

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳ ಕಣಜವಾಗಿದ್ದು, ಹಲವು ರೋಗಗಳಿಗೆ ಇದು ರಾಮಬಾಣವಾಗಿದೆ. ಮೀನಿನ ಎಣ್ಣೆಯನ್ನು ಕೆಲವು ರೀತಿಯ ಮೀನುಗಳ ಒಮೆಗಾ -3 ಕೊಬ್ಬಿನಾಮ್ಲಗಳು ದೇಹಕ್ಕೆ ಅತ್ಯಗತ್ಯವಾದ ಕೊಬ್ಬಿನಾಮ್ಲಗಳಾಗಿವೆ. ಆದರೆ ಅದು ಮಾನವ ದೇಹದಲ್ಲಿ ಸ್ವಂತವಾಗಿ ಉತ್ಪಾದನೆಯಾಗುವುದಿಲ್ಲ. ಆದ್ದರಿಂದ ಈ ಅಗತ್ಯ ಕೊಬ್ಬಿನಾಮ್ಲದ ಬಾಹ್ಯ ಮೂಲಗಳನ್ನು ನಾವು ನಮ್ಮ ಆಹಾರದ ಮೂಲಕ ಅಥವಾ ಆಹಾರ ಪೂರಕಗಳ ಮೂಲಕ ಅವಲಂಬಿಸಬೇಕಾಗಿದೆ.
ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮತ್ತು ಹೃದಯ ಕಾಯಿಲೆಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿರುವ ಒಮೆಗಾ -3 ಕೊಬ್ಬಿನಾಮ್ಲ , ನಕಾರಾತ್ಮಕ ಪರಿಣಾಮವನ್ನು ಸಮತೋಲನಗೊಳಿಸಲು ಕೂಡ ಸಹ ಸಹಾಯ ಮಾಡುತ್ತದೆ. ಮೀನಿನ ಎಣ್ಣೆ ಸೇವನೆ ಮಾಡುವುದರಿಂದ, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಹೃದಯಘಾತದಿಂದ ತಪ್ಪಿಸಿಕೊಳ್ಳಬಹುದು. ಮೀನಿನ ಎಣ್ಣೆಯಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಗಳು ನಮ್ಮ ಮೆದುಳಿನ ಕಾರ್ಯಚಟುವಟಿಕೆಗೆ ಸಹಕಾರಿಯಾಗಿದೆ. ಅಲ್ಲದೆ ಮಾನಸಿಕ ಕಾಯಿಲೆಗಳನ್ನು ತಡೆಯಲು ಮೀನಿನ ಎಣ್ಣೆ ಸಹಕಾರಿಯಾಗಿದೆ.
ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಇಂಥವರು ಮೀನಿನ ಎಣ್ಣೆಯನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಅಸ್ತಮಾ ಎನ್ನುವುದು ಉಸಿರಾಟದ ಸಮಸ್ಯೆಯಾಗಿದ್ದು, ಶೀತ, ಕೆಮ್ಮಿನ ತೊಂದರೆಗಳನ್ನು ಪ್ರಚೋದಿಸುತ್ತದೆ. ಒಮೆಗಾ -3 ಉಸಿರಾಟ ಮಾರ್ಗಗಳ ಉರಿಯೂತಕ್ಕೆ ಸಹಾಯ ಮಾಡುವುದರಿಂದ, ತಜ್ಞರ ಪ್ರಕಾರ ಈ ಸಾರಭೂತ ಆಮ್ಲವನ್ನು ಹೊಂದಿರುವ ಆಹಾರವು ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ ಎಂದು ನಂಬಲಾಗಿದೆ.
ಕೂದಲಿನ ಬೆಳವಣಿಗೆಗೆ ಬೇಕಾಗುವ ಒಮೆಗಾ 3 ಕೊಬ್ಬಿನಂಶ ಮೀನಿನೆಣ್ಣೆಯಲ್ಲಿದ್ದು, ಕೂದಲಿನ ಫಾಲಿಸೆಲ್ಸ್ ಗಳಿಗೆ ಪೋಷಕಾಂಶ ದೊರೆತು ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಬುರುಡೆಯ ರಕ್ತಸಂಚಾರಕ್ಕೂ ಅನುವು ಮಾಡಿಕೊಡುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಆಲಿವ್ ಎಣ್ಣೆ ಜೊತೆ ಬೆರೆಸಿ ತಲೆಗೆ ಹಚ್ಚಿಕೊಂಡರೂ ಕೂಡ ಕೂದಲು ದಪ್ಪವಾಗಿ ಬೆಳೆಯುತ್ತದೆ.
ಮೀನು ಸೇವನೆ ಮಾಡುವುದರಿಂದ ದೇಹಕ್ಕೆ ವಿಟಮಿನ್ ಎ ದೊರಕುತ್ತದೆ. ಹೀಗಾಗಿ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದೇ ರೀತಿ ಮೀನಿನಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ವಯಸ್ಸಾದಂತೆ ಕಣ್ಣಿಗೆ ಪೊರೆ ಬರುವುದು, ಕಣ್ಣು ಕಾಣಿಸದಂತೆ ಆದವರಿಗೆ ಕಣ್ಣಿಗೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸಿ ಕಣ್ಣಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಮೀನಿನ ಎಣ್ಣೆ ಬಳಕೆ ಮಾಡುವುದರಿಂದ ಬ್ರೆಸ್ಟ್ ಕ್ಯಾನ್ಸರ್, ಪ್ರೋಸ್ಟೇಟ್ ಕ್ಯಾನ್ಸರ್ ನಂತ ವಿವಿಧ ಕ್ಯಾನ್ಸರ್ ಗಳ ನಿವಾರಣೆಗೆ ಫಿಶ್ ಆಯಿಲ್ ಸಹಕಾರಿಯಾಗಿದೆ.
ಬಿಪಿ ರೋಗಿಗಳು ಮತ್ತು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿರುವವರು ಇದನ್ನು ಸೇವಿಸದಿರುವುದು ಒಳ್ಳೆಯದು.













