Home Interesting Good news for phone pay users | ಇನ್ಮುಂದೆ ವಿದೇಶದಲ್ಲೂ ಪರಿಚಯವಾಗಲಿದೆ ಯುಪಿಐ ಪೇಮೆಂಟ್!

Good news for phone pay users | ಇನ್ಮುಂದೆ ವಿದೇಶದಲ್ಲೂ ಪರಿಚಯವಾಗಲಿದೆ ಯುಪಿಐ ಪೇಮೆಂಟ್!

Hindu neighbor gifts plot of land

Hindu neighbour gifts land to Muslim journalist

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್‌ ಪಾವತಿಯನ್ನು ಸ್ವೀಕರಿಸುತ್ತಾರೆ.

ಹೌದು. ಇಂದು ಎಲ್ಲರೂ ಗೂಗಲ್ ಪೇ, ಫೋನ್ ಪೇ , ಪೇಟಿಎಂ ನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಯಾವುದೇ ಒಂದು ಪೇಮೆಂಟ್ ಗಳನ್ನು ಮನೆಯಲ್ಲೇ ಕುಳಿತುಕೊಂಡು ಮಾಡಬಹುದು. ಇದಕ್ಕೆಲ್ಲ ಕಾರಣ ಆನ್ಲೈನ್ ಟೆಕ್ನಾಲಜಿ. ಇದೀಗ ಮುಂದುವರಿದಂತೆ, ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಫೋನ್‌ ಪೇ ಯುಪಿಐ ಮೂಲಕ ಅಂತಾರಾಷ್ಟ್ರೀಯ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ದೇಶದಲ್ಲೇ ಅಲ್ಲದೆ, ಪ್ರಪಂಚದ ಎಲ್ಲೆಡೆ ಯುಪಿಐ ಬಳಕೆ ಆಗುವಂತೆ ಮಾಡಲು, UPI ಇಂಟರ್ನ್ಯಾಷನಲ್ ಅನ್ನು ಪರಿಚಯಿಸಲು ಯೋಜಿಸಿದೆ. ಫೋನ್‌ ಪೇ ಬಳಕೆದಾರರು ತಮ್ಮ UPI ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು UPI ಇಂಟರ್ನ್ಯಾಷನಲ್‌ಗಾಗಿ ವ್ಯಾಪಾರಿ ಸ್ಥಳದಲ್ಲಿ ಅಥವಾ ಅವರ ಪ್ರಯಾಣದ ಮೊದಲು ಅಪ್ಲಿಕೇಶನ್ ಮೂಲಕ ಸಕ್ರಿಯಗೊಳಿಸಬಹುದು.

ಸೇವೆಯನ್ನು ಸಕ್ರಿಯಗೊಳಿಸಲು ಗ್ರಾಹಕರು ತಮ್ಮ UPI ಪಿನ್ ಅನ್ನು ನಮೂದಿಸಬೇಕಾಗುತ್ತದೆ. ವಿದೇಶದಲ್ಲಿ ಪ್ರಯಾಣಿಸುವ ಭಾರತೀಯರು ವಿದೇಶದಲ್ಲಿರುವ ವ್ಯಾಪಾರಿ ಮಳಿಗೆಗಳಲ್ಲಿ ಪಾವತಿಸುವ ವಿಧಾನವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಹೊಸ ಯುಪಿಐ ವೈಶಿಷ್ಟ್ಯಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಮೊದಲ ಟಿಪಾಪ್ (TPAP) ಎಂಬ ಹೆಗ್ಗಳಿಕೆಯನ್ನು ಫೋನ್ ಪೇ ಹೊಂದಿದೆ.

“ಈ ಬದಲಾವಣೆಯನ್ನು ಮುನ್ನಡೆಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಇಡೀ ಜಗತ್ತು UPI ಅನ್ನು ಅನುಭವಿಸುವ ಅಗತ್ಯವಿದೆ” ಎಂದು ಫೋನ್‌ ಪೇಯ CTO ಸಹ ಸಂಸ್ಥಾಪಕ ರಾಹುಲ್ ಚಾರಿ ಹೇಳಿದ್ದಾರೆ. ಸ್ಥಳೀಯ ಕ್ಯೂಆರ್ ಕೋಡ್ ಹೊಂದಿರುವ ಸಿಂಗಾಪುರ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಮಾರಿಷಸ್, ಭೂತಾನ್ ಮತ್ತು ನೇಪಾಳದಲ್ಲಿರುವ ಯಾವುದೇ ಅಂತಾರಾಷ್ಟ್ರೀಯ ವ್ಯಾಪಾರಿಗಳಿಗೆ ಯುಪಿಐ ಪಾವತಿಗಳನ್ನು ಮಾಡಬಹುದು ಎಂದು ಫೋನ್‌ ಪೇ ತಿಳಿಸಿದೆ.