Home Health Male health: ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಕುಸಿತ- ಶಾಕ್ ನೀಡುತ್ತೆ ಈ ಕಾರಣ !!

Male health: ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಕುಸಿತ- ಶಾಕ್ ನೀಡುತ್ತೆ ಈ ಕಾರಣ !!

Male health

Hindu neighbor gifts plot of land

Hindu neighbour gifts land to Muslim journalist

Male Health: ಪುರುಷರ ವೀರ್ಯಾಣುವಿನ ಕುಸಿತಕ್ಕೆ ಬಹು ದೊಡ್ಡ ಕಾರಣವನ್ನು ಅಧ್ಯಯನವೊಂದು ಹೊರಹಾಕಿದೆ. ಹೌದು, ಮನೆ, ತೋಟಗಳಲ್ಲಿ ಬಳಸುವ ಮತ್ತು ಆಹಾರ ಪದಾರ್ಥಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಗಾಳಿಯನ್ನು ಉಸಿರಾಡುವುದರಿಂದ ವಿಶ್ವದಾದ್ಯಂತ ಪುರುಷರಲ್ಲಿ (Male Health) ವೀರ್ಯಾಣುವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಪುರುಷರಲ್ಲಿ ಬಂಜೆತನ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಪುರುಷರಲ್ಲಿ ಬಂಜೆತನಕ್ಕೆ ಪ್ರಪಂಚದಾದ್ಯಂತ ಬಳಸಲಾಗುವ 2 ಸಾಮಾನ್ಯ ಕೀಟನಾಶಕಗಳಾದ ಆರ್ಗನೊಫಾಸ್ಫೇಟ್​ ಮತ್ತು ಎನ್-ಮೀಥೈಲ್ ಕಾರ್ಬಮೇಟ್​ಗಳು ಕಾರಣ ಎಂದು ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್ಸ್ ಜರ್ನಲ್‌ನಲ್ಲಿ ಬುಧವಾರ ಪ್ರಕಟವಾದ ಈ ಅಧ್ಯಯನವು 2 ರಾಸಾಯನಿಕಗಳ ಕುರಿತು ವಿಶ್ವದಾದ್ಯಂತ 25 ಅಧ್ಯಯನಗಳನ್ನು ನಡೆಸಿರುವುದಾಗಿ ತಿಳಿಸಿದೆ.

ಅಲ್ಲದೇ ವರ್ಜೀನಿಯಾದ ಫೇರ್‌ಫ್ಯಾಕ್ಸ್‌ನಲ್ಲಿರುವ ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಹಾಗೂ ಹಿರಿಯ ಲೇಖಕಿ ಮೆಲಿಸ್ಸಾ ಪೆರ್ರಿ ಈ ಬಗ್ಗೆ ಮಾಹಿತಿ ನೀಡಿದ್ದು, “50 ವರ್ಷಗಳ ಅವಧಿಯಲ್ಲಿ ಪುರುಷರ ವೀರ್ಯದ ಸಾಂದ್ರತೆಯು ಪ್ರಪಂಚದಾದ್ಯಂತ ಸುಮಾರು ಶೇ. 50ರಷ್ಟು ಕುಸಿದಿದೆ” ಎಂದು ಹೇಳಿದ್ದಾರೆ.

ಆರ್ಗನೋಫಾಸ್ಫೇಟ್​ಗಳು ಯಾವುದು ಅಂದರೆ : ನರದ ಗ್ರಾಸ್, ಸಸ್ಯನಾಶಕಗಳು, ಕೀಟನಾಶಕಗಳು. ಇದರಿಂದ ಪುರುಷರಲ್ಲಿ ಫರ್ಟಿಲಿಟಿ ಕಡಿಮೆಯಾಗುತ್ತಿದ್ದು, ಮಕ್ಕಳಾಗುವ ಸಾಧ್ಯತೆಯೂ ಕ್ಷೀಣಿಸುತ್ತಿದೆ ಎಂದು ಅಧ್ಯಯನಕಾರರು ಕಂಡು ಕೊಂಡಿದ್ದಾರೆ.

ಅಧ್ಯಯನದ ಪ್ರಕಾರ, ಆರ್ಗನೋಫಾಸ್ಫೇಟ್‌ಗಳು ಮತ್ತು ಎನ್-ಮೀಥೈಲ್ ಕಾರ್ಬಮೇಟ್‌ಗಳ ಸಂಪರ್ಕಕ್ಕೆ ಬರುವ ಕೃಷಿಯಲ್ಲಿ ಕೆಲಸ ಮಾಡುವ ಮತ್ತು ಹೆಚ್ಚಿನ ಮಟ್ಟದ ಕೀಟನಾಶಕಗಳಿಗೆ ಒಡ್ಡಿಕೊಂಡ ಪುರುಷರಲ್ಲಿ ವೀರ್ಯದ ಸಾಂದ್ರತೆ ಗಮನಾರ್ಹವಾಗಿ ಕಡಿಮೆಯಾಗಿದೆ.

ಈ ಬಗ್ಗೆ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು, ವೃಷಣ ಕೋಶಗಳನ್ನು ಹಾನಿಗೊಳಿಸುವುದರ ಮೂಲಕ ಮತ್ತು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮೆದುಳಿನ ನರಪ್ರೇಕ್ಷಕಗಳನ್ನು ಬದಲಾಯಿಸುವ ಮೂಲಕ ವೀರ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವು ತಿಳಿಸಿದೆ.

ಇದನ್ನೂ ಓದಿ: ಹಿಂಬದಿ ಆಗೋ ಮೊಡವೆ, ಕಜ್ಜಿಗಳಿಂದ ರೋಸಿ ಹೋಗಿದ್ದೀರಾ ? ಇಲ್ಲಿದೆ ಸುಲಭ ಪರಿಹಾರ