Home Entertainment Diamond ring: ವಜ್ರ ದುಂಗುರ ಧರಿಸುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ!!

Diamond ring: ವಜ್ರ ದುಂಗುರ ಧರಿಸುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ!!

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ ಇರುವುದು ಸಹಜ. ನಾವು ಧರಿಸುವ ಉಡುಪಿನ ಬಣ್ಣ, ಧರಿಸುವ ಆಭರಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದರದ್ದೇ ಆದ ಮಹತ್ವ ಪಡೆದುಕೊಂಡಿದೆ. ಕೆಲ ಹರಳುಗಳು ಜ್ಯೋತಿಷ್ಯ ರಾಶಿ ಫಲದ ಅನುಸಾರ ಶ್ರೇಯಸ್ಸಿಗೆ ಕಾರಣವಾದರೆ, ಮತ್ತೆ ಕೆಲ ಆಭರಣಗಳು ಕೆಡುಕನ್ನು ಉಂಟು ಮಾಡುತ್ತವೆ ಎನ್ನುವ ನಂಬಿಕೆಯಿದೆ.

ಆಭರಣಗಳನ್ನು ಬಯಸದೇ ಇರುವವರೇ ವಿರಳ. ಹೆಚ್ಚಿನವರು ಬಯಸುವ ಆಭರಣಗಳ ಪಟ್ಟಿಯಲ್ಲಿ ಡೈಮಂಡ್ ಕೂಡ ಒಂದಾಗಿದ್ದು, ಅಮೂಲ್ಯ ರತ್ನ ಗಳಲ್ಲಿ ವಜ್ರ ಕೂಡ ಸ್ಥಾನ ಪಡೆದುಕೊಂಡಿದೆ. ಕೆಲವರು ಫ್ಯಾಷನ್ ಹಾಗಿ ವಜ್ರಗಳನ್ನು ಧರಿಸಿದರೆ, ಮತ್ತೆ ಕೆಲವರು ತಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಜ್ರ ಧರಿಸುತ್ತಾರೆ. ವಜ್ರ ಧರಿಸುವುದರಿಂದ ಸಕಾರಾತ್ಮಕ ಅಂಶಗಳ ವೃದ್ಧಿಯಾಗಿ ನಕಾರಾತ್ಮಕ ಅಂಶಗಳ ಕುಂಠಿತಗೊಳ್ಳುತ್ತದೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂಬ ನಂಬಿಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ. ಅದೇ ರೀತಿ, ಜಾತಕದಲ್ಲಿ ಶುಕ್ರನ ಪ್ರಭಾವವನ್ನು ಬಲಪಡಿಸಲು ವಜ್ರವನ್ನೂ ಧರಿಸಲಾಗುತ್ತದೆ. ಆದರೆ, ವಜ್ರ ಧರಿಸುವ ಎಲ್ಲರಿಗೂ ಇದೆ ರೀತಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗದು.

ರತ್ನಶಾಸ್ತ್ರದ ಪ್ರಕಾರ, ರತ್ನದ ಕಲ್ಲುಗಳ ಆಯ್ಕೆ ಮಾಡುವಾಗ ತುಂಬಾ ಜಾಗ್ರತೆ ಹಾಗೂ ತಿಳುವಳಿಕೆಯಿಂದ ಮಾಡಬೇಕು. ಜ್ಯೋತಿಷ್ಯಶಾಸ್ತ್ರದ ಅನ್ವಯ ಜಾತಕದ ಪ್ರಕಾರ ವಜ್ರವನ್ನು ಧರಿಸುವುದು ಅನೇಕ ಪ್ರಯೋಜನ ಉಂಟು ಮಾಡುತ್ತದೆ. ಅದೇ ರೀತಿ, ಕೆಲವರಿಗೆ ವಜ್ರ ಸಮಸ್ಯೆಗಳನ್ನುಂಟು ಮಾಡುತ್ತವೆ. ಹಾಗೆಯೇ ಡೈಮಂಡ್ ಧರಿಸುವ ಮುನ್ನ ಕೆಲ ನಿಯಮಗಳ ಕುರಿತು ತಿಳಿದುಕೊಳ್ಳುವುದು ಒಳ್ಳೆಯದು.

ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಯಾವುದೇ ಹೊಸ ಕಾರ್ಯ ಆರಂಭ ಮಾಡುವಾಗ ಡೈಮಂಡ್ ಧರಿಸುವುದು ಒಳಿತನ್ನು ಮಾಡುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ, ವೃಷಭ, ಮಿಥುನ, ಕನ್ಯಾ, ಮಕರ, ತುಲಾ ಮತ್ತು ಕುಂಭ ರಾಶಿಗಳಲ್ಲಿ ಜನಿಸಿದವರು ವಜ್ರವನ್ನು ಧರಿಸುವುದು ಮಂಗಳಕರ ಎಂಬ ನಂಬಿಕೆ ಇದೆ. ಶುಕ್ರವಾರ ಸೂರ್ಯೋದಯದ ಬಳಿಕ ವಜ್ರದ ಉಂಗುರವನ್ನು ಧರಿಸುವುದು ಒಳ್ಳೆಯದು. ಇದನ್ನು ಧರಿಸುವ ಮೊದಲು ಮೊದಲು, ನೀರಿಗೆ ಹಾಲು, ಸಕ್ಕರೆ ಮಿಠಾಯಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಬೇಕು. ಆ ಬಳಿಕ ಶುಕ್ರ ಮಂತ್ರವನ್ನು 108 ಬಾರಿ ಜಪಿಸಬೇಕು ಎಂಬುದು ಬಲ್ಲವರ ಅಭಿಪ್ರಾಯವಾಗಿದೆ.

ಫಿಲ್ಮ್ ಇಂಡಸ್ಟ್ರಿ, ಫ್ಯಾಷನ್ ಹಾಗೂ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ವಜ್ರಗಳನ್ನು ಧರಿಸಿದರೆ ಅದೃಷ್ಟ ಕೈ ಹಿಡಿಯುತ್ತದೆ ಅಲ್ಲದೇ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಕೆಲ ಬಲ್ಲವರ ಎಣಿಕೆ ಅನುಸಾರ, ಶುಕ್ರನು ತುಲಾ ಮತ್ತು ವೃಷಭ ರಾಶಿಯ ಅಧಿಪತಿಯಾಗಿರುವ ಹಿನ್ನೆಲೆ ವೃಷಭ ಮತ್ತು ತುಲಾ ರಾಶಿಯವರಿಗೆ ಹೆಚ್ಚು ಪ್ರಯೋಜನ ಉಂಟಾಗುತ್ತದೆ ಎನ್ನಲಾಗುತ್ತದೆ.