Home Food ಭಾರತದ ಫೇಮಸ್ ತಿಂಡಿಯ ಹೆಸರನ್ನು ತಮ್ಮ ಮಗುವಿಗಿಟ್ಟ ಫಾರಿನ್ ದಂಪತಿಗಳು

ಭಾರತದ ಫೇಮಸ್ ತಿಂಡಿಯ ಹೆಸರನ್ನು ತಮ್ಮ ಮಗುವಿಗಿಟ್ಟ ಫಾರಿನ್ ದಂಪತಿಗಳು

Hindu neighbor gifts plot of land

Hindu neighbour gifts land to Muslim journalist

ಭಾರತದಲ್ಲಿ ಮಗು ಹುಟ್ಟಿದ ಕೂಡಲೇ ಹೆಸರನ್ನಿಡುವುದಿಲ್ಲ. ಶಾಸ್ತ್ರ, ಜಾತಕ, ನಕ್ಷತ್ರಗಳನ್ನು ನೋಡಿ, ಎರಡು ತಿಂಗಳ ನಂತರವೋ ಅಥವಾ 15 ದಿನ, ಮೂರು ತಿಂಗಳು ಹೀಗೆ ಒಳ್ಳೆಯ ಸಮಯ ನೋಡಿ ಮಗುವಿಗೆ ಹೆಸರಿಡುತ್ತಾರೆ. ಆದರೆ ಇಲ್ಲೊಂದು ಕಡೆ ದಂಪತಿಗಳು ಭಾರತದ ತಿಂಡಿಗೆ ಮಾರು ಹೋಗಿ ತಿಂಡಿ ಹೆಸರನ್ನೇ ಇಟ್ಟಿದ್ದಾರೆ. ಹೌದು, ಐರ್ಲೆಂಡ್‌ನಲ್ಲಿ ಭಾರತದ ತಿನಿಸಿಗೆ ಮಾರುಹೋದ ದಂಪತಿ ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ.

ಐರ್ಲೆಂಡ್‌ನ (Irlend)ಪ್ರಖ್ಯಾತ ರೆಸ್ಟೋರೆಂಟ್ ನ್ಯೂ ಟೌನ್ ಅಬ್ಬೆ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹಂಚಿಕೊಂಡಿದೆ. ಮಗುವಿಗೆ ಪಕೋಡಾ ಎಂದು ಹೆಸರಿಟ್ಟ ದಂಪತಿ ಈ ಹೋಟೇಲ್‌ಗೆ ದಿನಾ ಬಂದು ಪಕೋಡಾ ಆರ್ಡರ್ ಮಾಡುತ್ತಿದ್ದರಂತೆ. ಹೊಟೇಲ್‌ಗೆ ಹೋದಾಗಲೆಲ್ಲಾ ಈ ದಂಪತಿ ತಮ್ಮಿಷ್ಟದ ಹಲವು ಪಕೋಡಾಗಳನ್ನೇ ಆರ್ಡರ್ ಮಾಡುತ್ತಿದ್ದರಂತೆ. ಹಾಗಾಗಿ ಪಕೋಡಾ ಮೇಲಿನ ಪ್ರೇಮವನ್ನು ಒಂದು ಹಿಡಿ ಜಾಸ್ತಿಯೇ ತೋರಿಸಿರುವ ಈ ದಂಪತಿ ಈಗ ತಮಗೆ ಜನಿಸಿದ ನವಜಾತ ಶಿಶುವಿಗೆ ಪಕೋಡಾ ಎಂದು ಹೆಸರಿಟ್ಟು, ತಮ್ಮ ಪಕೋಡಾ ಮೇಲಿನ ಪ್ರೇಮವನ್ನು ನಿಜ ಮಾಡಿದ್ದಾರೆ.

ಹೆಚ್ಚಾಗಿ ಪೋಷಕರು ಮಗುವಿನ ಹೆಸರಿಡುವ ಸಮಯದಲ್ಲಿ ತುಂಬಾ ಯೋಚನೆ ಮಾಡಿ ಸಮಯ ತಗೊಂಡು ಗೂಗಲ್‌ನಲ್ಲಿ ಸರ್ಚ್ ಮಾಡಿ ಬಂಧುಗಳು ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಬಳಿ ಕೇಳಿ ಸುಂದರವಾದ ಹೆಸರಿಡುತ್ತಾರೆ. ಕೆಲವೊಮ್ಮೆ ಇದಕ್ಕೆ ಗಂಡ ಹೆಂಡಿರ (Husband Wife) ಮಧ್ಯೆ ಸಣ್ಣ ಸಣ್ಣ ಜಗಳ ಕೂಡಾ ಆಗುವುದುಂಟು. ಹೆಣ್ಣಿನ (ತಾಯಿ) ಕಡೆಯವರು ಹೇಳಿದ ಹೆಸರು ಬೇಡ ಎಂದು ಮಗುವಿನ ಅಪ್ಪನ ಕಡೆಯ ವಾದ, ಅಪ್ಪನ ಕಡೆಯದು ಬೇಡ ಎಂದು ಅಮ್ಮನ ಕಡೆಯವರ ವಾದ ಹೀಗೆ ಸಣ್ಣದೊಂದು ಹೆಸರಿಡುವುದಕ್ಕೂ ಸಾವಿರ ಬಾರಿ ಸಾವಿರ ರೀತಿಯಲ್ಲಿ ಮಾತುಕತೆ ನಡೆಯುತ್ತದೆ.

ಹಾಗಿದ್ರೂ ಈ ತಿಂಡಿಯ ಹೆಸರನ್ನಿಟ್ಟ ಈ ದಂಪತಿಗಳಿಗೆ ನಿಜವಾಗಲೂ ಭಾರತದ ಮೇಲಿನ ವ್ಯಾಮೋಹ ಹೆಚ್ಚೇ ಎಂದು ಹೇಳಬಹುದು.