Home Health ನಿಮ್ಮ ಆರೋಗ್ಯ ವೃದ್ಧಿಗೆ ಸಹಾಯವಾಗುತ್ತೆ ಒಂದು ರೂಪಾಯಿಯ ನಾಣ್ಯ | ಹೇಗೆ ಅನ್ನೋ ಕುತೂಹಲ ಇರೋರಿಗೆ...

ನಿಮ್ಮ ಆರೋಗ್ಯ ವೃದ್ಧಿಗೆ ಸಹಾಯವಾಗುತ್ತೆ ಒಂದು ರೂಪಾಯಿಯ ನಾಣ್ಯ | ಹೇಗೆ ಅನ್ನೋ ಕುತೂಹಲ ಇರೋರಿಗೆ ಇಲ್ಲಿದೆ ಮಾಹಿತಿ!

Hindu neighbor gifts plot of land

Hindu neighbour gifts land to Muslim journalist

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ.

ಆದರೆ, ಇಂದಿನ ಆಹಾರ ಪದ್ಧತಿಯಿಂದ ಆರೋಗ್ಯವೆ ಹದಗೆಡುತಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಒಂದಲ್ಲ ಒಂದು ಸಮಸ್ಯೆಯಿಂದ ಪ್ರತಿಯೊಬ್ಬ ವ್ಯಕ್ತಿಯೂ ಬಳಲುತ್ತಿದ್ದಾರೆ. ಹೀಗಾಗಿ ಇದರಿಂದ ದೂರ ಸರಿಯಲು ಹಲವು ಔಷಧಿಗಳನ್ನು ಸೇವಿಸುತ್ತಾರೆ. ಆದರೂ ಕೆಲವೊಂದು ಕಾಯಿಲೆಗಳು ಕಡಿಮೆ ಆಗುವುದೇ ವಿರಳ..

ಮದ್ದಿನ ಮೂಲಕ ಗುಣ ಪಡಿಸಲಾಗದ ಅದೆಷ್ಟೋ ಕಾಯಿಲೆಗಳನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುಣಪಡಿಸಬಹುದಂತೆ. ಹೌದು. ಅನೇಕ ದಿನಗಳಿಂದ ಕಾಡುತ್ತಿರುವ ಅನಾರೋಗ್ಯದಿಂದ ಹೊರಬರಲು ಶಾಸ್ತ್ರದ ಕೆಲವೊಂದು ಉಪಾಯಗಳನ್ನು ಫಾಲೋ ಮಾಡಿ.

ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಮಾಡಬೇಕಾಗಿರುವುದು ಇಷ್ಟೇ.. ಆದಷ್ಟು ಬೇಗ ಆರೋಗ್ಯ ವೃದ್ಧಿಯಾಗಬೇಕೆಂದ್ರೆ ರಾತ್ರಿ ಒಂದು ರೂಪಾಯಿ ನಾಣ್ಯವನ್ನು ತಲೆ ಕೆಳಗಿಟ್ಟು ಮಲಗಿ. ಬೆಳಿಗ್ಗೆ ಎದ್ದ ತಕ್ಷಣ ನಾಣ್ಯವನ್ನು ಸ್ಮಶಾನಕ್ಕೆ ಎಸೆಯಿರಿ. ಹೀಗೆ ಮಾಡಿದ್ರೆ ಎಲ್ಲ ರೋಗ ದೂರವಾಗುತ್ತದೆ. ಹಾಗೆಯೇ ನೀವೂ ಮಲಗುವ ವೇಳೆ ತಲೆಯನ್ನು ಪೂರ್ವ ದಿಕ್ಕಿಗಿಟ್ಟು ಮಲಗಿ. ಒಂದು ಪಾತ್ರೆಯಲ್ಲಿ ಸೈಂಧವ ಲವಣ ಹಾಗೂ ಒಂದು ರೂಪಾಯಿ ನಾಣ್ಯವನ್ನು ಇಡಿ. ಇದು ನಿಮ್ಮ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.