Home Health Corona Variant In Karnataka: ಕರ್ನಾಟಕಕ್ಕೆ ಕಾಲಿಟ್ಟ XBB.1.5 ವೈರಸ್

Corona Variant In Karnataka: ಕರ್ನಾಟಕಕ್ಕೆ ಕಾಲಿಟ್ಟ XBB.1.5 ವೈರಸ್

Hindu neighbor gifts plot of land

Hindu neighbour gifts land to Muslim journalist

ಕೊರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೋರೋನಾ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈ ನಡುವೆ XBB.1.5 ವೈರಸ್ ಕರ್ನಾಟಕದಲ್ಲಿ ಕೂಡ ಪ್ರಭಾವ ಬೀರಲು ಆರಂಭಿಸಿದೆ. ಹೀಗಾಗಿ, ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ.ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಲು ಕಾರಣವಾಗಿದ್ದ XBB.1.5 ವೈರಸ್ ಕರ್ನಾಟಕದಲ್ಲೂ ಪತ್ತೆಯಾಗಿರುವುದು ಆತಂಕ ಮೂಡಿಸಿದ್ದು, ಅಮೇರಿಕಾದಲ್ಲಿ ಪತ್ತೆಯಾದ ಕೋವಿಡ್-19ರ ಸೋಂಕಿತರ ಪೈಕಿ ಶೇ.44% ರಷ್ಟು ಕೇಸ್​ಗಳಲ್ಲಿ XBB.1.5 ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ.

ಅಮೇರಿಕಾದಲ್ಲಿ ಪತ್ತೆಯಾದ ಕೋವಿಡ್-19ರ ಸೋಂಕಿತರ ಪೈಕಿ ಶೇ.44% ರಷ್ಟು ಕೇಸ್ಗಳಲ್ಲಿ XBB.1.5 ವೈರಸ್ ಪತ್ತೆಯಾಗಿತ್ತು. ಇದೀಗ,ಕರ್ನಾಟಕದಲ್ಲಿ XBB.1.5. ವೈರಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಒಮಿಕ್ರಾನ್​ನ ಮತ್ತೊಂದು ರೂಪಾಂತರಿಯೇ ಈ XBB.1.5 ಎನ್ನಲಾಗಿದೆ. ಸದ್ಯ ಭಾರತದ ಇತರ ರಾಜ್ಯಗಳ ಕಡೆ ಗಮನ ಹರಿಸಿದರೆ, ರಾಜಸ್ಥಾನದಲ್ಲಿ 1 ಕೇಸ್, ಗುಜರಾತ್​ನಲ್ಲಿ 3 ಕೇಸ್ ಹಾಗೂ ಕರ್ನಾಟಕದಲ್ಲಿ XBB.1.5. ವೈರಸ್​ನ ಒಂದು ಕೇಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಡಿಸೆಂಬರ್ 3ರಂದು ಆಸ್ಪತ್ರೆಯಿಂದ 6 ರೋಗಿಗಳು ಡಿಸ್ಚಾರ್ಜ್ ಆಗಿದ್ದು, 0.22% ಪಾಸಿಟಿವಿಟಿ ರೇಟ್ ದಾಖಲಾಗಿದೆ. ಸದ್ಯ ಇಡೀ ರಾಜ್ಯದಲ್ಲಿ 308 ಜನರಲ್ಲಿ ಕೊರೊನಾ ಸೋಂಕು ಹರಡಿ ಪ್ರಭಾವ ಬೀರುವ ಲಕ್ಷಣಗಳು ಕಂಡು ಬರುತ್ತಿವೆ.

ಬೆಂಗಳೂರು ನಗರ ಒಂದರಲ್ಲೇ 14 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ ಸದ್ಯದ ಕೊರೊನಾ ಸ್ಥಿತಿಗತಿ ಗಮನಿಸುವುದಾದರೆ ನಿನ್ನೆ (ಜನವರಿ 3) 19 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸದ್ಯ ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿರುವುದರಿಂದ ಸಾರ್ವಜನಿಕ ಜನನಿಬಿಡ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಅಗತ್ಯವಾಗಿದೆ.