Home Food Broiler chicken: ಚಿಕನ್ ಇಷ್ಟ ಎಂದು ಹೆಚ್ಚು ಬ್ರಾಯ್ಲರ್ ಕೋಳಿ ತಿಂತೀರಾ ?! ಹಾಗಿದ್ರೆ ಈ...

Broiler chicken: ಚಿಕನ್ ಇಷ್ಟ ಎಂದು ಹೆಚ್ಚು ಬ್ರಾಯ್ಲರ್ ಕೋಳಿ ತಿಂತೀರಾ ?! ಹಾಗಿದ್ರೆ ಈ ವಿಡಿಯೋ ನಿಮಗಾಗಿ

Broiler chicken

Hindu neighbor gifts plot of land

Hindu neighbour gifts land to Muslim journalist

Broiler chicken: ಮಾಂಸಪ್ರಿಯರಲ್ಲಿ ಹೆಚ್ಚಿನವರಿಗೆ ಕೋಳಿ ಮಾಂಸ ಎಂದರೆ ಬಲು ಪ್ರೀತಿ. ಅಗ್ಗದ ಬೆಲೆಗೆ ಹಾಗೂ ಸುಲಭವಾಗಿ ಸಿಗುವಂತಹ ಮಾಂಸ ಎಂದರೆ ಅದು ಕೋಳಿಮಾಂಸ. ಅದರಲ್ಲೂ ಹೆಚ್ಚಿನವರು ಬ್ರಾಯ್ಲರ್ ಕೋಳಿಯ(Broiler chicken) ಮಾಂಸವನ್ನೇ ಹೆಚ್ಚು ತಿನ್ನುವುದು. ಬೇಗ ಬೇಯುವುದು ಹಾಗೂ ಕಡಿಮೆ ಬೆಲೆಗೆ ಕೈಗೆಟುಕುವುದರಿಂದ ಹಲವರಿಗೆ ಇದು ಇಷ್ಟ. ಆದರೆ ಈ ಬ್ರಾಯ್ಲರ್ ಕೋಳಿ ಎಷ್ಟು ಡೇಂಜರ್ ಅನ್ನೋದು ನಿಮಗೆ ಗೊತ್ತಾ?!

ಚಿಕನ್ ಪ್ರಿಯರಲ್ಲಿ ಹೆಚ್ಚಿನವರು ಬ್ರಾಯ್ಲರ್ ಕೋಳಿಗೆ ಮಾರುಹೋಗಿದ್ದರೆ. ವಾರದಲ್ಲಿ ಎರಡು ಮೂರು ಬಾರಿ ತಂದು ಕಬಾಬ್, ಬಿರಿಯಾನಿ, ಪ್ರೈ ಆದಿಯಾಗಿ ಬಗೆಬಗೆಯ ಖಾದ್ಯ ಮಾಡಿ ತಿನ್ನುತ್ತಾರೆ. ಆದರೆ ಈ ಕೋಳಿ ಹೇಗೆ ಬೆಳೆಯುತ್ತೆ ಗೊತ್ತಾ? ಯಾಕೆ ಈ ವಿಚಿತ್ರವಾದ ಪ್ರಶ್ನೆ ಎಂದರೆ ಈ ಬ್ರಾಯ್ಲರ್ ಕೋಳಿ ಮೊಟ್ಟೆಯನ್ನೇ ಇಡುವುದಿಲ್ಲ !! ಇದರ ಬೆಳವಣಿಗೆ ಎಲ್ಲವೂ ವಿಚಿತ್ರವಾದದ್ದು.

ಇದನ್ನು ಓದಿ: Sea ​​wave: ಸಮುದ್ರದಲ್ಲಿ ಅಲೆಗಳು ಹೇಗೆ ಉಂಟಾಗುತ್ತವೆ ಗೊತ್ತಾ?!

ಹೌದು, ಬೇರೊಂದು ಕೋಳಿ ಮಟ್ಟೆಯ ಮೂಲಕ ಮರಿ ಮಾಡಿಸಿ ನಂತರ ಅದು ಬೇಗ ಬೆಳೆಯಲಿ ಎಂದು ಪ್ರತೀ ಮರಿಗೂ ಆಂಟಿ ಬಯೋಟಿಕ್ಸ್ ಅಥವಾ ಹಾರ್ಮೋನ್ ಇಂಜೆಕ್ಷನ್ ನೀಡುತ್ತಾರೆ. ಇದರಿಂದ ಪುರುಷರಲ್ಲಿ ದುರ್ಬಲತೆ, ಮಹಿಳೆಯರಿಗೆ ಮುಟ್ಟಿನ ಸಮಸ್ಯೆ, ಬೊಜ್ಜು ಹೆಚ್ಚಾಗುವ ಸಮಸ್ಯೆಗಳು ಎದುರಾಗುತ್ತವೆ. ಒಟ್ಟಾರೆ ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಇದು ಅಪಾಯಕಾರಿಯಾಗಿದೆ.