Home Health Health Tips: ಆಯುರ್ವೇದದ ಈ ನಿಯಮ ನಿಮಗೆ ಗೊತ್ತಿದ್ದರೆ ಸಾಕು – ಎಂದಿಗೂ ನಿಮಗೆ ಹೃದಯಾಘಾತ...

Health Tips: ಆಯುರ್ವೇದದ ಈ ನಿಯಮ ನಿಮಗೆ ಗೊತ್ತಿದ್ದರೆ ಸಾಕು – ಎಂದಿಗೂ ನಿಮಗೆ ಹೃದಯಾಘಾತ ಆಗುವುದೇ ಇಲ್ಲ !!

Hindu neighbor gifts plot of land

Hindu neighbour gifts land to Muslim journalist

Health Tips: ಹೃದಯಘಾತ ಮೊದಲೆಲ್ಲ ಪ್ರಾಯ ಆದವರಿಗೆ ಬಂದೆರಗುತ್ತಿತ್ತು. ಆದರೆ ಇಂದು ಚಿಕ್ಕವರು, ದೊಡ್ಡವರು ಎಂದು ನೋಡದೆ ಎಲ್ಲರಿಗೂ ಇದು ಅಟ್ಯಾಕ್ ಆಗುತ್ತಿದೆ. ಹಾಗೆ ನೋಡಿದರೆ ಇಂದು ಯುವ ಜನರಿಗೇ ಹೆಚ್ಚು ಹೃದಯಾಘಾತ ಆಗುತ್ತಿದೆ ಎನ್ನಬಹುದು. ಆದರೆ ನಮ್ಮ ಆಯುರ್ವೇದದ ಈ ನಿಯಮಗಳು ನಿಮಗೆ ತಿಳಿತಿದ್ದರೆ ಸಾಕು ಎಂದಿಗೂ ಹೃದಯಾಘಾತ(hart attack)ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.

ನಿತ್ಯವೂ ವ್ಯಾಯಾಮ ಮತ್ತು ಯೋಗ ಮಾಡಿ :
ಆಯುರ್ವೇದದಲ್ಲಿ ಹೃದಯವನ್ನು ಆರೋಗ್ಯವಾಗಿಡಲು ನಿಯಮಿತ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಬಹಳ ಮುಖ್ಯ ಎಂದು ಹೇಳಿದ್ದಾರೆ. ಪ್ರತಿನಿತ್ಯ ಕೆಲವು ಸಮಯ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ಹೃದಯ ಸ್ನಾಯುಗಳು ಬಲಗೊಳ್ಳುತ್ತವೆ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಯೋಗ, ಪ್ರಾಣಾಯಾಮದಂತಹ ಚಟುವಟಿಕೆಗಳು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಇದು ಅಪಧಮನಿಗಳನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವು ಚಿಕ್ಕ ವಯಸ್ಸಿನಲ್ಲಿಯೇ ಕಡಿಮೆಯಾಗುತ್ತದೆ.

ಯಾವುದೇ ಸಮಯದಲ್ಲಿ ಆತಂಕ, ಒತ್ತಡ ಬೇಡ:
ಆತಂಕ, ಭಯ, ಖಿನ್ನತೆಯಂತಹ ಭಾವನೆಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಆದ್ದರಿಂದ ಆಯುರ್ವೇದದಲ್ಲಿ ಈ ನಕಾರಾತ್ಮಕ ಭಾವನೆಗಳನ್ನು ದೂರವಿಡಲು ಮತ್ತು ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಒತ್ತು ನೀಡಲಾಗಿದೆ. ಪ್ರತಿನಿತ್ಯ ಯೋಗ, ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಆಹಾರದಲ್ಲಿ ಸಮತೋಲನತೆ ಇರಲಿ:
ನಾವು ಸೇವಿಸುವ ಆಹಾರವು ನಮ್ಮ ಬದುಕಿನ ಶೈಲಿಯ ಬಗ್ಗೆ, ಆರೋಗ್ಯದ ಬಗ್ಗೆ ಹೆಚ್ಚು ಪರಿಣಾಮ ಬೀರುತ್ತದೆ. ಅಂತೆಯೇ ಹೃದಯವನ್ನು ಆರೋಗ್ಯವಾಗಿಡುವಲ್ಲಿ ಸಮತೋಲಿತ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆಯುರ್ವೇದದ ಪ್ರಕಾರ ನಮ್ಮ ದೈನಂದಿನ ಆಹಾರದಲ್ಲಿ ಸೊಪ್ಪು, ತರಕಾರಿಗಳು, ತಾಜಾ ಹಣ್ಣುಗಳು, ಧಾನ್ಯಗಳು, ಕಾಳುಗಳು ಮತ್ತು ನಟ್ಸ್‌ನಂತಹ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಸೇರಿಸಿಕೊಳ್ಳಬೇಕು. ಅಲ್ಲದೆ ಹೆಚ್ಚುವರಿ ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಸೇವನೆಯನ್ನು ಸೀಮಿತಗೊಳಿಸಬೇಕು.

ನಮ್ಮ ಆಯುರ್ವೇದ ಪದ್ಧತಿಯಲ್ಲಿ ಹೃದಯದ ಆರೋಗ್ಯ ಕಾಳಜಿಯ ಕುರಿತು ಹೇಳಿರುವ ಈ ಮೂರು ನಿಯಮಗಳನ್ನು ತಿಳಿದು ನೀವು ನಿತ್ಯವೂ ಪಾಲನೆ ಮಾಡುವುದರಿಂದ ಹೃದಯಾಘಾತವು ಎಂದಿಗೂ ನಿಮ್ಮ ಹತ್ತಿರ ಸುಳಿಯುವುದಿಲ್ಲ.