Home Food ಕಿವಿ ನೋವು, ಮೈಕೈ ನೋವಿಗೆ ಆಯುರ್ವೇದದಲ್ಲಿದೆ ಸೂಪರ್ ಮನೆಮದ್ದು!

ಕಿವಿ ನೋವು, ಮೈಕೈ ನೋವಿಗೆ ಆಯುರ್ವೇದದಲ್ಲಿದೆ ಸೂಪರ್ ಮನೆಮದ್ದು!

Hindu neighbor gifts plot of land

Hindu neighbour gifts land to Muslim journalist

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ.

ಇಂತಹ ಹಲವು ಆರೋಗ್ಯ ಸಮಸ್ಯೆಗಳಲ್ಲಿ ಕಿವಿನೋವು ಕೂಡ ಒಂದು. ಬಹುಶಃ ಕಿವಿ ನೋವಿನ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಯಾಕಂದ್ರೆ, ಕಿವಿನೋವು ಶುರುವಾದ್ರೆ ಮಲಗುವುದು ಕೂಡ ಅಸಾಧ್ಯ. ಅಷ್ಟು ನೋವಿನಿಂದ ಬಳಲುತ್ತಿರುತ್ತೇವೆ. ಇಂತಹ ನೋವುಗಳು ಕಾಣಿಸಿಕೊಂಡಾಗ ಹಾಸ್ಪಿಟಲ್ ಗೆ ತೆರಳಿ ಇಂಗ್ಲಿಷ್ ಮದ್ದು ಖರೀದಿಸುತ್ತಾರೆ. ಆದ್ರೆ, ಈ ಆಯುರ್ವೇದಿಕ್‌ ಮನೆಮದ್ದಿನಲ್ಲಿ ಕಿವಿನೋವು ನಿವಾರಣೆಯಾಗುವ ಶಕ್ತಿ ಇದೇ ಎಂಬುದು ಅನೇಕರಿಗೆ ತಿಳಿಯದ ಸಂಗತಿಯಾಗಿದೆ.

ಹೌದು. ಸಾಸಿವೆ ಎಣ್ಣೆಯು ಕಿವಿ ನೋವಿನ ಸಮಸ್ಯೆಯನ್ನು ಮಾತ್ರವಲ್ಲದೆ ದೇಹದ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಕಿವಿ ನೋವು ಅಥವಾ ಸೋಂಕು ಇದ್ದರೆ, ಚೆನ್ನಾಗಿ ಕಿವಿ ಕೇಳದಿದ್ದರೆ ಸ್ನಾನ ಮಾಡುವ ಮೊದಲು ಕಿವಿಗೆ ಸಾಸಿವೆ ಎಣ್ಣೆಯನ್ನು ಪ್ರತಿದಿನ ಹಾಕಿ. ಇದರಿಂದ ಶ್ರವಣ ಶಕ್ತಿಯೂ ಹೆಚ್ಚುತ್ತದೆ. ಕಿವಿಯಲ್ಲಿನ ಸೋಂಕು ಮತ್ತು ನೋವು ಕಡಿಮೆಯಾಗುತ್ತದೆ.

ಸಾಸಿವೆ ಎಣ್ಣೆಯ ಇತರ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಯಾರಾದರೂ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಸಾಸಿವೆ ಪೇಸ್ಟ್ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಎರಡು ಭಾಗ ಸಾಸಿವೆ ಮತ್ತು ಒಂದು ಭಾಗ ಒಣ ಶುಂಠಿಯನ್ನು ಬೆರೆಸಿ ನುಣ್ಣಗೆ ರುಬ್ಬಿ ಬಾಧಿತ ಜಾಗಕ್ಕೆ ಮಸಾಜ್ ಮಾಡಿ. ಇದರಿಂದ ರೋಗಿಗೆ ಸಾಕಷ್ಟು ಅನುಕೂಲವಾಗುತ್ತದೆ.

ಚಿಕ್ಕ ಮಕ್ಕಳಿಗೆ ಸಾಸಿವೆ ಎಣ್ಣೆಯಲ್ಲಿ ಕೇಸರಿ ಮತ್ತು ಕರ್ಪೂರ ಬೆರೆಸಿ ಮಸಾಜ್ ಮಾಡಿ. ಇದರಿಂದ ಅವರ ಮೂಳೆಗಳು ಬಲಗೊಳ್ಳುತ್ತವೆ ಮತ್ತು ನೋವು ಕೂಡ ದೂರವಾಗುತ್ತದೆ. ಮೈಕೈ ನೋವಿನಿಂದ ಬಳಲುತ್ತಿರುವವರು ಸಾಸಿವೆ, ವಿನೋಲಾ, ಒಣ ಶುಂಠಿ ಮತ್ತು ಓಮವನ್ನು ಕಲ್ಲು ಉಪ್ಪಿನೊಂದಿಗೆ ಬಿಸಿ ಮಾಡಿ. ನೋವಿರುವ ಸ್ಥಳದಲ್ಲಿ ಅದರಿಂದ ಶಾಖ ಕೊಟ್ಟುಕೊಂಡರೆ ಕೆಲವೇ ದಿನಗಳಲ್ಲಿ ನೋವು ನಿವಾರಣೆಯಾಗುತ್ತದೆ. ಆನೆಕಾಲು ರೋಗಕ್ಕೂ ಸಾಸಿವೆ ಎಣ್ಣೆಯಲ್ಲಿ ಚಿಕಿತ್ಸೆಯಿದೆ. ಸಾಸಿವೆ ಎಣ್ಣೆಯಲ್ಲಿ ಗೋಮೂತ್ರವನ್ನು ಬೆರೆಸಿ ಮಸಾಜ್ ಮಾಡಬೇಕು. ಇದರಿಂದ ಆನೆಕಾಲು ಬಾಧೆ ಕಡಿಮೆಯಾಗುತ್ತದೆ.