Home Interesting Breasts worship: ದೇವರಿಲ್ಲದ ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯರ ‘ಮೊಲೆ’ ಯ ಪೂಜೆ!

Breasts worship: ದೇವರಿಲ್ಲದ ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯರ ‘ಮೊಲೆ’ ಯ ಪೂಜೆ!

Breasts worship

Hindu neighbor gifts plot of land

Hindu neighbour gifts land to Muslim journalist

Breasts worship :ದೇವಾಲಯಗಳಿಲ್ಲದ ಊರು ಯಾವುದಿದೆ ಹೇಳಿ. ಎಂತಾ ಊರಲ್ಲಾದರೂ ಸಣ್ಣದೊಂದು ಗುಡಿ ಇದ್ದೇ ಇರುತ್ತದೆ. ಅದರೊಳಗೊಂದು ದೇವರ ಮೂರ್ತಿಯೋ ಅಥವಾ ಅದರ ಸ್ವರೂಪದಲ್ಲಿ ಪೂಜಿಸೋ ಕಲ್ಲೋ ಇದ್ದೇ ಇರುತ್ತದೆ. ಅಂತೆಯೇ ಎಲ್ಲಾ ಊರುಗಳಲ್ಲಿರುವ ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಒಂದೊಂದು ರೀತಿಯ ಪೂಜೆ, ಪುನಸ್ಕಾರಗಳಿಂದ ಖ್ಯಾತಿಯನ್ನೂ ಪಡೆದಿವೆ. ಆದರೆ ಇಲ್ಲೊಂದು ದೇವಸ್ಥಾನದ ಬಗ್ಗೆ ಕೇಳಿದ್ರೆ ನಿಜಕ್ಕೂ ನಿಮಗೆ ಅಚ್ಚರಿ ಯಾಗುತ್ತೆ. ಯಾಕೆಂದರೆ ಇಲ್ಲಿ ದೇವರ ಬದಲಿಗೆ ಮಹಿಳೆಯರ ಸ್ತನಗಳನ್ನು ಪೂಜಿಸಲಾಗುತ್ತದೆಯಂತೆ (Breasts worship)!

ಹೌದು, ಕೆಲವು ದೇವಾಲಯಗಳು ನಿರ್ಧಿಷ್ಟ ವಿಚಾರಕ್ಕೆಂದೇ ಪೂಜೆ ಸಲ್ಲಿಸಲು ಹೆಸರುವಾಸಿಯಾಗಿರುತ್ತದೆ. ಹಾಗೆಯೇ ಜಪಾನಿನ ಮಮ್ಮಾ ಕಣ್ಣೋನ್ ಎಂಬ ದೇವಾಲಯವು ಜಗತ್ತಿನ ಎಲ್ಲಾ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಯಾಕೆಂದರೆ ಇಲ್ಲಿ ಯಾವುದೇ ದೇವರಿಗೆ ಪೂಜೆ ನಡೆಯುವುದಿಲ್ಲ. ಬದಲಿಗೆ ಮಹಿಳೆಯರ ಸ್ತನಗಳಿಗೆ ಪೂಜೆ ನಡೆಯುತ್ತದೆ. ಈ ದೇವಾಲಯವು ಸಂಪೂರ್ಣವಾಗಿ ಮಹಿಳೆಯರ ಯೋಗಕ್ಷೇಮ ಮತ್ತು ಆರೋಗ್ಯಕ್ಕೆ ಸಮರ್ಪಿತವಾಗಿದೆ. ಹೀಗಾಗಿ ಸ್ತ್ರೀ ಸ್ತನಗಳನ್ನು ಪೂಜಿಸುವ ಆಚರಣೆ ಇಲ್ಲಿದೆ.

ಇದರ ಇತಿಹಾಸವನ್ನು ನೋಡೋದಾದ್ರೆ, ಮೊಟ್ಟ ಮೊದಲಿಗೆ ಸುಮಾರು 1492ರಲ್ಲಿ ಮೌಂಟ್ ಕೊಮಾಕಿಯ ಎಂಬಲ್ಲಿ ಈ ದೇವಾಲಯವನ್ನು ಸ್ಥಾಪಿಸಲಾಯಿತು. ಬಳಿಕ, 16ನೇ ಶತಮಾನದಲ್ಲಿ ಸಮುರಾಯ್ ಲಾರ್ಡ್ ಓಡಾ ನೊಬುನಾಗಾ ಅವರ ಆದೇಶದ ಮೇರೆಗೆ ದೇವಾಲಯವನ್ನು ಇಂದು ಇರುವ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಈ ದೇವಾಲಯ ಮಮ್ಮಾ ಕಣ್ಣೋನ್ ಎಂದು ಕರೆಯಲ್ಪಡುತ್ತದೆ.

ಅಂದಹಾಗೆ ಸ್ತನ ಕ್ಯಾನ್ಸರ್ ನಿಂದ ಮಹಿಳೆಯನ್ನು ರಕ್ಷಿಸಲು ಇಲ್ಲಿ ಸ್ತನದ ಪೂಜೆ ನಡೆಯುತ್ತದೆ. ದೇವಾಲಯಕ್ಕೆ ದೂರ ದೂರುಗಳಿಂದ ಬರುವ ಮಹಿಳೆಯರು, ಸ್ತನ ಕ್ಯಾನ್ಸರ್ ನಿಂದ ಮುಕ್ತಿ ಹೊಂದಲು ಹಾಗೂ ಸುರಕ್ಷಿತ ಗರ್ಭಧಾರಣೆಗಾಗಿ ಇಲ್ಲಿಗೆ ಆಗಮಿಸಿ ಪೂಜೆ ಮಾಡ್ತಾರೆ. ಹತ್ತಿ ಹಾಗೂ ಬಟ್ಟೆಯಿಂದ ಮಾಡಿದ ಸ್ತನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಜಪಾನಿನ ಈ ಸ್ತನ ದೇವಾಲಯದ ಸುತ್ತ ಮುತ್ತ ಮಹಿಳೆಯರ ಸ್ತನಗಳ ಆಕಾರಗಳು ಕಾಣಸಿಗುತ್ತವೆ.

ಈ ದೇವಾಲಯವು ಪ್ರಸಿದ್ಧಿ ಹೊಂದಲು ಕೂಡ ಒಂದು ಕಾರಣವಿದೆ. ಅದೇನೆಂದರೆ ಜಪಾನಿನ ವೈದ್ಯರೊಬ್ಬರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಯನ್ನು ರಕ್ಷಿಸುವಂತೆ ಇಲ್ಲಿ ಹರಕೆ ಹೊತ್ತಿದ್ದರಂತೆ. ಹರಕೆ ಹೊತ್ತ ಮೇಲೆ ಆ ರೋಗಿಗೆ ಸ್ತನ ಕ್ಯಾನ್ಸರ್ ಗುಣವಾಯ್ತಂತೆ. ಅಲ್ಲಿಂದ ಈ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹೀಗೆ ಸ್ತನ ಸಮಸ್ಯೆಗಳು ಎದುರಾದಾಗ ಇಲ್ಲಿಗೆ ಮಹಿಳೆಯರು ಬಂದೈ ಹರಕೆ ಹೊತ್ತುಕೊಳ್ಳುತ್ತಾರೆ. ನಂತರ ತಮ್ಮ ಬೇಡಿಕೆಗಳು ಈಡೇರಿದಾಗ ಮರಳಿ ಬಂದು ನಕಲಿ ಸ್ತನವನ್ನು ಇಲ್ಲಿಟ್ಟು, ಹರಕೆ ತೀರಿಸಿ ಹೋಗ್ತಾರೆ.

ಹೀಗಾಗಿ ದೇವಾಲಯದ ಮೈದಾನವು ಬಟ್ಟೆಯಿಂದ ಮಾಡಿದ ವಿವಿಧ ಗಾತ್ರದ ಸ್ತನಗಳಿಂದ ತುಂಬಿದೆ. ದೇವಸ್ಥಾನದ ಮುಖ್ಯ ಮೂರ್ತಿಯಿಂದ ಹಿಡಿದು ಪ್ರತಿಯೊಂದೂ ಇಲ್ಲಿ ಸ್ತನದ ಆಕಾರದಲ್ಲಿರೋದು ವಿಶೇಷ ಅನ್ನಬಹುದು.

ಇದನ್ನೂ ಓದಿ: Madhyapradesh :ಅಣ್ಣನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದಳು ಈ ಪುಣ್ಯಾತ್ಗಿತ್ತಿ! ನಂತರ ಆದದ್ದೇನು?