Home Fashion ನೀವೂ ಕೂಡ ‘ಮೊಡವೆ’ ಸಮಸ್ಯೆಗೆ ಸೋತು ಹೋಗಿದ್ದೀರಾ? | ಈ ಸಮಸ್ಯೆಗೆ ಕಾರಣವೇನು? ಪರಿಹಾರ ಏನು...

ನೀವೂ ಕೂಡ ‘ಮೊಡವೆ’ ಸಮಸ್ಯೆಗೆ ಸೋತು ಹೋಗಿದ್ದೀರಾ? | ಈ ಸಮಸ್ಯೆಗೆ ಕಾರಣವೇನು? ಪರಿಹಾರ ಏನು ಎಂಬುದು ಇಲ್ಲಿದೆ ನೋಡಿ..

Hindu neighbor gifts plot of land

Hindu neighbour gifts land to Muslim journalist

‘ಅಂದ’ ಎನ್ನುವಂತದ್ದು ಪ್ರತಿಯೊಬ್ಬ ಮನುಷ್ಯನ ಆಕರ್ಷನೀಯ ಭಾಗವಾಗಿರುತ್ತದೆ. ಹೀಗಾಗಿ, ಪ್ರತಿಯೊಬ್ಬರು ಕೂಡ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಮುಖದಲ್ಲಿ ಒಂದು ಕಲೆಯೂ ಆಗದಂತೆ ಆರೈಕೆ ಮಾಡುತ್ತಾರೆ. ಆದ್ರೆ, ಹೆಚ್ಚಿನ ಜನರಿಗೆ ತೊಂದರೆ ಆಗಿರುವುದು ಅಂದ್ರೆ ಮೋಡವೆ ಸಮಸ್ಯೆ.

ಹೌದು. ಅದೆಷ್ಟೋ ಜನರಿಗೆ ಮೊಡವೆಯಿಂದಾಗಿ ಮುಖ ಮುಚ್ಚುವಂತೆ ಆಗಿದೆ. ಈ ಮೊಡವೆಗೆ ಕಾರಣವೆಂದರೆ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ಹಾಗೂ ಚರ್ಮದಲ್ಲಿನ ಎಣ್ಣೆ ಗ್ರಂಥಿಗಳ ಕಾರ್ಯ ಮತ್ತು ಬ್ಯಾಕ್ಟೀರಿಯಾದ ಸೋಂಕು. ಇಂತಹ ಮೊಡವೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಮತ್ತು ಇತರ ಸಾಮಾನ್ಯ ಚರ್ಮದ ಸಮಸ್ಯೆಗಳನ್ನು ವಿಶೇಷವಾಗಿ ಯುವಜನರು ಎದುರಿಸುತ್ತಾರೆ.

ಆದ್ರೆ, ಇಂತಹ ಸಮಸ್ಯೆ ದೂರ ಮಾಡಲು ಪರಿಹಾರ ನಾವು ಸೇವಿಸುವ ಆಹಾರವಾಗಿದೆ. ನಾವೂ ಯಾವ ಆಹಾರ ಸೇವಿಸುತ್ತೇವೆ ಅದರ ಮೇಲೆ ನಮ್ಮ ಸೌಂದರ್ಯ ನಿಂತಿರುತ್ತದೆ. ಹಾಗಿದ್ರೆ ಬನ್ನಿ ಯಾವ ಆಹಾರ ಸೇವಿಸುವ ಮೂಲಕ ಮೊಡವೆ ದೂರಗೊಳಿಸಬಹುದು. ಯಾವ ಆಹಾರದಿಂದ ಮೋಡವೆ ಹೆಚ್ಚಾಗುತ್ತೆ ಎಂಬುದನ್ನು ತಿಳಿಯೋಣ..

*ಎಣ್ಣೆ ಉತ್ಪನ್ನಗಳನ್ನು ಸೇವಿಸುವವರಿಗೆ ಮೊಡವೆಗಳ ಸಮಸ್ಯೆ ಹೆಚ್ಚು. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನೀವು ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು.

*ದಿನಕ್ಕೆ ಎರಡರಿಂದ ಮೂರು ಬಾರಿ ಮುಖವನ್ನು ಸೋಪಿನಿಂದ ತೊಳೆಯಿರಿ. ಮನೆಯಲ್ಲಿರುವ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಚರ್ಮವನ್ನು ಸ್ಕ್ರಬ್ ಮಾಡಬೇಕು.

*ತ್ವಚೆಗೆ ಬಳಸುವ ಮಾಸ್ಕ್, ಫೇಶಿಯಲ್, ಸ್ಕ್ರಬ್ಬಿಂಗ್ ಮತ್ತು ಕಾಸ್ಮೆಟಿಕ್ಸ್ ನಿಮ್ಮ ತ್ವಚೆಗೆ ಹೊಂದುವಂತಿದ್ದರೆ ಅವುಗಳನ್ನು ತಿಳಿದುಕೊಂಡು ಬಳಸುವುದು ಒಳ್ಳೆಯದು.

*ಮೊಡವೆ ಸಮಸ್ಯೆ ಇರುವವರು ಹೆಚ್ಚು ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಬೆವರು ಮತ್ತು ಮೂತ್ರದ ಮೂಲಕ ಹೊರಹೋಗಿ ದೇಹವನ್ನು ಹಗುರವಾಗಿ ಮತ್ತು ನಯವಾಗಿ ಮಾಡುತ್ತದೆ.

*ಹೆಚ್ಚು ಗ್ರೀನ್ಸ್, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಸಂಗ್ರಹಿಸಿಟ್ಟ ಆಹಾರವನ್ನು ಸೇವಿಸಬೇಡಿ. ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳನ್ನು ಕಡಿಮೆ ಮಾಡಬೇಕು.

*ಕೊಬ್ಬು, ಎಣ್ಣೆಯುಕ್ತ ಪದಾರ್ಥಗಳು ಮತ್ತು ಮಸಾಲೆಗಳನ್ನು ವಾರದಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಬೇಕು. ಕಡಲೆ ಹಿಟ್ಟಿನಿಂದ ಮುಖ ತೊಳೆಯುವುದು, ಕ್ರೀಂಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದು ಮುಂತಾದ ಕಾಳಜಿಯನ್ನು ತೆಗೆದುಕೊಳ್ಳಬೇಕು.

*ಅನಗತ್ಯ ಕ್ರೀಮ್ ಗಳನ್ನು ಹಚ್ಚಬೇಡಿ. ಇವು ಚರ್ಮದಲ್ಲಿರುವ ತೈಲ ಗ್ರಂಥಿಗಳನ್ನು ಮುಚ್ಚಿ ಮೊಡವೆಗಳನ್ನು ಉಲ್ಬಣಗೊಳಿಸುತ್ತವೆ. ಅಗತ್ಯ ಬಿದ್ದರೆ ಮಾತ್ರ ಮುಖಕ್ಕೆ ಮೇಕಪ್ ಮಾಡಿಕೊಳ್ಳಬೇಕು. ಮಲಗುವ ಮುನ್ನ ಮೇಕಪ್ ಅನ್ನು ಸಂಪೂರ್ಣವಾಗಿ ತೊಳೆಯಿರಿ.

*ನೀವು ಎಣ್ಣೆ ಮತ್ತು ಕ್ರೀಂಗಳನ್ನು ನಿಮ್ಮ ಕೂದಲಿಗೆ ಹಚ್ಚಿದರೆ, ಅವು ನಿಮ್ಮ ಮುಖದಾದ್ಯಂತ ಹರಡಿ ಮೊಡವೆ ಉಂಟಾಗಲು ಕಾರಣವಾಗಬಹುದು. ಪ್ರತಿನಿತ್ಯ ಸ್ನಾನ ಮಾಡುವುದರಿಂದ ಮುಖವನ್ನು ಎಣ್ಣೆಯಿಂದ ಮುಕ್ತವಾಗಿಡಬಹುದು.

*ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ತ್ವಚೆಯ ಸೌಂದರ್ಯವೂ ಸುಧಾರಿಸುತ್ತದೆ. ವ್ಯಾಯಾಮ ಕೂಡ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಸಲಹೆಗಳನ್ನು ಉಪಯೋಗಿಸುವದರ ಮೂಲಕ ಅರೋಗ್ಯದ ಜೊತೆಗೆ ಸೌಂದರ್ಯವನ್ನೂ ನಿಮ್ಮದಾಗಿಸಿಕೊಳ್ಳಿ…