Home Interesting ವೈರಲ್ ಆಯ್ತು ಮಿಠಾಯಿ ಅಂಗಡಿಯ 80ರ ದಶಕದ ಮೆನು ಕಾರ್ಡ್! ಇಂದು ಕೊಳ್ಳುವಾಗ ಕೈ ಸುಡೋ...

ವೈರಲ್ ಆಯ್ತು ಮಿಠಾಯಿ ಅಂಗಡಿಯ 80ರ ದಶಕದ ಮೆನು ಕಾರ್ಡ್! ಇಂದು ಕೊಳ್ಳುವಾಗ ಕೈ ಸುಡೋ ತರೆಹೆವಾರಿ ಸ್ವೀಟ್ಸ್ ಗಳು ಅಂದು ಎಷ್ಟಕ್ಕೆ ಸಿಗ್ತಿತ್ತು ಗೊತ್ತಾ!

Hindu neighbor gifts plot of land

Hindu neighbour gifts land to Muslim journalist

Sweets :ಇತ್ತೀಚಿನ ದಿನಗಳಲ್ಲಂತೂ ಓಬಿರಾಯನ ಕಾಲದ ಬಿಲ್ಲುಗಳು (Bills), ಟಿಕೆಟ್ಗಳು (Tickets), ಹೋಟೆಲ್ ಮೆನು (Hotel Menu) ಕಾರ್ಡುಗಳು ಒಂದೊಂದಾಗಿ ಹೊರಬಂದು ಜನರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಇಂತವುಗಳನ್ನು ರಕ್ಷಿಸಿ ಇಡುವವರೂ ಕೂಡ ಗ್ರೇಟ್ ಅನ್ಬೋದು ಬಿಡಿ. ಅಂತೆಯೇ ಇದೀಗ ಮಿಠಾಯಿ ಅಂಗಡಿಯ 80ರ ದಶಕದ ಸ್ವೀಟ್ಸ್ ಮೆನು (Sweets) ವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಭಾರೀ ಸುದ್ಧಿ ಮಾಡುತ್ತಿದೆ. ಹಾಗಿದ್ರೆ ಯಾವ್ಯಾವ ಸ್ವೀಟಿಗೆ ಎಷ್ಟೆಷ್ಟು ಬೆಲೆ ಇತ್ತು ನೋಡೋಣ ಅಲ್ವಾ?

ಹೌದು, ಪಂಜಾಬಿನ (Panjab) ಹರ್ದಯಲ್ (Hardal Road) ರಸ್ತೆಯ ಜಲಂಧರ್ ಕಂಟೋನ್ಮೆಂಟ್‌ನಲ್ಲಿರುವ ಲವ್ಲಿ ಸ್ವೀಟ್ ಹೌಸ್‌ (Lovely Sweet house), ಅಂದಿನ ಸಿಹಿ ತಿನಿಸುಗಳ ಮೆನುವಿನ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ 1980ರ ಫೇಮಸ್ ಲವ್ಲಿ ಸ್ವೀಟ್ ಬೆಲೆ ಪಟ್ಟಿ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಗ್ಯಾಗ್ರೇಟ್ ಹುಲ್ಚಾಲ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ 4 ದಶಕಗಳ ಹಿಂದಿನ ಈ ಮಿಠಾಯಿ ಅಂಗಡಿಯ ಮೆನು ಕಾರ್ಡನ್ನು ಪೋಸ್ಟ್ ಮಾಡಲಾಗಿದ್ದು, ಸದ್ಯ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.

ಈ ಪೋಸ್ಟಿನಲ್ಲಿರುವ ಮೆನುವಿನ ಪ್ರಕಾರ ಅಂದಿನ ಕಾಲದಲ್ಲಿ ಮೋತಿಚೂರು ಲಡ್ಡು, ರಸಗುಲ್ಲಾ, ಗುಲಾಬ್ ಜಾಮೂನ್ ಇತ್ಯಾದಿ ಸಿಹಿತಿಂಡಿಗಳ (Sweets menu) ಬೆಲೆ ಕೆಜಿಗೆ ರೂ. 10 ರಿಂದ 14 ರೂಪಾಯಿ ಇತ್ತು! ಚಾಕೋಲೆಟ್ ಬರ್ಫಿ ಮತ್ತು ಪಿಸ್ತಾ ಬರ್ಫಿಯಂತಹ ಸ್ವಲ್ಪ ಪ್ರೀಮಿಯಂ ವಿಧದ ಮಿಠಾಯಿಗಳ ಬೆಲೆ ಪ್ರತಿ ಕೆ.ಜಿಗೆ 18 ರಿಂದ 20 ರೂಪಾಯಿಗಳಿದ್ದವು.
ಸಮೋಸಾ, ಕಚೋರಿ, ಪನೀರ್ ಪಕೋಡಾ ಮುಂತಾದ ತಿಂಡಿಗಳ ಬೆಲೆ ಆ ಕಾಲದಲ್ಲಿ 1 ರೂಪಾಯಿಗಿಂತಲೂ ಕಡಿಮೆ ಇತ್ತು. ಇಂದು ನಮಗೆ ಮಿಠಾಯಿಯ ಒಂದು ತುಂಡು ಕೂಡ ಆ ಬೆಲೆಗೆ ಸಿಗುವುದಿಲ್ಲ ಬಿಡಿ. ಅದೇ ತಿಂಡಿಗಳ ಬೆಲೆ ಇಂದು 10 ರಿಂದ 100 ರೂಪಾಯಿಗಳ ವರೆಗೂ ಇದ್ದು, ಕೊಳ್ಳುವವರ ಕೈ ಸುಡುತ್ತದೆ.

ನೆಟ್ಟಿಗರು ಸಹಜವಾಗಿಯೇ ವೈರಲ್ ಆಗಿರುವ ಆ ಮೆನುವನ್ನು ನೋಡಿ ಆಕರ್ಷಿತರಾಗಿದ್ದಾರೆ. ಇದುವರೆಗೆ 28,000 ಲೈಕ್ಸ್ ಮತ್ತು 1,600 ಕಮೆಂಟ್‌ಗಳನ್ನು ಪಡೆದುಕೊಂಡಿರುವ ಈ ವೈರಲ್ ಪೋಸ್ಟಿಗೆ ನೆಟ್ಟಿಗರು ಭಿನ್ನ ಭಿನ್ನವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು ‘ಅದ್ಭುತ ದಿನಗಳು ಎಂದಿಗೂ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ನನಗೆ ಈ ಅಂಗಡಿಯಲ್ಲಿರುವ ಸಿಹಿ ತಿಂಡಿಗಳು ಇಷ್ಟ. ನಿಜವಾಗಿಯೂ ಈಗ ಇದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಪಂಜಾಬ್‌ನ ಅತ್ಯುತ್ತಮ ಸಿಹಿತಿಂಡಿಗಳ ಅಂಗಡಿಗಳಲ್ಲಿ ಒಂದಾಗಿದೆ. ನಾನು 1996-2000 ಇಸವಿಯಲ್ಲಿ ಜಲಂಧರ್‌ನಲ್ಲಿದ್ದಾಗ ಈ ಸಿಹಿ ಅಂಗಡಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ ಎಂದು ಹೇಳಿದ್ದಾರೆ.