Home Health ಹಲ್ಲುಗಳನ್ನು ಈ ರೀತಿಯಾಗಿ ಉಜ್ಜಿದರೆ ನಿಮಗೂ ದೊರೆಯುತ್ತೆ ಈ ಅದ್ಭುತ ಪ್ರಯೋಜನ!

ಹಲ್ಲುಗಳನ್ನು ಈ ರೀತಿಯಾಗಿ ಉಜ್ಜಿದರೆ ನಿಮಗೂ ದೊರೆಯುತ್ತೆ ಈ ಅದ್ಭುತ ಪ್ರಯೋಜನ!

Hindu neighbor gifts plot of land

Hindu neighbour gifts land to Muslim journalist

ಹಾರ್ಟ್​ ಅಟ್ಯಾಕ್​ ಎಂಬುದು ಎಲ್ಲರಿಗೂ ತಿಳಿದಿರುವ ಕಾಯಿಲೆ ಎಂದೇ ಹೇಳಬಹುದು. ಯಾಕೆಂದ್ರೆ, ಇಂದಿನ ಕಾಲದಲ್ಲಿ ಯುವ ಜನತೆಯಿಂದ ಹಿಡಿದು ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂತಹ ಹೃದಯ ಸಂಬಂಧಿ ಕಾಯಿಲೆಗಳೇ ಅಪಾಯಕಾರಿ. ಹೇಗೆ, ಎಲ್ಲಿ ಸಂಭವಿಸುತ್ತದೆ ಎಂದು ಹೇಳುವುದೇ ಅಸಾಧ್ಯ.

ಆದ್ರೆ, ಇಂತಹ ಅಪಾಯಕಾರಿ ಕಾಯಿಲೆಯನ್ನು ಕೇವಲ ಹಲ್ಲು ಉಜ್ಜುವ ವಿಧಾನದಿಂದ ದೂರ ಮಾಡಿಕೊಳ್ಳಬಹುದೆಂದು ನಿಮಗೆ ತಿಳಿದಿದೆಯೇ? ಹೌದು. ಜಾಸ್ತಿಯಾಗಿ ಹಲ್ಲುಗಳನ್ನು ಉಜ್ಜಿದರೆ ಹಾರ್ಟ್​ ಅಟ್ಯಾಕ್​ ಆಗುವ ಸಂಭವ ಕಡಿಮೆ ಎಂದು ದಕ್ಷಿಣ ಕೊರಿಯಾದಲ್ಲಿ ನಡೆದ ಸಂಶೋದನೆಯೊಂದು ತಿಳಿಸಿದೆ.

ಹಾಗಿದ್ರೆ, ಹೇಗೆ ಬ್ರೆಷ್ ಮಾಡಿದ್ರೆ ಉತ್ತಮ ಎಂಬುದನ್ನು ತಿಳಿಯೋಣ..ದಿನಕ್ಕೆ ಮೂರು ಅಥವಾ ಹೆಚ್ಚು ಬಾರಿ ಬ್ರಶ್ ಮಾಡುವುದರಿಂದ ಅಸಹಜ ಹೃದಯಬಡಿತ ಹಾಗೂ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಎಂದು ನಡೆದ ಅಧ್ಯಯನ ತಿಳಿಸಿದೆ.

ನಾವು ತಿಂದ ಆಹಾರಗಳು ಕೆಲವೊಮ್ಮೆ ಅಸಿಡಿಟಿ ಆಗುವ ಸಂಭವ ಹೆಚ್ಚು, ಇದರಿಂದಾಗಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ. ನಾವು ಜಾಸ್ತಿಯಾಗಿ ಬ್ರಶ್​ ಮಾಡಿದ್ರೆ ಬಾಯಿಯಲ್ಲಿನ ಚಯಾಪಚಯ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಸಿಡಿಟಿ ಕಡಿಮೆ ಆಗುತ್ತದೆ. ಹಾಗಾಗಿಯೇ ಹೃದಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಆದ್ರೆ, ನಿಮಗೆ ವಸುಡುಗಳ ತೊಂದರೆ ಇದ್ದಲ್ಲಿ ವೈದ್ಯರನ್ನು ಕಾಣಬೇಕು. ಇಲ್ಲದಿದ್ದಲ್ಲಿ ಬ್ರೆಶ್​ ಮಾಡುವಾಗ ವಸಡುಗಳಿಂದ ರಕ್ತ ಬರುತ್ತದೆ. ಹಾಗೆಯೇ ಧ್ಯಾನ, ಯೋಗ ಮತ್ತು ಸಂಜೆಯ ಹೊತ್ತಿನಲ್ಲಿ ಅಥವಾ ಬೆಳಗ್ಗಿನ ಜಾವ ಜಾಗಿಂಗ್​ ಮಾಡೋದ್ರಿಂದ ಈ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು ಎಂದು ಹಲವಾರು ಸಂಶೋಧನೆಯಲ್ಲಿ ತಿಳಿಸಲಾಗಿದೆ.