Home Interesting ಇಲ್ಲಿ ಬುರ್ಖಾ ಧರಿಸಿದರೆ ಬೀಳುತ್ತೆ ಭಾರೀ ದಂಡ!!!

ಇಲ್ಲಿ ಬುರ್ಖಾ ಧರಿಸಿದರೆ ಬೀಳುತ್ತೆ ಭಾರೀ ದಂಡ!!!

Hindu neighbor gifts plot of land

Hindu neighbour gifts land to Muslim journalist

ನಮ್ಮಲ್ಲಿ ಯಾವುದಾದರೂ ರೂಲ್ಸ್ ಮಾಡಿದರೆ ಬ್ರೇಕ್ ಮಾಡುವವರೇ ಹೆಚ್ಚು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಓಡಾಡುವ ಪರಿಪಾಠವೆ ಜಾಸ್ತಿ. ಹಾಗೆಂದು ನಮ್ಮಲ್ಲಿ ಅನುಸರಿಸಿದಂತೆ ಬೇರೆ ದೇಶಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಜೊತೆಗೆ ಸೆರೆಮನೆ ವಾಸ ಖಾಯಂ ಆದರೂ ಅಚ್ಚರಿಯಿಲ್ಲ.

ಸ್ವಿಜರ್ಲೆಂಡ್​ನಲ್ಲಿ ಬುರ್ಖಾದ ಮೇಲಿನ ನಿಷೇಧವನ್ನು ಉಲ್ಲಂಘಿಸುವವರಿಗೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 83,000 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.
ಪ್ರತಿಯೊಂದು ದೇಶದಲ್ಲಿ ಒಂದೊಂದು ರೀತಿಯ ರೀತಿ ರಿವಾಜುಗಳು ಇರುತ್ತವೆ.

ಕೆಲವು ದೇಶಗಳಲ್ಲಿ ಬುರ್ಖಾ (Burqa) ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವಂತಿಲ್ಲ ಎಂಬ ನಿಯಮವಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಬುರ್ಖಾ ಧರಿಸಲು ಅವಕಾಶವಿಲ್ಲ.

ಇದೀಗ ಸ್ವಿಜರ್ಲೆಂಡ್ ಸರ್ಕಾರ “ಬುರ್ಖಾ ನಿಷೇಧ”ವನ್ನು ಜಾರಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಸ್ವಿಸ್ ಸರ್ಕಾರವು ಸಂಸತ್ತಿಗೆ ಈ ಕುರಿತ ಕರಡು ಪ್ರತಿಯನ್ನು ಸಲ್ಲಿಸಿದೆ. ಆ ಕರಡಿನ ಪ್ರಕಾರ, ಸ್ವಿಜರ್ಲೆಂಡ್​ನಲ್ಲಿ ಬುರ್ಖಾದ ಮೇಲಿನ ನಿಷೇಧವನ್ನು ಉಲ್ಲಂಘಿಸುವವರಿಗೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 83,000 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.
ಈ ಕರಡು ಕಾನೂನಿಗೆ 51.2% ಮತದಾರರು ಪ್ರಸ್ತಾವಿತ ನಿಷೇಧವನ್ನು ಅನುಮೋದಿಸಿದರೂ, ಅದು ಇಸ್ಲಾಮೋಫೋಬಿಕ್ ಮತ್ತು ಸ್ತ್ರೀದ್ವೇಷ ಎಂದು ಆ ಸಮಯದಲ್ಲಿ ಟೀಕಿಸಲಾಗಿತ್ತು.

ಈ ಕರಡು ಹಲವಾರು ಕಾನೂನು ವಿನಾಯಿತಿಗಳನ್ನು ಸಹ ಒಳಗೊಂಡಿದೆ. ವಿಮಾನಗಳು, ರಾಜತಾಂತ್ರಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಕ್ಕೆ ವಿನಾಯಿತಿ ನೀಡಲಾಗಿದೆ. ಆರೋಗ್ಯ, ಸುರಕ್ಷತೆ, ಹವಾಮಾನ ಮತ್ತು ಪ್ರಾದೇಶಿಕ ಪದ್ಧತಿಗಳಿಗೆ ಸಂಬಂಧಿಸಿದ ವ್ಯಾಪ್ತಿಗಳಲ್ಲಿ ಕೂಡ ಬುರ್ಖಾ ಧರಿಸಲು ಅನುಮತಿಯಿದೆ.

ಸ್ವಿಜರ್ಲೆಂಡ್‌ನಲ್ಲಿರುವ ಶೇ. 5ರಷ್ಟು ಮುಸ್ಲಿಂ ಜನರು ಬಹುಪಾಲು ಟರ್ಕಿ, ಬೋಸ್ನಿಯಾ ಮತ್ತು ಕೊಸೊವೊದಿಂದ ಬಂದವರಾಗಿದ್ದಾರೆ. ನಿಷೇಧವನ್ನು ಬೆಂಬಲಿಸಿದವರು ಬುರ್ಖಾವನ್ನು ರಾಜಕೀಯ ಇಸ್ಲಾಂನ ತೀವ್ರತೆಯ ಸಂಕೇತವೆಂದು ವಿವರಿಸಿದ್ದಾರೆ.

ಮುಸ್ಲಿಂ ಸಂಘಟನೆಗಳು ಇದನ್ನು ಜನಾಂಗೀಯ ದ್ವೇಷ ಎಂದು ಟೀಕಿಸಿದ್ದಾರೆ. ಅಲ್ಲದೆ, ಈ ಕುರಿತು ಕಾನೂನು ಕ್ರಮದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ದೇಶದ ಕ್ರಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಇಲ್ಲವೇ ನಿಯಮಗಳನ್ನೂ ಪಾಲಿಸದಿದ್ದರೆ ಬಾರಿ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ.