Home Health ಸೆಕ್ಸ್‌ ಮಾಡಲು ಕರೆಕ್ಟ್‌ ಟೈಮ್‌ ಯಾವುದು ಗೊತ್ತೇ? ಈ ಸುದ್ದಿ ಓದಿ

ಸೆಕ್ಸ್‌ ಮಾಡಲು ಕರೆಕ್ಟ್‌ ಟೈಮ್‌ ಯಾವುದು ಗೊತ್ತೇ? ಈ ಸುದ್ದಿ ಓದಿ

Hindu neighbor gifts plot of land

Hindu neighbour gifts land to Muslim journalist

ಆರೋಗ್ಯಕರ ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳುವುದು ಸಂಬಂಧದ ಪ್ರಮುಖ ಭಾಗವಾಗಿದೆ. ಸಾರ್ಥಕ ಲೈಂಗಿಕ ಜೀವನ ದಂಪತಿಗಳ ಸಂಬಂಧವನ್ನು ಬಲಪಡಿಸಲು ಮತ್ತು ಅವರ ನಡುವೆ ಬಾಂಧವ್ಯ ಬೆಸೆಯಲು ಸಹಾಯವಾಗುತ್ತದೆ.
ಲೈಂಗಿಕತೆ ಜೀವನದ ಅತೀ ಮುಖ್ಯ ಭಾಗ. ಲೈಂಗಿಕತೆ ಎನ್ನುವುದು ಪ್ರಾಣಿ, ಪಕ್ಷಿ, ಮಾನವರಿಗೆ ಅದೊಂದು ಮಧುರ ಸಮಯ. ಇಲ್ಲಿ ಪ್ರಪಂಚದ ಪರಿವೇ ಇಲ್ಲದಂತೆ ಗಂಡು ಹೆಣ್ಣು ಮೈಮರೆತು ಪ್ರಕೃತಿ ಸೃಷ್ಟಿಗೆ ಶರಣಾಗುವ ಸುಮಧುರ ಗಳಿಗೆ. ಆದರೆ ಎಲ್ಲಾದಕ್ಕೂ ಒಂದು ಸೂಕ್ತ ಸಮಯ ಇದ್ದೇ ಇರುತ್ತದೆ. ಈ ಸಮಯ ಎಲ್ಲರಿಗೂ ಅನ್ವಯಿಸುವುದಿಲ್ಲ. ಬದಲಿಗೆ ದಂಪತಿಗಳಿಗೆ ಮಾತ್ರ. ಯಾರು ಮಕ್ಕಳ ಭಾಗ್ಯ ಪಡೆಯಲು ಹವಣಿಸುತ್ತಿರುತ್ತಾರೋ ಅವರಿಗೆ ಈ ಮಾಹಿತಿ ಅನ್ವಯ ಆಗಬಹುದು.

ಲೈಂಗಿಕ ಕ್ರಿಯೆ ನಡೆಸಲು ಉತ್ತಮ ಸಮಯ ಬೆಳಿಗ್ಗೆ 5.48 ಆಗಿದೆ. ಹೌದು.. ಲೈಂಗಿಕ ಕ್ರಿಯೆ ನಡೆಸಲು ಈ ಸಮಯ ಸೂಕ್ತವಾಗಿದೆ. ಯಾಕೆಂದರೆ ಇಟಾಲಿಯನ್ ಸಂಶೋಧಕರ ಪ್ರಕಾರ, ಪುರುಷರು ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಬೆಳಿಗ್ಗೆ ಅತ್ಯಧಿಕವಾಗಿದೆಯಂತೆ. ಇಬ್ಬರಲ್ಲಿಯೂ ಈ ಸಮಯದಲ್ಲಿ ಶಕ್ತಿಯ ಮಟ್ಟಗಳು ಅತ್ಯಧಿಕವಾಗಿರುತ್ತದೆ. ಆದ್ದರಿಂದ ಇದು ಪರಿಪೂರ್ಣ ಸಮಯ ಎಂದು ʼಸೆಕ್ಸ್ ಥೆರಪಿಸ್ಟ್ ಜೆರಾಲ್ಡೈನ್ ಮೈಯರ್ಸ್ ಡೈಲಿ ಮೇಲ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಒಬ್ಬ ವ್ಯಕ್ತಿ ಬೆಳಿಗ್ಗೆ ಕಣ್ಣು ತೆರೆಯುವ ಮುಂಚೆಯೇ, ಅವನ ಟೆಸ್ಟೋಸ್ಟೆರಾನ್ ಮಟ್ಟವು ಉತ್ತುಂಗದಲ್ಲಿರುತ್ತದೆ. ದಿನದ ಯಾವುದೇ ಸಮಯಕ್ಕಿಂತ 25 ಪ್ರತಿಶತದಿಂದ 50 ಪ್ರತಿಶತದಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿದು ಬಂದಿದೆ.

ಅಧ್ಯಯನ ಪ್ರಕಾರ ಪುರುಷರು ವಾರಕ್ಕೆ ಎರಡರಿಂದ ಮೂರು ಬಾರಿ ನಿಮಿರುವಿಕೆಯೊಂದಿಗೆ ಎಚ್ಚರಗೊಳ್ಳುತ್ತಾರೆ” ಎಂದು ಲಂಡನ್‌ನ ಸೇಂಟ್ ಬಾರ್ತಲೋಮ್ಯೂಸ್ ಆಸ್ಪತ್ರೆಯ ನ್ಯೂರೋಎಂಡೋಕ್ರೈನಾಲಜಿ ಪ್ರಾಧ್ಯಾಪಕ ಆಶ್ಲೇ ಗ್ರಾಸ್‌ಮನ್ ಹೇಳಿದ್ದಾರೆ.

ಒಟ್ಟಿನಲ್ಲಿ ಬೆಳಿಗ್ಗೆ 5.48 ಲೈಂಗಿಕತೆಗೆ ಉತ್ತಮ ಸಮಯ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.