Home Health ಈ ಆಹಾರವನ್ನು ನೀವು ಸೇವಿಸುತ್ತಿದ್ರೆ ಇಂದೇ ನಿಲ್ಲಿಸಿ ; ಇಲ್ಲಂದ್ರೆ ಉಂಟಾಗಬಹುದು ಹೃದಯಾಘಾತ

ಈ ಆಹಾರವನ್ನು ನೀವು ಸೇವಿಸುತ್ತಿದ್ರೆ ಇಂದೇ ನಿಲ್ಲಿಸಿ ; ಇಲ್ಲಂದ್ರೆ ಉಂಟಾಗಬಹುದು ಹೃದಯಾಘಾತ

Hindu neighbor gifts plot of land

Hindu neighbour gifts land to Muslim journalist

ಹಾರ್ಟ್​ ಅಟ್ಯಾಕ್​  ಎಂಬುದು ಎಲ್ಲರಿಗೂ ತಿಳಿದಿರುವ ಕಾಯಿಲೆ ಎಂದೇ ಹೇಳಬಹುದು. ಯಾಕೆಂದ್ರೆ, ಇಂದಿನ ಕಾಲದಲ್ಲಿ ಯುವ ಜನತೆಯಿಂದ ಹಿಡಿದು ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂತಹ ಹೃದಯ ಸಂಬಂಧಿ ಕಾಯಿಲೆಗಳೇ ಅಪಾಯಕಾರಿ. ಹೇಗೆ, ಎಲ್ಲಿ ಸಂಭವಿಸುತ್ತದೆ ಎಂದು ಹೇಳುವುದೇ ಅಸಾಧ್ಯ.

ಅದರಲ್ಲೂ ಚಳಿಗಾಲದಲ್ಲಿ ಕೇಳುವುದೇ ಬೇಡ. ಎಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಲೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಇದೇ ಕಾರಣಕ್ಕೆ ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳಿಂದ ದೂರ ಇರಲೇಬೇಕು. ಹಾಗಿದ್ರೆ, ಬನ್ನಿ ಯಾವ ಆಹಾರದಿಂದ ದೂರ ಉಳಿಯುವುದು ಮುಖ್ಯ ಎಂಬುದನ್ನು ತಿಳಿದುಕೊಳ್ಳೋಣ..

ಹುರಿದ-ಕರಿದ ಆಹಾರ :
ಚಳಿಗಾಲದಲ್ಲಿ, ಮಸಾಲೆಯುಕ್ತ ಆಹಾರವನ್ನು ತಿನ್ನಬೇಕು ಎಂದು ಅನ್ನಿಸುತ್ತಿರುತ್ತದೆ. ಈ ಕಾರಣದಿಂದಾಗಿ ಚಳಿ ಹೆಚ್ಚಾಗುತ್ತಿದ್ದಂತೆಯೇ ಕರಿದ ಆಹಾರಗಳ ಬೇಡಿಕೆ ಕೂಡಾ ಹೆಚ್ಚುತ್ತದೆ. ಹೀಗೆ ಹೆಚ್ಚು ಹೆಚ್ಚು ಕರಿದ ಆಹಾರ ಪದಾರ್ಥಗಳನ್ನು, ಎನ್ನೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.

ಸಿಹಿ ವಸ್ತುಗಳು :
ಚಳಿಗಾಲದಲ್ಲಿ ಸಿಹಿ ಪದಾರ್ಥಗಳನ್ನು ಕೂಡಾ ಹೆಚ್ಚಾಗಿ ಸೇವಿಸಲಾಗುತ್ತದೆ. ಅದರಲ್ಲೂ ಕಾಫಿ, ಟೀಗೆ ಸ್ವಲ್ಪ ಹೆಚ್ಚೇ ಬೇಡಿಕೆ. ಇವುಗಳಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಹಾಗಾಗಿ ಈ ಆಹಾರ ಪಾನೀಯಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚು ಕಂಡುಬರುತ್ತದೆ. ಇದು ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಿಹಿ ತಿಂಡಿಗಳನ್ನು ದೂರವಿಟ್ಟರೆ ಒಳ್ಳೆಯದು.

ಕೆಂಪು ಮಾಂಸ :
ಮಾಂಸಾಹಾರಿಗಳು ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಮಾಂಸವನ್ನು ಸೇವಿಸುತ್ತಾರೆ. ಇದು ಕೊಲೆಸ್ಟ್ರಾಲ್‌ಗೆ ಒಳ್ಳೆಯದಲ್ಲ. ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮಾಂಸದ ಬದಲು ಕೋಳಿ ಅಥವಾ ಮೀನು ತಿನ್ನುವುದು ಒಳ್ಳೆಯದು.

ಇನ್ಸ್ಟಂಟ್ ಫುಡ್ :
ಇನ್ಸ್ಟಂಟ್ ಫುಡ್ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ ನಿಜ. ಆದರೆ ಈ ಆಹಾರವು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಇವುಗಳಲ್ಲಿ ಮೈದಾವನ್ನು ಬಳಸಲಾಗುತ್ತದೆ. ಇದು ಹೃದಯ ಮತ್ತು ರಕ್ತ ಪರಿಚಲನೆಗೆ ಹಾನಿ ಉಂಟು ಮಾಡುತ್ತದೆ.

ಚೀಸ್ ಮತ್ತು ಪನೀರ್ :
ಚೀಸ್‌ ಮತ್ತು ಪನೀರ್ ನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಆದರೆ ಅದರಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವೂ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ಚೀಸ್ ಮತ್ತು ಪನೀರ್ ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.