳ ವರೆಗೆ ದೇಹದಲ್ಲಿರುತ್ತದೆ. ನಂತರ ಮಲದ ಮುಖಾಂತರ ಹೊರಬರುತ್ತದೆ. ಅದರನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಹೊರಬರುತ್ತದೆ ಎಂದು ಡಯೆಟಿಷಿಯನ್‌ ಬೆತ್‌ ಸೆರ್ವೊನಿ ತಿಳಿಸಿದ್ದಾರೆ.

ಇದನ್ನೂ ಓದಿ: Uttar pradesh: ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ನಮಾಜ್​ ಮಾಡಲು ತರಭೇತಿ ನೀಡುತ್ತಿರೋ ಶಿಕ್ಷಕಿ! ವೈರಲ್ ಆಯ್ತು ವಿಡಿಯೋ!!