Home Interesting ತಂಗಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುವುದನ್ನು ಕಣ್ಣಾರೆ ಕಂಡ ಅಣ್ಣ! ಹಿಡಿಯಲು ಹೋಗಿ ಕಡೆ ಆಕ್ಸಿಡೆಂಟ್...

ತಂಗಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುವುದನ್ನು ಕಣ್ಣಾರೆ ಕಂಡ ಅಣ್ಣ! ಹಿಡಿಯಲು ಹೋಗಿ ಕಡೆ ಆಕ್ಸಿಡೆಂಟ್ ಮಾಡಿಸಿದ ಸಹೋದರನ ಕಥೆ ಏನಾಯ್ತು?

Hindu neighbor gifts plot of land

Hindu neighbour gifts land to Muslim journalist

ತನ್ನ ತಂಗಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ಸಂಶಯಗೊಂಡ‌ ಅಣ್ಣನೋರ್ವ ಏನೋ ಮಾಡಲು ಹೋಗಿ ಏನೋ ಮಾಡಿದ ಅನ್ನೋ ಹಾಗೇ ಇಲ್ಲೊಬ್ಬ ಮಾಡಿದ್ದಾನೆ.

ತಂಗಿಯ ಮೇಲಿನ ಅನುಮಾನದಿಂದ ಆಕೆ ಮನೆಯಿಂದ ಹೊರ ಹೋದಾಗ ಸಹೋದರ ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆ ತನ್ನ ಬಾಯ್‌ಫ್ರೆಂಡ್ ಜತೆ ಬೈಕಿನಲ್ಲಿ ಹೋಗುವುದನ್ನು ನೋಡಿ ಹೇಗಾದರೂ ಮಾಡಿ ಇಬ್ಬರನ್ನು ಹಿಡಿಯಬೇಕೆಂದು ಮಿನಿ ಟ್ರಕ್‌ನಲ್ಲಿ ಚೇಸ್ ಮಾಡಿದ್ದಾನೆ.

ಮಿನಿ ಟ್ರಕ್‌ನಲ್ಲಿ ಹಿಂಬಾಲಿಸಿ ಹೋಗಿ ಡಿಕ್ಕಿ ಹೊಡೆದಿರುವ ಸಿನಿಮೀಯ ಘಟನೆ ಮಧ್ಯಪ್ರದೇಶದ ಭೋಪಾಲ್‌ನ ಅಯೋಧ್ಯ ನಗರದಲ್ಲಿ ನಡೆದಿದೆ.

ಮೊದಲು ಇಬ್ಬರನ್ನು ತಡೆಯಬೇಕೆಂದು ಯತ್ನಿಸಿದ್ದಾನೆ. ಆದರೆ, ಅಣ್ಣನನ್ನು ನೋಡಿದ ತಂಗಿ ಬೈಕ್ ಅನ್ನು ವೇಗವಾಗಿ ಓಡಿಸುವಂತೆ ಹೇಳಿದ್ದಾಳೆ. ಕೊನೆಗೆ ಹೇಗಾದರೂ ಮಾಡಿ ಹಿಡಿಯಲೇ ಬೇಕೆಂಬ ನಿರ್ಧಾರಕ್ಕೆ ಬಂದ ಸಹೋದರ ವೇಗವಾಗಿ ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಇಬ್ಬರನ್ನು ಕೆಳಗೆ ಬೀಳಿಸಿದ್ದಾನೆ. ಈ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯಲ್ಲಿ ಯುವತಿ ಮತ್ತು ಬಾಯ್‌ಫ್ರೆಂಡ್‌ಗೆ ಗಾಯಗಳಾಗಿವೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಕೂಡ ದೂರು ದಾಖಲಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಯುವತಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.